ಜಾಹಿರಾತಿಗಾಗಿ ತಾಯಂದಿರು ಮರುಳಾಗದಿರಿ

0
32

ತಿಪಟೂರು :

ಜಾಹಿರಾತಿಗಾಗಿ ನಮ್ಮ ತಾಯಂದಿರು ಇಂದು ಮರುಳಾಗದಿರಿ ಎಂದು ಶಾಸಕ ಬಿ.ಸಿ.ನಾಗೇಶ್ ತಿಳಿಸಿದರು.

      ನಗರದ ಆರ್ಯಬಾಲಿಕ ಸರ್ಕಾರಿ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಕಲ್ಯಾಣ ಇಲಾಖೆ, ತಾಲ್ಲೂಕು ಸ್ತ್ರೀಶಕ್ತ ಒಕ್ಕೂಟ, ನಗರಸಭೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ಕೊನೇಹಳ್ಳಿ ಜಂಟಿಯಾಗಿ ಆಯೋಜಿಸಿದ್ದ ವಿಶ್ವಸ್ತನ್ಯಪಾನ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದು ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ವಸ್ತುಗಳು ಕನಿಷ್ಟ ಎಂದು ತಿಳಿದು ಬೇರೆದೇಶದ ವಸ್ತುಗಳು ಶ್ರೇಷ್ಟ ಎನ್ನುವ ಭಾವನೆ ನಮ್ಮ ತಾಯಂದಿರು ಮರುಳಾಗಿ ಎದೆಹಾಲನ್ನು ಉಣಿಸುವ ಕಾರ್ಯದಲ್ಲಿ ಹಿಂದೆ ಬಿದ್ದಿದ್ದು ಕೇವಲ ಅಂಗಡಿಗಳಲ್ಲಿ ಮಾರಾಟವಾಗುವ ಕೃತಕ ವಸ್ತುಗಳಿಗೆ ಮರುಳಾಗಿ ಅದನ್ನೇ ಅಮೃತವೆಂದು ಮಕ್ಕಳಿಗೆ ಕೊಡುತ್ತಿದ್ದಾರೆ ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ ಎಂದರು.

      ಹಿಂದೆ 10-12 ಮಕ್ಕಳನ್ನು ಹೆರುತ್ತಿದ್ದ ತಾಯಿ ಕೇವಲ ಒಂದೆರಡು ಮಗುವನ್ನು ಸಾಕಲು ಪರದಾಡುವಂತಾಗಿದ್ದು ತಾಯಿಯ ಎದೆಹಾಗು ತಾಯಿ ಮಗುವಿನ ಅನ್ಯೂತ್ಯೆತನ್ನು ಬೆಳಸು ಸಹಕಾರಿಯಾಗಿದ್ದು, ಇದು ಕೇವಲ ಮಕ್ಕಳ ಬೆಳವಣಿಗೆಗೆ ಮಾತ್ರ ಸೀಮಿತವಾಗಿಲ್ಲ. ಹಿಂದೆ ಮಕ್ಕಳಿಗೆ ಎದೆಹಾಲು ಕುಡಿಸುವಾಗ ಮಕ್ಕಳಿಗೆ ಜೋಗುಳದ ಮೂಲಕ ಒಳ್ಳೆಒಳ್ಳೆಯ ಸಂಗತಿಗಳನ್ನು ತಿಳಿಸುತ್ತಿದ್ದರು. ಇದರಿಂದ ಮಗುವಿನ ಬೌದ್ದಿಕ ಸಮಾಥ್ರ್ಯ ಹೆಚ್ಚುತ್ತಿತ್ತು. ಇಂದು ಮಕ್ಕಳು ಅತ್ತರೆ ಮೊಬೈಲ್‍ಕೊಟ್ಟು ಸುಮ್ಮನೆಮಾಡುತ್ತಿದ್ದಾರೆ. ಇದು ತಪ್ಪಬೇಕೆಂದರು.

      ಕಾರ್ಯಕ್ರಮದಲ್ಲಿ ನಗರದಸಭಾಧ್ಯಕ್ಷ, ಟಿ.ಎನ್.ಪ್ರಕಾಶ್, ಆಯುಕ್ತರಾದ ಚಂದ್ರಸೇಖರ್, ಸದಸ್ಯರಾದ ತರಕಾರಿ ಗಂಗರಾಜು, ತಾಲ್ಲೂಕು ವೈದ್ಯಾಧಿಕಾರಿ ಈಶ್ವರಯ್ಯ, ಸಿ.ಟಿ.ಪಿ.ಓ ಓಂಕಾರಪ್ಪ, ಮೇಲ್ವಿಚಾರಕಿ ಪ್ರೇಮ. ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here