ವಿಮೋಚನಾ ದಿನಾಚರಣೆ

0
22

ಬೆಂಗಳೂರು

                   ನಗರದಲ್ಲಿ ಹೈದರಾಬಾದ್ ಕರ್ನಾಟಕ ಭಾಗದವರ ಶೈಕ್ಷಣಿಕ ಅಭಿವೃದ್ದಿಗಾಗಿ ಹೈದರಾಬಾದ್ ಕರ್ನಾಟಕ ಭವನ ನಿರ್ಮಾಣ ಮಾಡಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ ತಿಳಿಸಿದರು.

                   ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಕಡಿಮೆ ಫಲಿತಾಂಶ ಬರುತ್ತದೆ.ಅದಕ್ಕೆ ಅಲ್ಲಿನ ಶೈಕ್ಷಣಿಕ ಸೌಲಭ್ಯಗಳ ಕೊರತೆಯೇ ಕಾರಣವಾಗಿದೆ ಇದನ್ನು ಗಂಭೀರವಾಗಿ ಪರಿಗಣಿಸಿ ಹೈದರಾಬಾದ್ ಕರ್ನಾಟಕ ಭವನ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದರು.

                   ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಭಾನುವಾರ ಹೈದರಾಬಾದ್ ಕರ್ನಾಟಕ ನಿವಾಸಿಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಘ ಆಯೋಜಿಸಿದ್ದ ವಿಮೋಚನಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶೈಕ್ಷಣಿಕ ಅಭಿವೃಧ್ದಿ ಫಲಿತಾಂಶ ಹೆಚ್ಚಳ ಮಾಡಲು ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

                    ಈ ಹಿಂದಿನ ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಹೈ-ಕ ಅಭಿವೃದ್ಧಿ ಗೆ ನೀಡಿದ್ದು, ಇದರ ಬಳಕೆ ಮಾಡಿಕೊಳ್ಳಲಾಗುತ್ತಿದೆ ಹೈದರಾಬಾದ್ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗುವಂತೆ ಹಾಗೂ ಕೆಎಎಸ್, ಐಎಎಸ್ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಬೆಂಗಳೂರಿನಲ್ಲಿ ಭವನ ನಿರ್ಮಾಣ ಮಾಡುವಂತೆ ಹಲವಾರು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

                        ನಂಜುಡಪ್ಪ ವರದಿ ಸೇರಿದಂತೆ ಅನೇಕರು ಹೈದಾರಬಾದ್ ಕರ್ನಾಟಕ ಭಾಗದ ಸುಧಾರಣೆ ಬಗ್ಗೆ ತಿಳಿಸಿದ್ದಾರೆ.ಆದರೆ, ಅಭಿವೃದ್ಧಿಗಾಗಿ ಅನೇಕ ಯೋಜನೆ ಮತ್ತು ಸಮಿತಿಗಳನ್ನು ರಚಿಸಿ, ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.

                        ಹೈದರಾಬಾದ್ ಕರ್ನಾಟಕ ನಿವಾಸಿಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸಂಗಮೇಶ್ ಬಾದವಾಡಗಿ ಮಾತನಾಡಿ, ಹೈದರಾಬಾದ್ ಭಾಗದ ಶಾಸಕರೇ, ಅಲ್ಲಿನ ಜನರ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇನ್ನೂ, ನಾವು ಎಂದೂ ಅಖಂಡತೆಯ ಕುರಿತು ಮಾತನಾಡಿಲ್ಲ. ಅಭಿವೃದ್ಧಿ ಬೇಕಾಗಿದೆ ಅಷ್ಟೇ ಎಂದರು.

ವಿಶೇಷ ಸ್ಥಾನಮಾನ ಶಾಪ

ಕೇಂದ್ರ ಸರ್ಕಾರ 371(ಜೆ)ತಿದ್ದುಪಡಿಯನ್ನು ಹೈಕ ಅಭಿವೃದ್ಧಿಗಾಗಿ ಮಾಡಿ ಅದಕ್ಕೆ ವಿಶೇಷ ಸ್ಥಾನಮಾನ ಆದರೆ ಪರಿಣಾಮಕಾರಿಯಲ್ಲದ ಹಾಗೂ ಗೊಂದಲಪೂರ್ವಕ ಆದೇಶಗಳಿಂದಾಗಿ ಅದು ವರದ ಬದಲು ಶಾಪವಾಗಿ ಪರಿವರ್ತಿತ ಗೊಳ್ಳುತ್ತಿದೆ.

ಕೆಪಿಎಸ್‍ಸಿ ಮತ್ತು ಇತರೇ ನೇಮಕಾತಿ ಪ್ರಾಧಿಕಾರಗಳ ಪ್ರಕ್ರಿಯೆಯಲ್ಲಿ ಸಾಕಷ್ಟು ಕಾನೂನು ತೊಡಕುಗಳಿವೆ. ಇದರಿಂದಾಗಿ ನಿಜವಾದ ಅರ್ಹ ಅಭ್ಯರ್ಥಿಗಳು ಮೀಸಲು ಅನ್ವಯ ಹುದ್ದೆಗಳು ದೊರಕುತ್ತಿಲ್ಲ. ಪದೋನ್ನತಿಯಲ್ಲಂತೂ ಈ ತಿದ್ದುಪಡಿಯ ಆದೇಶದಿಂದ ಸರಕಾರಿ ನೌಕರರು ಇನ್ನಷ್ಟು ತೊಂದರೆಗಳಿಗೆ ಒಳಗಾಗಿದ್ದಾರೆ ಎಂದು ಆರೋಪಿಸಿದರು.ಸಮಾರಂಭದಲ್ಲಿ ಸಹಕಾರ ಸಚಿವ ಬಂಡಪ್ಪ ಕಾಶಂಪುರ, ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ, ದಲಿತ ಕವಿ ಸಿದ್ದಲಿಂಗಯ್ಯ ಸೇರಿ ಉಪಸ್ಥಿತಿರಿದ್ದರು.

LEAVE A REPLY

Please enter your comment!
Please enter your name here