ವಿಭಾಗ ಮಟ್ಟಕ್ಕೆ ಬಾಲಕಿಯರ ಕಬ್ಬಡಿ ತಂಡ

0
20

ಕಂಪ್ಲಿ
                ತಾಲೂಕಿನ ನಂ.9ಕಣ್ವಿ ತಿಮ್ಮಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರು ಜಿಲ್ಲಾ ಮಟ್ಟದ ಕಬ್ಬಡಿ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನಗಳಿಸಿ ಕಲ್ಬುರ್ಗಿ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾರೆ.
               ಇದೇ ಸೆ.12ರಂದು ಬಳ್ಳಾರಿಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ, ಹೊಸಪೇಟೆ ತಾಲೂಕು ಪ್ರತಿನಿಧಿಸಿ, ಕಣ್ವಿ ತಿಮ್ಮಲಾಪುರ ಸಹಿಪ್ರಾ ಶಾಲೆಯ ಬಾಲಕಿಯರ ಕಬ್ಬಡಿ ತಂಡವು ಪ್ರಥಮಸ್ಥಾನಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಗೊಂಡಿದೆ.
ಶಾಲೆಯ ಸಹ ಶಿಕ್ಷಕ ಜಿ.ಪಕ್ಕೀರಪ್ಪ ತರಬೇತು ನೀಡಿದ್ದು, ಕಬ್ಬಡಿ ತಂಡದ ನಾಯಕಿ ಡಿ.ಶರಣಮ್ಮ ನಾಯಕತ್ವದಲ್ಲಿ, ಅಂಜಿನಮ್ಮ, ಕವಿತಾ, ಮಹೇಶಮ್ಮ, ರಾಜೇಶ್ವರಿ, ಕುಸುಮ, ಅಂಬಿಕಾ, ಪೂಜಾ ಮತ್ತು ಭಾರತಿ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡ ಶಾಲೆಯ ಬಾಲಕಿಯರ ತಂಡವನ್ನು ಶಾಲೆ ಶಿಕ್ಷಕ ಸಿಬ್ಬಂದಿ, ಎಸ್‍ಡಿಎಂಸಿ ಪದಾಧಿಕಾರಿಗಳು, ಗ್ರಾಮದ ಕ್ರೀಡಾ ಪ್ರೇಮಿಗಳು ಅಭಿನಂದಿಸಿ ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here