ವಾಸ್ತವ ರಾಜಕಾರಣ ಒಂದು ಚಿಂತನೆ

0
57

ಹಾರೋಗೆರೆ ತೇಜೇಶ್
ಬಟವಾಡಿ, ತುಮಕೂರು
9148094251, 9036132249: 

  ಇದೀಗ ಚುನಾವಣೆ ಗದ್ದಲ ರಾಜಕೀಯ ಪಕ್ಷಗಳ ಆರ್ಭಟ ಎಲ್ಲವು ಕೊನೆಯಾಗಿ ಪ್ರಸ್ತುತ ರಾಜ್ಯಗಳ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮಿಶ್ರ ಸರ್ಕಾರ ಆಸ್ತಿತ್ವಕ್ಕೆ ಬಂದಿದೆ. ಬಹುಶಃ ಇಂದಿನ ವಾಸ್ತವ ರಾಜಕಾರಣವನ್ನು ಬಲು ಸೂಕ್ಷ್ಮವಾಗಿ ನೋಡುತ್ತ ಸಾಗಿದಂತೆ ನಮ್ಮ ರಾಜಕೀಯ ವ್ಯವಸ್ಥೆ ಮತ್ತು ರಾಜಕಾರಣ ಮಾಡುವ ರಾಜಕಾರಣಗಳ ಮೌಲ್ಯ ನಿಜಕ್ಕು ಅಥಃ ಪತನದತ್ತ ಸಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರ ನಂತರದಲ್ಲಿರುವ ನಮ್ಮ ರಾಜಕೀಯ ವ್ಯವಸ್ಥೆಯನ್ನು ತಾಳೆ ಹಾಕಿ ನೋಡುವುದಾದರೆ ಅಜಗಜಾಂತರ ವ್ಯತ್ಯಾಸವನ್ನು ಕಾಣುತ್ತಿದ್ದೇವೆ, ಅಂದಿನ ನಾಯಕರ ರಾಜಕೀಯ ವಿಶ್ಲೇಷಣೆ ಅಭಿವೃದ್ದಿ ಪರ ನಿಲುವುಗಳು ಎಲ್ಲಕ್ಕಿಂತ ಮಿಗಿಲಾಗಿ ಚುನಾವಣೆ ನಂತರ ಅವರು ನೀಡಿದ ಆಡಳಿತ ವ್ಯವಸ್ಥೆ ಇಂದು ಇತಿಹಾಸದ ಉಟವನ್ನು ಸೇರಿ ನೆನಪಿನ ಬುತ್ತಿಯಲ್ಲಿ ಆಗಾಗ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಆದರೆ ಇಂದಿನ ನಮ್ಮ ವಾಸ್ತವ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಗಮನಿಸುತ್ತ ಸಾಗಿದಂತೆ ಪಕ್ಷ ಮತ್ತು ಪಕ್ಷದ ಸಿದ್ದಾಂತಗಳನ್ನು ಇಟ್ಟುಕೊಂಡು ಇಟ್ಟುಕೊಂಡು ಮಾಡುತ್ತಿರುವ ಇಂದಿನ ರಾಜಕಾರಣಿಗಳನ್ನು ನೋಡುವುದಾದರೆ ನಿಜಕ್ಕು ಇವರ ದೊಂಬರಾಟದ ರಾಜಕಾರಣ ನಗಬೇಕೋ, ಅಳಬೇಕೋ ತಿಳಿಯದು ಅಧಿಕಾರದ ಅಮಲಿನಲ್ಲಿ ತೇಲುತ್ತಿರುವ ಇವರಿಗೆ ಸಿದ್ದಾಂತ ಮತ್ತು ಅಭಿವೃದ್ದಿ ನಿಲುವಿಗಿಂತ ಅಧಿಕಾರದ ಅಮಲು ಇವರನ್ನು ಎಂತಹ ಸ್ಥಿತಿಗೆ ತಂದು ನಿಲ್ಲಿಸಿದೆ.

ಇತ್ತಿಚೀನ ನಮ್ಮ ರಾಜಕೀಯ ವಿದ್ಯಮಾನಗಳೇ ನಮ್ಮ ಕಣ್ಣ ಮುಂದಿವೆ ಪಕ್ಷ ಪಕ್ಷಗಳ ಬದಲಾವಣೆ ಪರಸ್ಪರ ಆರೋಪ ಪ್ರತ್ಯಾಡಳಿತ ಅದರಲ್ಲಿ ಇತ್ತಿಚೀನ ಟಿ.ವಿ ಮಾಧ್ಯಮಗಲಲ್ಲಿ ಮಾತನಾಡುವ ರಾಜಕಾರಣಿಗಳ ಭಾಷಣ ಶೈಲಿ ನಿಜಕ್ಕು ದೊಡ್ಡ ದುರಂತವೇ ಸರಿ. ಇತ್ತಿಚೀನ ವಿಧಾನ ಸಭಾ ಚುನಾವಣೆಯನ್ನು ಅವಲೋಕನ ಮಾಡಿ ನೋಡುವುದಾದರೆ ಚುನಾವಣೆ ಊರ್ವ ನಾಮುಂದು ತಾಮುಂದು ನಮ್ಮ ಸಾಧನೆ ಹೀಗೆ ಹಾಗೆ ಎಂದು ಬಡಾಯಿ ಕೊಳ್ಳುತ್ತಿದ್ದ ರಾಜಕೀಯ ಪಕ್ಷಗಳಿಗೆ ಮತದಾರ ಪ್ರಭು ಸ್ಪಷ್ಟ ಚಿತ್ರಣವನ್ನು ನೀಡಿಲ್ಲ. ನಾವೇ ಸರ್ಕಾರ ಮಾಡುತ್ತೀವೆ. ನಮಗೆ ಬಹುಮತವಿದೆ ಇನ್ನಿಲ್ಲದ ಕಸರತ್ತನ್ನು ನಡೆಸಿದ ರಾಜಕೀಯ ನಾಯಕರ ಲೆಕ್ಕಚಾರಗಳು ತಲೆಕೆಳಗಾಗಿವೆ ಇದೀಗ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸಮ್ಮಿಶ್ರ ಸರ್ಕಾರವನ್ನು ರಚಿಸಿವೆ ಒಂದಾಂಶವನ್ನು ನಾವು ಚರ್ಚಿಸಲೆ ಬೇಕು.

ಚುನಾವಣೆ ಪೂರ್ವ ಮತ್ತು ಚುನಾವಣೆ ನಂತರ ರಾಜಕಾರಣಗಳಿಗೆ ಮತದಾರರನ್ನು ತಮ್ಮಿಷ್ಟಕ್ಕೆ ಬಂದಂತೆ ನೋಡಿಕೊಳ್ಳುವುದು ಜಾತಿ ರಾಜಕಾರಣ ಮಾಡುವುದು ತರವಲ್ಲ ಸಮಾಜದಲ್ಲಿ ಬೀಡು ಬಿಟ್ಟಿರುವ ಭ್ರಷ್ಟಚಾರ, ಅತ್ಯಾಚಾರ, ಭಯೋತ್ಪಾದನೆ, ನಕ್ಸಲ್ ನಂತಹ ಎಷ್ಟೋ ಸಮಸ್ಯೆ ಸಮಸ್ಯೆಗಳಾಗಿ ಉಳಿದಿವೆ ಇವುಗಳಿಗೆ ಮುಕ್ತಿ ಸಿಗಬೇಕು.
ಅದರಲ್ಲು ನಮ್ಮ ಇಂದಿನ ಎಷ್ಟೋ ಗ್ರಾಮೀಣ ಭಾಗಕ್ಕೆ ಹೋದರೆ ಸರಿಯಾದ ನೀರಿನ ವ್ಯವಸ್ಥೆಯಲ್ಲಿ, ಅದೇಷ್ಟೋ ಹಳ್ಳಿಗೆ ದೀಪದ ವ್ಯವಸ್ಥೆಯಿಲ್ಲ. ಆದರೆ ನಮ್ಮ ರಾಜಕಾರಣಿಗಳ ಭಾಷಣ ಭರವಸೆಗಳಿಗೆ ಮಾತ್ರ ಕೊನೆ ಇಲ್ಲ .

ಸ್ವಾತಂತ್ರ ಬಂದು 71 ವರ್ಷವಾದರೂ ಕೇಂದ್ರ ಮತ್ತು ರಾಜ್ಯಗಳಲ್ಲಿ ಅದೇಷ್ಟೋ ಸರ್ಕಾರಗಳು ಅಧಿಕಾರ ನಡೆಸಿ ಹೋಗಿವೆ. ಆದರೆ ನಮ್ಮ ವ್ಯವಸ್ಥೆಯ ಬದಲಾವಣೆಗೆ ಸ್ಪಷ್ಟ ಚಿತ್ರಣ ದೊರಕಿಲ್ಲ ಅದರಲ್ಲು ನಮ್ಮ ಯುವ ಸಮೂಹ ಇಂದಿನ ವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸ ಬೇಕಿದೆ. ಇದೀಗ ರಾಜ್ಯದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಎಷ್ಟು ದಿನ ಆಳ್ವಿಕೆ ನಡೆಸುತ್ತವೆ. ಎಂಬುದಕ್ಕಿಂತ ಪಾರದರ್ಶಕ ಮತ್ತು ಅಭಿವೃದ್ದಿ ಪರ ಸರ್ಕಾರ ನೀಡಬೇಕು ಎನ್ನುವುದು ನನ್ನಂತಹ ಎಷ್ಟೋ ಮತದಾರನ ಕನಸು.

 

LEAVE A REPLY

Please enter your comment!
Please enter your name here