ವಿದ್ಯಾರ್ಥಿಗಳನ್ನು ಕರೆದ್ಯೊಯುತ್ತಿದ್ದ ಟಾಟ ಆ ಎಸಿ ಪಲ್ಟಿ

0
24

 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ : ನಾಲ್ವರು ಜಿಲ್ಲಾ ಆಸ್ಪತ್ರೆಗೆ ದಾಖಲು.

ಚಳ್ಳಕೆರೆ : 

    ತಾಲ್ಲೂಕಿನಾದ್ಯಂತ ವಿವಿಧ ಹೋಬಳಿ ಮಟ್ಟದಲ್ಲಿ ಕಳೆದ ಒಂದು ವಾರದಿಂದ ಶಿಕ್ಷಣ ಇಲಾಖೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದಲ್ಲಿ ಕ್ರೀಡಾಕೂಟವನ್ನು ಏರ್ಪಡಿಸಿದ್ದು, ಪರಶುರಾಮಪುರ ಹೋಬಳಿಯ ಪ್ರೌಢಶಾಲಾ ಮಟ್ಟದ ಕ್ರೀಡಾ ಕೂಟ ಟಿ.ಎನ್.ಕೋಟೆ ಗ್ರಾಮದಲ್ಲಿ ನಡೆಯುತ್ತಿದ್ದು, ಕ್ರೀಡಾಕೂಟಕ್ಕೆ ತೆರಳುತ್ತಿದ್ದ ಶಾಲಾ ಆಟಗಾರರಿಂದ ಟಾಟಾ ಎಸಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮವಾಗಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಈ ಪೈಕಿ ನಾಲ್ವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಇದರಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

    ತಾಲ್ಲೂಕಿನ ಪರಶುರಾಮಪುರ ಹೋಬಳಿಯ ಟಿ.ಎನ್.ಕೋಟೆ ಪ್ರೌಢಶಾಲಾ ಮೈದಾನದಲ್ಲಿ ಹೋಬಳಿ ಮಟ್ಟದ ಕ್ರೀಡಾ ಕೂಟ ಬಹುತೇಕ ಕ್ರೀಡೆಗಳನ್ನು ಮುಗಿಸಿ ಶುಕ್ರವಾರ ಅಂತಿಮವಾಗಿದ್ದು, ದೊಡ್ಡ ಚೆಲ್ಲೂರು ಮತ್ತು ಚೌಳೂರು ಪ್ರೌಢಶಾಲೆಗಳ ಖೋಖೋ ಕ್ರೀಡಾಪಟುಗಳು ಅಂತಿಮ ಪಂದ್ಯದಲ್ಲಿ ಶನಿವಾರ ಆಡಬೇಕಿದ್ದು, ಚೌಳೂರಿನ ಶ್ರೀವೀರಭದ್ರಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ವಿದ್ಯಾರ್ಥಿಗಳು ಸೂರನಹಳ್ಳಿ ಮತ್ತು ಚೌಳೂರು ಗ್ರಾಮದ ವ್ಯಾಪ್ತಿಯ ಶನಿವಾರ ಬೆಳಗ್ಗೆ 10ರ ಸಮಯದಲ್ಲಿ ಚೌಳೂರಿನಿಂದ ಟಿ.ಎನ್.ಕೋಟೆ ಕಡೆ ಆಟವಾಡಲು ಹೋಗುವಾಗ ಗೋಸಿಕೆರೆ ಮತ್ತು ಟಿ.ಎನ್.ಕೋಟೆ ಮಧ್ಯದ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಎಸಿ ವಾಹನ ಉರಳಿ ಬಿದಿದ್ದೆ.

     ಕೂಡಲೇ ಸಾರ್ವಜನಿಕರು ಚಳ್ಳಕೆರೆ,ಪೊಲೀಸ್ ಠಾಣೆ ಮತ್ತು ಆಸ್ಪತ್ರೆಗೆ ಮಾಹಿಸಿ ನೀರಿದ್ದು, ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ಮತ್ತು ಸಿಬ್ಬಂದಿ ವರ್ಗ ಸ್ಥಳಕ್ಕೆ ತೆರಳಿ ಗಾಯಾಳನ್ನು ಇಲ್ಲಿನ ಸಾರ್ವಜನಿಕರ ಆಸ್ಪತ್ರೆಗೆ ದಾಖಲಿಸಿ ತೀರ್ವವಾಗಿ ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಆಸ್ಪತ್ರೆಗೆ ಗಾಯಾಳುಗಳಾಗಿ ದಾಖಲಾದ ಮಕ್ಕಳ ಆರೋಗ್ಯ, ಯೋಗ ಕ್ಷೇಮ ವಿಚಾರಿಸಲು ಪೋಷಕರು ಮತ್ತು ವಿವಿಧ ರಾಜಕೀಯ ಪಕ್ಷದ ಮುಖಂಡರು ಆಸ್ಪತ್ರೆಗೆ ದಾವಿಸಿದ್ದು, ಕೆಲವು ಗಂಟೆಗಳ ಕಾಲ ಇದೇ ಆಸ್ಪತ್ರೆ ಸಾರ್ವಜನಿಕರಿಂದ ತುಂಬಿತ್ತು. ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಜಿ.ಎಸ್.ತಿಪ್ಪೇಸ್ವಾಮಿ, ಡಾ.ಶಮಾರ್ಪಮಿನ್, ಡಾ.ಜಯಲಕ್ಷ್ಮಿ, ಡಾ.ಆಮಿತ್ ಗುಪ್ತ, ಡಾ.ವೆಂಕಟೇಶ್, ಡಾ.ಸುಹೀನಾ ಮತ್ತು ಆಸ್ಪತ್ರೆ ಸಿಬ್ಬಂದಿ ವರ್ಗ ಗಾಯಾಳುಗಳಿಗೆ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಿ ಯಾವುದೇ ರೀತಿ ಅಪಾಯವಾದಂತೆ ಜಾಗ್ರತೆ ವಹಿಸಿದರು.

      ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ಪತ್ರಿಕೆಯೊಂದಿಗೆ ಮಾತನಾಡಿ, ಹೋಬಳಿ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಮಕ್ಕಳು ಸಂಬಂಧಪಟ್ಟ ಶಿಕ್ಷಕರೊಂದಿಗೆ ಟಿ.ಎನ್.ಕೋಟೆಗೆ ತೆರಳುತ್ತಿದ್ದರು. ಟಿ.ಎನ್. ಕೋಟೆ ಕೇವಲ 10 ಕಿ.ಮೀ ದೂರವಿದ್ದು, ಸ್ಥಳೀಯ ಟಾಟಾ ಎಸಿ ಮೂಲಕ ವಿದ್ಯಾರ್ಥಿಗಳು ತೆರಳುವಾಗ ಈ ಘಟನೆ ಸಂಭವಿಸಿದೆ. ಈ ಬಗ್ಗೆ ಸಂಬಂಧಪಟ್ಟ ಶಾಲಾ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಪ್ರಾಣಾಪಾಯವಿಲ್ಲದೆ ಪಾರಾಗಿದ್ಧಾರೆ. ಹೆಚ್ಚು ಗಾಯಗೊಂಡ ವಿದ್ಯಾರ್ಥಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದೆ ಎಂದರು.
ಪಿಎಸ್‍ಐ ಸತೀಶ್‍ನಾಯ್ಕ, ಬಿಆರ್‍ಸಿ ಮಂಜಪ್ಪ, ಸಿಆರ್‍ಪಿ ರುದ್ರಮುನಿ, ಪ್ರೌಢಶಾಲಾ ಶಿಕ್ಷಕರ ಸಂಘದ ಟಿ.ಜಿ.ವೀರಭದ್ರಪ್ಪ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಸಿ.ಟಿ.ವೀರೇಶ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಸಣ್ಣ ಸೂರಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎಚ್.ಆಂಜನೇಯ, ಸಮರ್ಥರಾಯ ಮುಂತಾದವರು ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದರು.

ಶಾಸಕರ ಭೇಟಿ :-

    ತೀರ್ವ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶಾಲಾ ಮಕ್ಕಳ ಆರೋಗ್ಯ ಪರಿಸ್ಥಿತಿಯನ್ನು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಆಲಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಶಿಕ್ಷಣಾಧಿಕಾರಿಗಳಿಗೆ ಘಟನೆಯ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದರು. ಮಕ್ಕಳನ್ನು ಕರೆದ್ಯೊಯುವಾಗ ಶಿಕ್ಷಕರು ಜಾಗ್ರತೆ ವಹಿಸದೇ ಲೋಪವೆಸಗಿದ್ದಾರೆಂದು ತಮ್ಮ ಅಸಮದಾನ ವ್ಯಕ್ತ ಪಡಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸೌಭಾಗ್ಯ ಬಸವರಾಜನ್, ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಓಬಳೇಶ್, ಮಾಜಿ ಸದಸ್ಯ ರವಿಕುಮಾರ್ ಮುಂತಾದವರು ಆಸ್ಪತ್ರೆಗೆ ಭೇಟಿ ನೀಡಿದ್ದರು.

LEAVE A REPLY

Please enter your comment!
Please enter your name here