ವಿದ್ಯಾರ್ಥಿನಿ ಮೇಲೆ ಅತ್ಯಾಚಾರ – ಕೊಲೆ ಖಂಡಿಸಿ ಪ್ರತಿಭಟನೆ

0
48

ಶಿಗ್ಗಾವಿ :

  ಸವಣೂರ ತಾಲೂಕ ಮಣ್ಣೂರು ಗ್ರಾಮದ ಬಾಲಕಿಯ ಮೇಲೆ ನಡೆಸಿದ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ಶಿಗ್ಗಾಂವಿ ತಾಲ್ಲೂಕು ಸಮಿತಿಯ ನೇತೃತ್ವದಲ್ಲಿ ಪಟ್ಟಣದ ಪಿಎಲ್‍ಡಿ ಬ್ಯಾಂಕ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಎಸ್‍ಎಫ್‍ಐ ಶಿಗ್ಗಾವಿ ತಾಲ್ಲೂಕು ಅಧ್ಯಕ್ಷೆ ಜ್ಯೋತಿ ದೊಡ್ಮನಿ ಮಾತನಾಡಿ, ಸವಣೂರು ತಾಲ್ಲೂಕಿನ ಕುಣಿಮೆಳ್ಳಹಳ್ಳಿ ಗ್ರಾಮದ ಜಿ.ಎಚ್.ಕಾಲೇಜು ವಿದ್ಯಾರ್ಥಿನಿ ರೇಣುಕಾಳನ್ನ ಎರಡು ದಿನಗಳಿಂದ ಅಪಹರಿಸಿಅತ್ಯಾಚಾರ ಮಾಡಿ, ಅವಳನ್ನು ಕುಣಿಮೆಳ್ಳಹಳ್ಳಿ ಸೇತುವೆ ಕೆಳಗಡೆ ಸುಟ್ಟು ಹಾಕಲಾಗಿದೆ. ಈ ಘಟನೆಯನ್ನು ಎಸ್‍ಎಫ್‍ಐ ಶಿಗ್ಗಾಂವಿ ತಾಲ್ಲೂಕು ಸಮಿತಿಯು ಖಂಡಿಸುತ್ತದೆ.

  ಕಳೆದ ತಿಂಗಳು ಇಂತಹದೆ ಪ್ರಕರಣ ಕೋಲಾರದ ಮಾಲೂರಿನಲ್ಲಿಯೂ ಇದೆ ತರಹದ ಘಟನೆ ನಡೆದಿತ್ತು. ದಿನೆ ದಿನೆ ಬಾಲಕಿಯರ ಮೇಲೆ, ವಿದ್ಯಾರ್ಥಿನಿ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ದೌರ್ಜನ್ಯದ ಘಟನೆಗಳು ಹೆಚ್ಚುತ್ತಿವೆ ಈ ಕುರಿತು ರಾಜ್ಯ ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳು, ಪೆÇೀಲಿಸ್ ಇಲಾಖೆ ಕಠೀಣ ಕ್ರಮ ಕೈಗೊಳ್ಳುತ್ತಿಲ್ಲಾ. ಕುಣಿಮೆಳ್ಳಹಳ್ಳಿ ಗ್ರಾಮದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧನ ಮಾಡಬೇಕು, ಜಿಲ್ಲೆಯಾದ್ಯಂತ ವಿದ್ಯಾರ್ಥಿನಿ ಮಹಿಳೆಯರಿಗೆ ಸೂಕ್ತ ರಕ್ಷಣೆ ಕೊಡಬೇಕು ಇಲ್ಲವಾದಲ್ಲಿ ಎಸ್‍ಎಫ್‍ಐ ಜಿಲ್ಲಾ ಸಮಿತಿಯು ಮುಂದಿನ ದಿನಗಳಲ್ಲಿ ತೀವ್ರ ತೆರನಾದ ಪ್ರತಿಭಟನೆ ನಡೆಸಲಾಗಿತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪ್ರಮೋದಿನಿ ಕೋಕಾಟೆ, ಪ್ರಿಯಾಂಕ ಹುಲಗೂರ, ಉಮೆಶ ಹಾಳಿ, ಪ್ರವೀಣ ಮಾಳವಾದೆ, ಯಶೋಧಾ ಅಣ್ಣಿಗೇರಿ, ಕವಿತಾ ಹರಿಜನ, ಪುಷ್ಪಾ ಪಾಟೀಲ, ರಾಧಾ ಹರಿಜನ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here