ವೀಕೆಂಡ್ ಜಾಲಿ ರೈಡ್ : ರಸ್ತೆ ಅಪಘಾತಕ್ಕೆ ಯುವಕ ಬಲಿ

0
11

ಬೆಂಗಳೂರು:

Related image

      ಭಾನುವಾರ ಬೆಂಗಳೂರಿನಿಂದ ನಂದಿ ಬೆಟ್ಟಕ್ಕೆ 100ಕ್ಕೂ ಹೆಚ್ಚು ಯುವಕರು ಬೈಕ್‍ನಲ್ಲಿ ಜಾಲಿ ರೈಡ್ ಹೊರಟಿದ್ದರು. ಅದರಲ್ಲಿ ನಿಷಾದ್ ಎಂಬ ಯುವಕ ಏರ್ ಪೋರ್ಟ್ ರಸ್ತೆಯ ಫ್ಲೈ ಓವರ್ ಮೇಲೆ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.

      ಕೆಟಿಎಂ ಡ್ಯೂಕ್ ಬೈಕ್‍ನಲ್ಲಿ ನಿಷಾದ್ ಮತ್ತು ಆತನ ಸ್ನೇಹಿತ ತೆರಳುತ್ತಿದ್ದರು. ವೇಗವಾಗಿ ಸಾಗುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿದೆ. ರಸ್ತೆ ಮೇಲೆ ಬಿದ್ದ ನಿಷಾದ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

      ನಿಷಾದ್ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಬ್ಬಾಳ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here