ವಿಧಾನಸೌಧಕ್ಕೆ ಅತ್ಯಾದುನಿಕ ಸಿಸಿ ಕ್ಯಾಮೆರಾ..!

0
31

ಬೆಂಗಳೂರು:

Image result for camera in vidhan soudha

      ವಿಧಾನಸೌಧ ಮತ್ತು ವಿಕಾಸ ಸೌಧದ ಭದ್ರತೆಯನ್ನು ರಾಜ್ಯ ಸರ್ಕಾರ ಮತ್ತಷ್ಟು ಹೆಚ್ಚಿಸುತ್ತಿದ್ದು, ಇದಕ್ಕಾಗಿ ಅತ್ಯಾಧುನಿಕ ಸಿಸಿ ಟಿವಿ ಕ್ಯಾಮರ ಕಣ್ಗಾವಲು ಹಾಕುವ ಕಾರ್ಯಕ್ಕೆ ಚಾಲನೆ ನೀಡಿದೆ.

      ಜತೆಗೆ ಪೊಲೀಸರಿಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಸಹ ಒದಗಿಸಲು ತೀರ್ಮಾನಿಸಿದ್ದು, ಭದ್ರತೆಗಾಗಿ ನಿಯೋಜನೆಗೊಂಡಿರುವ ಪೊಲೀಸರ ಕೈಯಲ್ಲಿ ಇನ್ನು ಮುಂದೆ ನವನವೀನ ಶಸ್ತ್ರಾಸ್ತ್ರಗಳನ್ನು ಕಾಣಬಹುದಾಗಿದೆ.

      ಮೊದಲ ಹಂತದಲ್ಲಿ ವಿಧಾನಸೌಧದಲ್ಲಿ ಹಳೆಯದಾದ ಸಿಸಿಟಿವಿ ಕ್ಯಾಮರಾಗಳನ್ನು ತೆಗೆದು ಹೊಸ ಕ್ಯಾಮರಗಳನ್ನು ಬದಲಾವಣೆ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ನಂತರ ಇದು ವಿಕಾಸ ಸೌಧಕ್ಕೂ ವಿಸ್ತರಣೆಯಾಗಲಿದೆ.

      ವಿಧಾನಸೌಧದ ಮೂಲೆಮೂಲೆಗಳಲ್ಲಿರುವ ಹಳೆಯ ಸಿಸಿಟಿವಿ ಕ್ಯಾಮರಾ ಸಾಮಥ್ರ್ಯ ಕುಂದಿದ್ದು, ಇದಕ್ಕಾಗಿ ಹೊಸ ಉಪಕರಣಗಳನ್ನು ಅಳವಡಿಸಲಾಗುತ್ತಿದೆ.

      ಭದ್ರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಂಡಿದ್ದು, ಇದಕ್ಕಾಗಿ ಕೋಟ್ಯಂತರ ರೂ ವೆಚ್ಚ ಮಾಡಲಾಗುತ್ತಿದೆ. ವಿಧಾನಸೌಧಕ್ಕೆ ದಲ್ಲಾಳಿಗಳನ್ನು ನಿಯಂತ್ರಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದು, ಇದಕ್ಕಾಗಿ ಸಿಸಿಟಿವಿ ಕ್ಯಾಮರ ಮೊರೆ ಹೋಗಿದೆ.

      ಪ್ರತಿದಿನ ಒಂದೊಂದು ಪ್ರವೇಶ ದ್ವಾರಗಳಿಂದ ದಲ್ಲಾಳಿಗಳು, ರಾಜಕೀಯ ಪುಢಾರಿಗಳು ವಿಧಾನಸೌಧ, ವಿಕಾಸ ಸೌಧ ಪ್ರವೇಶಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಮತ್ತು ಇಂತಹವರನ್ನ ಪತ್ತೆ ಮಾಡಲು ಸರ್ಕಾರ ಮುಂದಾಗಿದೆ.

      ಶಕ್ತಿ ಕೇಂದ್ರದ ಚಲನವಲನಗಳನ್ನು ಪರಿಶೀಲಿಸಲು ವಿಧಾನಸೌಧದಲ್ಲಿ ಸಿಸಿಟಿವಿ ಕ್ಯಾಮರಗಳ ಸಮಗ್ರ ಜಾಲವನ್ನೊಳಗೊಂಡ ನಿಯಂತ್ರಣ ಕೊಠಡಿ ಸಹ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ತಜ್ಞರು ನಿಗಾ ವಹಿಸುತ್ತಿದ್ದಾರೆ. ಇದೀಗ ತಂತ್ರಜ್ಞಾನ ಮೇಲ್ದರ್ಜೆಗೇರಿಸುತ್ತಿರುವುದರಿಂದ ಈ ಕೇಂದ್ರದ ಕಾರ್ಯನಿರ್ವಹಣೆ ಮತ್ತಷ್ಟು ಹೆಚ್ಚಾಗಲಿದೆ.

      ಇನ್ನು ಪೊಲೀಸರ ಕೈಯಲ್ಲಿ ಓಬಿರಾಯನ ಕಾಲದ ಶಸ್ತ್ರಾಸ್ತ್ರಗಳಿದ್ದು, ಇವುಗಳನ್ನು ಬದಲಿಸಿ ಹೊಸ ಹಾಗೂ ಆಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಲು ಗೃಹ ಇಲಾಖೆ ಉದ್ದೇಶಿಸಿದೆ. ವಿಧಾನಸೌಧ ಮತ್ತು ವಿಕಾಸ ಸೌಧದ ಜತೆಗೆ ಶಾಸಕರ ಭವನದಲ್ಲೂ ಸಹ ಭದ್ರತಾ ಕ್ರಮಗಳನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ.

LEAVE A REPLY

Please enter your comment!
Please enter your name here