ವಾಹನ ಹರಿದು ವ್ಯಕ್ತಿಯೊರ್ವನ ಸಾವು

0
28

ಬೆಂಗಳೂರು,

 

ಚಿಕ್ಕಜಾಲದ ಬೆಟ್ಟಹಲಸೂರು ಕ್ರಾಸ್ ಬಳಿ ಭಾನುವಾರ ರಾತ್ರಿ ತಂಗಿಯ ಮನೆಗೆ ಹೋಗಲು ರಸ್ತೆ ದಾಟುತ್ತಿದ್ದ ಟೈಲರ್ ಒಬ್ಬರು ಅಪರಿಚಿತ ವಾಹನ ಹರಿದು ಮೃತಪಟ್ಟಿರುವ ದುರ್ಘಟನೆ ನಡೆದಿದೆ.ರಾಜಾನುಕುಂಟೆಯ ಅತ್ತಿನಾಗನಹಳ್ಳಿಯ ನರಸಿಂಹ (58)ಎಂದು ಮೃತ್ಪಟ್ಟವರನ್ನು ಗುರುತಿಸಲಾಗಿದೆ.ಸೊಣ್ಣಪ್ಪನಹಳ್ಳಿಯಲ್ಲಿ ಟೈಲರ್ ಅಂಗಡಿ ಇಟ್ಟುಕೊಂಡಿದ್ದ ಅವರು, ಕೆಲಸ ಮುಗಿಸಿಕೊಂಡು ರಾತ್ರಿ 7.20ರ ವೇಳೆ ಹುಣಸಮಾರನಹಳ್ಳಿಯ ತಂಗಿಯ ಮನೆಗೆ ಹೋಗಲು ಬೆಟ್ಟಹಲಸೂರು ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದರು.ಈ ವೇಳೆ ವೇಗವಾಗಿ ಬಂದ ಅಪರಿಚಿತ ವಾಹನ ಹರಿದು, ನರಸಿಂಹ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿರುವ ಚಿಕ್ಕಜಾಲ ಪೊಲೀಸರು, ಪರಾರಿಯಾಗಿರುವ ಅಪರಿಚಿತ ವಾಹನಕ್ಕಾಗಿ ತೀವ್ರ ಶೋಧ ನಡೆಸಿದ್ದಾರೆ.

LEAVE A REPLY

Please enter your comment!
Please enter your name here