ವೀ ಸರ್ವ್, ವೀ ಪ್ರೊಟೆಕ್ಟ್ ಬೆಂಗಳೂರು ಮಹಿಳಾ ಪೊಲೀಸ್ ಓಬವ್ವ ಪಡೆಯ ಕಾರ್ಯತಂತ್ರ

0
44

ಬೆಂಗಳೂರು:

 

      ನಗರದ ಪಶ್ಚಿಮ ವಿಭಾಗದಲ್ಲಿ ರಚಿಸಿರುವ ಮಹಿಳಾ ಪೊಲೀಸರ ಓಬವ್ವ ಪಡೆಯು ತಮ್ಮ ವಿಭಾಗದ ಜನನಿಬಿಡ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಾ ಮಹಿಳೆಯರಿಗೆ ಕಿರುಕುಳ ನೀಡುವುದಾಗಲೀ, ದೌರ್ಜನ್ಯವೆಸಗುವುದಾಗಲಿ ಕಂಡುಬಂದರೆ ಕೂಡಲೇ ಕ್ರಮ ಕೈಗೊಳ್ಳಲಿದೆ.

      ಓಬವ್ವ ಪಡೆಯು ಯುವತಿಯರು ಮಹಿಳೆಯರಿಗೆ ಕಿರುಕುಳ ಕೊಡುವುದು ಚುಡಾಯಿಸುವುದು ದೌರ್ಜನ್ಯ ವೆಸಗಲು ಪ್ರಯತ್ನ ನಡೆಸುವುದು ಕಂಡುಬಂದರೆ ಕೂಡಲೇ ಅವರನ್ನು ವಶಕ್ಕೆ ತೆಗೆದುಕೊಂಡು ತಕ್ಕ ಪಾಠ ಕಲಿಸಲಿದೆ.

      ಶಾಲೆಗೆ ಹೋಗುವ ಬಾಲಕಿಗೆ ಕಿರುಕುಳ ನೀಡದವರಿಗೆ, ಬಸ್‍ನಲ್ಲಿ ಕುಳಿತ ಮಹಿಳೆಯರಿಗೆ ಕಾಟಕೊಡುವವರಿಗೆ, ರಸ್ತೆಯಲ್ಲಿ ನಡೆದು ಹೋಗುವ ಕಾಲೇಜು ಹುಡಿಗಿಯರಿಗೆ ಕೀಟಲೆ ಮಾಡುವ ಹುಡುಗರಿಗೆ, ಕ್ಯಾಬ್‍ನಲ್ಲಿ ಚಾಲಕರ ದುವರ್ತನೆಗೆ ಲಗಾಮು ಹಾಕಲು ನಮ್ಮ ಓಬವ್ವ ಪಡೆ ಸಿದ್ದರಿರುವುದನ್ನು ಡಿಸಿಪಿ ರವಿ.ಡಿ ಚೆನ್ನಣ್ಣನವರ್ ಅವರು ಯೂಟ್ಯೂಬ್‍ನಲ್ಲಿ ಬಿಡುಗಡೆ ಮಾಡಿದ್ದಾರೆ ಅದು ಸಾಮಾಜಿಕ ಜಾ¯ತಾಣದಲ್ಲಿ ಭಾರಿ ವೈರಲ್ ಆಗಿದೆ.

Image result for ravi d channannavar

      ರವಿ.ಡಿ.ಚೆನ್ನಣ್ಣನವರ್ ಅವರು #ವೀ ಸರ್ವ್#ವೀ ಪ್ರೋಟೆಕ್ಟ್ ಎಂದು ಶೀರ್ಷಿಕೆ ನೀಡಿ ಓಬವ್ವ ಪಡೆ ಜೊತೆ ಜೊತೆಯಲ್ಲಿ ಪಯಣ, ಉಸಿರು ಇರುವವರೆಗೂ ಕದನ, ಜಾತಿ, ಧರ್ಮ, ವೇಷ, ಭಾಷೆ ಮೀರಿದ ಭಾವುಕರು. ನಮ್ಮ ಜನರ ಕಡೆಗೆ ಸಾಗುವ ಸೇವಕರು. ಕಾನೂನಿಗೆ ನಮ್ಮ ಪ್ರಾಣ….ಬೆಂಗಳೂರು ನಗರ ಪೊಲೀಸರು #ಸದಾ ನಿಮ್ಮ ಸೇವೆಯಲ್ಲಿ ಸದಾ ನಿಮ್ಮ ರಕ್ಷಣೆಯಲ್ಲಿ ಎಂದು ಟ್ವೀಟ್ ಮಾಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ.

      ಎಲ್ಲೆಲ್ಲಿ ಏಕಾಂತಕ್ಕೆ ಭಯವಿದೆಯೋ….! ಎಲ್ಲೆಲ್ಲಿ ನಾಗರೀಕ ಸೌಜನ್ಯದ ಕೊರತೆ ಇದೆಯೋ…! ಎಲ್ಲೆಲ್ಲಿ ಸಭ್ಯತೆಯ ಗಡಿ ದಾಟಿದೆಯೋ….! ಎಲ್ಲೆಲ್ಲಿ ದೌರ್ಜನ್ಯದ ಕೈಗಳು ವ್ಯಾಪಿಸಿವೆಯೋ…! ಅಲ್ಲೇಲ್ಲ ನಾವಿದ್ದೇವೆ ಎಂದು ಹೇಳಿ ಮಹಿಳೆಯರ ರಕ್ಷಣೆಗೆ ನಿಂತಿದ್ದಾರೆ.

      ಸಬ್‍ಇನ್ಸ್‍ಪೆಕ್ಟರ್ ಕಾತ್ಯಾಯಿನಿ ನೇತೃತ್ವದಲ್ಲಿ ಎಂಟು ಮಹಿಳಾ ಪೊಲೀಸರನ್ನು ಒಳಗೊಂಡ ಪಡೆ ಪಶ್ಚಿಮ ವಿಭಾಗದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಆರಂಭಿಸಿದ ಹೊಸ ಐಡಿಯಾ ಯಶಸ್ವಿಯಾಗಿದ್ದು, ದೌರ್ಜನ್ಯ ಎಸಗುವವರ ಮೇಲೆ ವಿಶೇಷ ನಿಗಾ ಇರಿಸಿ ಕಿಡಿಗೇಡಿಗಳನ್ನು ಮಟ್ಟ ಹಾಕಿ ಕ್ರಮ ಕೈಗೊಳ್ಳುವುದೇ ಇದರ ಉದ್ದೇಶ. ಪೊಲೀಸ್ ಎಂದು ಬರೆದಿರುವ ಕಪ್ಪು ಟಿ-ಶರ್ಟ್, ಸೇನೆಯ ಮಾದರಿಯ ಪ್ಯಾಂಟ್, ಟೋಪಿ ಹಾಗೂ ಕೈಯಲ್ಲಿ ಲಾಠಿ ಹಿಡಿದಿರುವ ಈ ‘ಓಬವ್ವ ಪಡೆ, ಪುಂಡರ ಕೃತ್ಯಗಳಿಗೆ ಕಡಿವಾಣ ಹಾಕಲಿದೆ.

      ಬಿಎಂಟಿಸಿ, ಕೆಎಸ್‍ಆರ್ ಟಿ ಸಿ ಬಸ್ ನಿಲ್ದಾಣ, ಗಾಂಧಿನಗರ ಸುತ್ತಲಿನ ಪ್ರದೇಶಗಳಲ್ಲಿ ‘ಓಬವ್ವ’ ಪಡೆ ಗಸ್ತು ಕಂಡು ಜನರು ಕುತೂಹಲದ ಕಣ್ಣಿನಿಂದ ನೋಡುತ್ತಿದ್ದಾರೆ. ಪೊಲೀಸರು ಧರಿಸಿರುವ ಸಮವಸ್ತ್ರ ಎಲ್ಲರ ಗಮನ ಸೆಳೆಯುತ್ತಿದೆ. ಈ ಪಡೆ ಜನರಲ್ಲಿ ಸುರಕ್ಷತೆಯ ಭಾವನೆ ಮೂಡಿಸುತ್ತದೆ.

 

LEAVE A REPLY

Please enter your comment!
Please enter your name here