ವಿದ್ಯಾರ್ಥಿ ವೇತನ – ಭಾಗ್ಯಲಕ್ಷ್ಮೀಬಾಂಡ್ ವೇತನ ವಿತರಿಸಲು ಮನವಿ

0
37

ಶಿಗ್ಗಾವಿ : 

   ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿ ಮಕ್ಕಳಿಗೆ ಸಕಾಲದಲ್ಲಿ ವಿದ್ಯಾರ್ಥಿ ವೇತನ ಒದಗಿಸುವಂತೆ ಹಾಗೂ ಬಾಕಿ ಇರುವ ಭಾಗ್ಯಲಕ್ಷ್ಮೀ ಬಾಂಡುಗಳನ್ನು ಶೀಘ್ರದಲ್ಲಿಯೇ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ಮತ್ತು ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಫಕ್ಕಿರೇಶ ಶಿಗ್ಗಾವಿ ಇವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿ ಪರಶುರಾಮ ಗಾಜಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.

  ರಾಜ್ಯದಲ್ಲಿ ಹೆಣ್ಣು ಹೆತ್ತ ಕುಟುಂಬಗಳು ಮದುವೆ ಮತ್ತು ಶಿಕ್ಷಣಕ್ಕೆ ಆಸರೆಯಾಗಬೇಕು ಹಾಗೂ ಹೆಣ್ಣು ಹುಣ್ಣು ಎಂಬ ಭಾವನೆ ತೊಲಗಲಿ, ಬಡತನದಿಂದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಮಹಾನ ಉದ್ದೇಶದಿಂದ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ಬಂದಿದೆ. ಆದರೆ ಹಾವೇರಿ ಜಿಲ್ಲೆಯಲ್ಲಿ ಸಾವಿರಾರು ಭಾಗ್ಯಲಕ್ಷ್ಮೀ ಯೋಜನೆಯಡಿಯಲ್ಲಿ ಎಲ್.ಆಯ್.ಸಿ ಬಾಂಡುಗಳು ವಿತರಣೆಯಾಗಿವೆ ಪ್ರಾರಂಭದ ಯೋಜನೆಯಡಿಯಲ್ಲಿ ನೋಂದಣಿಯಾದ ಫಲಾನುಭವಿ ಮಕ್ಕಳಿಗೆ ವಿಮೆಯ ಅನುಕೂಲತೆ ಅಲ್ಲದೆ ವಿದ್ಯಾರ್ಥಿ ವೇತನ ಪಡೆಯಲು ಅವಕಾಶವಿದೆ. ಮೊದಲನೆ ತರಗತಿಯಿಂದ ಮೂರನೆ ತರಗತಿ ವರೆಗೆ ವಾರ್ಷಿಕ ರೂ.300 ನಾಲ್ಕನೆ ತರಗತಿಗೆ ವಾರ್ಷಿಕ ರೂ.500. ಐದನೆ ತರಗತಿಗೆ ವಾರ್ಷಿಕ ರೂ.600. ಆರನೆ ತರಗತಿ ಮತ್ತು ಏಳನೆ ತರಗತಿಗೆ ವಾರ್ಷಿಕ ರೂ.700 ಎಂಟನೆ ತರಗತಿಗೆ ವಾರ್ಷಿಕ ರೂ.800 ಒಂಬತ್ತು ಮತ್ತು ಹತ್ತನೆ ತರಗತಿಗೆ ವಾರ್ಷಿಕ ರೂ.1000. ಹನ್ನೊಂದು ಮತ್ತು ಹನ್ನೆರಡನೆ ತರಗತಿಗೆ ವಾರ್ಷಿಕ ರೂ.1200 ಈ ರೀತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಮತ್ತು ಭಾರತೀಯ ಜೀವ ವಿಮಾ ನಿಗಮದಿಂದ ಈ ಮೇಲ್ಕಾಣಿಸಿದ ಸೌಲಭ್ಯಗಳಿವೆ. ಆದರೆ ಇಲ್ಲಿಯವರೆಗೆ ಫಲಾನುಭವಿಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ಬಂದಿರುವುದಿಲ್ಲ. ಅರ್ಜಿ ಸಲ್ಲಿಸಿ ಸಂಬಂಧಿಸಿದ ಅಧಿಕಾರಿಗಳನ್ನ ಕೇಳಿದರೆ ಎಲ್.ಆಯ್.ಸಿ ಯವರು ಹಾಕಿರುವುದಿಲ್ಲ, ಅಂತ ಸಬೂಬು ಹೆಳುತ್ತಿದ್ದಾರೆ. ಇದರಿಂದ ಸಾವಿರಾರು ಬಡ ಮಕ್ಕಳು ವಿದ್ಯಾರ್ಥಿ ವೇತನದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ ಬಹಳಷ್ಟು ಫಲಾನುಭವಿಗಳಿಗೆ ವಿದ್ಯಾರ್ಥಿ ವೇತನ ಸಿಗುವ ಬಗ್ಗೆ ಬರವಸೆ ಮೂಡುತ್ತಿಲ್ಲ, ಕೂಡಲೇ ತಾವುಗಳು ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಬೇಕು.

   ಜಿಲ್ಲೆಯಲ್ಲಿ ಈಗಾಗಲೇ ಭಾಗ್ಯಲಕ್ಷ್ಮೀ ಯೋಜನೆಯಡಿಯಲ್ಲಿ ಸಾವಿರಾರು ಬಡ ಕುಟುಂಬಗಳು ಅರ್ಜಿ ಸಲ್ಲಿಸಿ ಎರಡು ವರ್ಷ ಕಳೆದರೂ ಬಾಂಡುಗಳ ವಿತರಣೆಯಾಗಿರುವುದಿಲ್ಲ. ಹಾಗೂ ಭಾಗ್ಯಲಕ್ಷ್ಮೀ ಯೋಜನೆ ಎಂಬುದು ಕೇವಲ ಮದುವೆಯ ಪರಿಹಾರಕ್ಕೆ ಸೀಮಿತ ಎಂಬ ಭಾವನೆ ಸಾಕಷ್ಟು ಜನರಲ್ಲಿ ಇದೆ. ಆದರೆ ಮದುವೆಯ ಪರಿಹಾರವನ್ನು ಹೊರತು ಪಡಿಸಿ ಅಪಘಾತ, ಅಂಗವಿಕಲತೆ, ಹಾಗೂ ಶಿಕ್ಷಣಕ್ಕೆ ಸಾಲ ಪಡೆಯುವ ಸೌಲಭ್ಯದ ಬಗ್ಗೆ ಜನರಲ್ಲಿ ಸೌಲಭ್ಯ ಕೊಡುವ ಬರವಸೆಯನ್ನು ಸರ್ಕಾರವು ಸಂಬಂಧಿಸಿದ ಇಲಾಖೆಗಳಿಗೆ ಕಟ್ಟು-ನಿಟ್ಟಿನ ಸೂಚನೆ ಕೊಡಬೇಕು. ಹಾಗೂ ಶಿಘ್ರದಲ್ಲಿಯೇ ಭಾಗ್ಯಲಕ್ಷ್ಮೀ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಬಾಂಡುಗಳನ್ನ ವಿತರಿಸಬೇಕು ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಹೋರಾಟ ಅನಿವಾರ್ಯ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

   ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಡಿ.ಎಸ್.ಓಲೇಕಾರ ನ್ಯಾಯವಾದಿ ಬಸವರಾಜ ಜಕ್ಕನಕಟ್ಟಿ, ತಾಲೂಕಾ ಗೌರವಾಧ್ಯಕ್ಷರಾಗಿ ಜಿ.ಎಮ್.ಆರಾಧ್ಯಮಠ, ತಾಲೂಕಾ ಮಹಿಳಾ ಅಧ್ಯಕ್ಷೆಯಾಗಿ ಚನ್ನಬಸಮ್ಮ ಗಂಜಿಗಟ್ಟಿ, ತಾಲೂಕಾ ಅದ್ಯಕ್ಷರಾಗಿ ಮಂಜುನಾಥ ಮಿರ್ಜಿ, ಹಾವೇರಿ ತಾಲೂಕಾ ಪ್ರಮೂಖ ಜೀಲಾನಿ ಪಟವೇಗಾರ, ರಾಜು ಲಮಾಣಿ, ಸಂತೋಷಕುಮಾರ ಕಟ್ಟಿಮನಿ, ಪರಶುರಾಮ ಕೆಂಗಾಪೂರ, ಚಿದಾನಂದ ಅಜ್ಜಂಪೂರ, ಬಾಹುಬಲಿ ಬಳಿಗಾರ, ವಿಜಯ ಕಳ್ಳಿಮನಿ, ಗುರುನಗೌಡ್ರ ದುಂಡಿಗೌಡ್ರ, ಜಮೀರ ಮಣಕಟ್ಟಿ, ಗೋವಿಂದ ಗಣಪ್ಪನವರ, ಪ್ರಕಾಶ ಪೂಜಾರ, ಮೌಲಾಲಿ ಶೇಖಲ್ಲಿ, ಮಹಮ್ಮದಗೌಸ್ ಅಗಸನಮಟ್ಟಿ, ಪರಶುರಾಮ ಈಳಗೇರ, ನಾಗರಾಜ ಕಡಕೋಳ, ಕುಶಾಲ ಕಾಳೆ, ಶಂಭುಲಿಂಗಪ್ಪ ಕೆರಿ, ಶಂಭುನಗೌಡ ನಾಗನಗೌಡ್ರ, ನಿಂಗಮ್ಮ ಮಾಡಗೇರಿ, ಪ್ರೇಮಾ ದಾಸರ, ಯಲ್ಲಮ್ಮ ಬಾರ್ಕಿ,ಮುನ್ನಾ ಬಿಸ್ತಿ, ರಫೀಕ ಓಲೇಕಾರ, ಮೌಲಾಲಿ ಕೌತಾಳ ಸೇರಿದಂತೆ ಮಹಿಳಾ ಕಾರ್ಮಿಕರು ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here