ವಾಲ್ಮೀಕಿ ಜನಾಂಗದ ಇನ್ನಿಬ್ಬರು ಮಂತ್ರಿಯಾಗಬೇಕು : ಶ್ರೀಗಳು

0
107

ಪಾವಗಡ

ವಾಲ್ಮೀಕಿ ಸಮುದಾಯ ಸಂವಿಧಾನ ಬದ್ದ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಹರಿಹರ ತಾಲ್ಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠಾಧ್ಯಕ್ಷರಾದ ಶ್ರೀ ವಾಲ್ಮೀಕಿಪ್ರಸನ್ನಾನಂದಪುರಿ ಸ್ವಾಮೀಜಿ ತಿಳಿಸಿದರು.ಭಾನುವಾರ ಪಟ್ಟಣದ ಎಸ್‍ಎಸ್‍ಕೆ ಬಯಲು ರಂಗಮಂದಿರದಲ್ಲಿ ಗಿರಿಜನ ನಾಯಕ ನೌಕರರ ಕ್ಷೇಮಾಭಿವೃದ್ದಿ ಸಂಘದಿಂದ ಹಮ್ಮಿಕೊಂಡಿದ್ದ 5 ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿದ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು. ದೇಶದಲ್ಲಿ 9 ಕೋಟಿ, ರಾಜ್ಯದಲ್ಲಿ 55 ಲಕ್ಷ ನಾಯಕ ಜನಾಂಗವಿದೆ. ಎಸ್.ಸಿ, ಎಸ್.ಟಿ ಜನಾಂಗದ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿದ್ದು, ಇದನ್ನು ತಡೆಗಟ್ಟ ಬೇಕಾಗಿದೆ. ರಾಜ್ಯ ಸರ್ಕಾರ ಜನಾಂಗದ ಇನ್ನೂ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.

   ವಾಲ್ಮೀಕಿ ಭಾವ ಚಿತ್ರ ಅನಾವರಣಗೊಳಿಸಿ ಕಾರ್ಮಿಕ ಸಚಿವ ವೆಂಕಟರವಣಪ್ಪ ಮಾತನಾಡಿ, ತಾಲ್ಲೂಕಿನಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ 24 ವಾಲ್ಮೀಕಿ ಸಮುದಾಯಭವನಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮಾಜಿ ಸಚಿವ ಬೆಳಗಾವಿ ಜಿಲ್ಲೆಯ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಮಾತನಾಡಿ, ತಾಲ್ಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರಕ್ಕಾಗಿ 1 ಲಕ್ಷ ರೂ. ನೀಡುವುದಾಗಿ ಘೋಷಿಸಿ, ಶಿಕ್ಷಣದ ಜೊತೆಯಲ್ಲಿ ಸಾಮಾಜಿಕ ಬದಲಾವಣೆಯಾಗಬೇಕು. ತಮ್ಮ ಮಕ್ಕಳನ್ನು ಶೈಕ್ಷಣಿಕವಾಗಿ ಅಭಿವೃದ್ದಿ ಪಡಿಸಲು ಪೋಷಕರು ಮುಂದಾಗಬೇಕೆಂದರು.
ಶಿರಾ ತಾ. ಶಿಡ್ಲೆಕೋಣ ಹಾಗೂ ಪಾವಗಡ ತಾಲ್ಲೂಕು ನಿಡಗಲ್ ವಾಲ್ಮೀಕಿ ಸಂಸ್ಥಾನದ ಶ್ರೀವಾಲ್ಮೀಕಿ ಸಂಜಯ್‍ಕುಮಾರಸ್ವಾಮಿ, ಕಾರ್ಮಿಕ ಇಲಾಖೆಯ ಆಯುಕ್ತ ಪಾಲಯ್ಯ, ತಾಲ್ಲೂಕು ನಾಯಕ ನೌಕರ ಸಂಘದ ಅಧ್ಯಕ್ಷ ಅನಿಲ್ ಕುಮಾರ್, ಲೆಕ್ಕ ಪರಿಶೋಧಕ ನಾರಾಯಣಮೂರ್ತಿ, ವಾಲ್ಮೀಕಿ ಜಾಗೃತಿ ವೇದಿಕೆಯ ಅಧ್ಯಕ್ಷ ಪಾಳ್ಳೇಗಾರ ಲೋಕೇಶ್,ಚಿತ್ತಗಾನಹಳ್ಳಿ ಚಂದ್ರಶೇಖರ್‍ರಾಜ್ ಮಾತನಾಡಿದರು.

   ಬಿ.ಇ.ಒ.ಕುಮಾರಸ್ವಾಮಿ, ಸಹಕಾರ ಇಲಾಖೆಯ ನಿವೃತ್ತ ಉಪನಿಬಂಧಕ ಸಿದ್ದಗಂಗಪ್ಪ, ಬಳ್ಳಾರಿಯ ಉಪ ವಿದ್ಯುತ್ ಪರೀಕ್ಷಕ ಎ.ಎನ್. ವಿಜಯಕುಮಾರ್, ಹಾವೇರಿ ಎಸ್.ಟಿ. ನಿಗಮದ ಜಿಲ್ಲಾ ವ್ಯವಸ್ಥಾಪಕ ತ್ಯಾಗರಾಜು, ಜಿ.ಪಂ. ಸದಸ್ಯೆ ಗೌರಮ್ಮತಿಮ್ಮಯ್ಯ, ತಾ.ಪಂ. ಸದಸ್ಯೆ ಶಿವಮ್ಮ, ನರಸಿಂಹ, ಪುರಸಭಾಸದಸ್ಯರಾದ ಸುಬ್ರಹ್ಮಣ್ಯ, ಪಾರ್ವತಮ್ಮ, ಸಂಘದ ಕಾರ್ಯದರ್ಶಿ ವಿ.ಎನ್.ಕೃಷ್ಣ, ಸೀನಪ್ಪ, ಶಿವಪ್ಪನಾಯಕ, ಸುಮಶ್ರೀನಿವಾಸ್, ರಾಜಾನಾಯಕ, ಆನಂದಪ್ಪ, ಆನಂದನಾಯಕ, ಬಾಲಚಂದ್ರ ಮತ್ತಿತರರು ಹಾಜರಿದ್ದರು.

    ಬೆಂಗಳೂರು ವಿ.ವಿ.ಇತಿಹಾಸ ಪ್ರಾಧ್ಯಾಪಕಿ ಡಾ.ಎಸ್ ನಾಗರತ್ನಮ್ಮ, ವಳ್ಳೂರಿನ ಡಾ. ಪ್ರಭಾಕರರೆಡ್ಡಿ, ಎ.ಪಿ.ಎಂ.ಸಿ. ನಿವೃತ್ತ  ಕಾರ್ಯದರ್ಶಿ ಜಯರಾಮು, ಜಿಲ್ಲಾ ಅತ್ಯತ್ತುಮ ಶಿಕ್ಷಕ ಪ್ರಶಸ್ತಿ ವಿಜೇತ ಹನುಮಂತರಾಯಪ್ಪ, ಗಂಗಸಾಗರದ ನಿವೃತ್ತ ಮುಖ್ಯ ಶಿಕ್ಷಕ ಶ್ರೀನಿವಾಸ್‍ನಾಯಕ್, ನಿವೃತ್ತ ಅಂಚೆಪೇದೆ ಚಿನ್ನಾನಾಯಕ, ಮಜಾಟಾಕೀಸ್ ನ ಪಾವಗಡದ ಮಂಜು, ಸಂಘಕ್ಕೆ ನಿವೇಶನ ದಾನ ನೀಡಿದ ಹನುಮಂತನಹಳ್ಳಿ ರಾಮಾಂಜಿರವರುಗಳನ್ನು ಸನ್ಮಾನಿಸಲಾಯಿತು.
ಸುಮಾರು ಒಂದು ನೂರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ, ತಲಾ 2 ಸಾವಿರ ರೂ. ನಗದು ನೀಡಿ ಪುರಸ್ಕರಿಸಲಾಯಿತು.

LEAVE A REPLY

Please enter your comment!
Please enter your name here