ವಿಮಾನ ಪತನ : 5 ಜನ ಸಾವು

0
21

ಮುಂಬೈ :

   ಇಲ್ಲಿನ ವಸತಿ ಪ್ರದೇಶದಲ್ಲಿ ಲಘು ವಿಮಾನವೊಂದು ಪತನವಾಗಿದ್ದು, ಐವರು ಮೃತಪಟ್ಟಿರುವ ಘಟನೆ  ಗುರುವಾರ ನಡೆದಿದೆ.  

       ಮುಂಬೈನ ಘಾಟ್‌ಕೋಪರ್‌ ಬಳಿಯ ಸರ್ವೋದಯ ನಗರದ ಜಾಗೃತಿ ಅಪಾರ್ಟ್‌ಮೆಂಟ್‌ ಬಳಿ ವಿಮಾನ ಬಿದ್ದಿದ್ದು, ಬೀಳುವಾಗ ಕಟ್ಟಡಕ್ಕೆ ಢಿಕ್ಕಿಯಾದ ಕಾರಣ ಕಟ್ಟಡಕ್ಕೂ ಬೆಂಕಿ ತಗುಲಿದೆ. 

      ವಸತಿ ಪ್ರದೇಶದ ಮೇಲೆಯೇ ವಿಮಾನ ಬಿದ್ದಿದ್ದರೂ ಸಹಿತ ಸ್ಥಳಿಯರಿಗೆ ಯಾವುದೇ ಅಪಾಯವಾಗಿಲ್ಲ ಆದರೆ ವಿಮಾನದ ಒಳಗೆ ಇದ್ದ ಒಬ್ಬ ವ್ಯಕ್ತಿ ಸಜೀವ ದಹನವಾಗಿದ್ದಾನೆ. 

       ಕಿಂಗ್‌ ಏರ್‌ಲೈನ್ಸ್‌ ಸಿ90 ಸಂಖ್ಯೆಯ ವಿಮಾನ ಸರ್ವೋದಯ ನಗರದ ಬಳಿ ಪತನವಾಗಿದೆ.  ವಿಮಾನದಲ್ಲಿ ಐದು ಮಂದಿ ವಿಪತ್ತು ನಿರ್ವಹಣೆ ತಂಡದ ಅಧಿಕಾರಿಗಳು ಪ್ರಯಾಣಿಸುತ್ತಿದ್ದರು. ಸದ್ಯ  ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆ ಕುರಿತು ಸ್ಥಳಿಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

 

LEAVE A REPLY

Please enter your comment!
Please enter your name here