ವ್ಯವಸ್ಥಿತ ಅಪಪ್ರಚಾರದಿಂದ ಸೋಲು;ಆಂಜನೇಯ

0
41

ಚಿತ್ರದುರ್ಗ:
ವ್ಯವಸ್ಥಿತ ಅಪಪ್ರಚಾರ, ಮೋದಿ ಮೋದಿ ಎನ್ನುವ ಅಲೆ ನನ್ನ ಸೋಲಿಗೆ ಕಾರಣ ಎಂದು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಆಂಜನೇಯ ಬಿಜೆಪಿ.ಬಗ್ಗೆ ಗಂಭೀರವಾಗಿ ಆಪಾದಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೊದಲು ಕಾಂಗ್ರೆಸ್‍ಗೆ ಮತ ನೀಡಿದ ಮತದಾರರಿಗೆ ಹಾಗೂ ಪಕ್ಷವನ್ನು ಗೆಲ್ಲಿಸಲೇಬೇಕೆಂದು ಹೋರಾಟ ಮಾಡಿದ ಮುಖಂಡರಿಗೆ, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಐದು ವರ್ಷಗಳ ಕಾಲ ರಾಜ್ಯದಲ್ಲಿ ಅಧಿಕಾರ ನಡೆಸಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಸಿದ ಹೊಟ್ಟೆಗೆ ಅನ್ನ ನೀಡಿದ್ದು, ರೈತರ ಸಾಲ ಮನ್ನ, ಮೂರು ತಾಲೂಕಿಗೆ ನೀರಾವರಿ ಯೋಜನೆ ಜಾರಿಗೆ ತಂದಿದ್ದು, ಇವುಗಳ್ಯಾವೂ ರಾಜ್ಯದ ಜನರ ಕಣ್ಣಿಗೆ ಕಾಣಲಿಲ್ಲ. ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಶಾ ಇವರುಗಳು ರಾಜ್ಯದಲ್ಲಿ ಸುತ್ತಾಡಿ ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡಿ ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯಲು ಹೊರಟರು. ಆದರೆ ರಾಜ್ಯದ ಪ್ರಜ್ಞಾವಂತ ಮತದಾರರು ಬಿಜೆಪಿ.ಗೆ ಸ್ಪಷ್ಠ ಬಹುಮತ ನೀಡಲಿಲ್ಲ ಎನ್ನುವುದು ಮನಸ್ಸಿಗೆ ನೆಮ್ಮದಿ ನೀಡಿದೆ. ಒಂದು ವೇಳೆ ಬಿಜೆಪಿ.ಗೆ ಬಹುಮತ ನೀಡಿದ್ದರೆ ರಾಜ್ಯವನ್ನು ಮಾರಾಟ ಮಾಡುತ್ತಿದ್ದರು ಎಂದು ಬಿಜೆಪಿ. ನಾಯಕರುಗಳ ವರ್ತನೆ ವಿರುದ್ದ ಕಿಡಿ ಕಾರಿದರು.

2013 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ.ಯವರು ಕುರಿ, ಕೋಳಿ, ಹಂದಿಗಳಂತೆ ಬೇರೆ ಪಕ್ಷದ ಶಾಸಕರುಗಳನ್ನು ಖರೀಧಿ ಮಾಡಿ ಅಧಿಕಾರಕ್ಕೆ ಬಂದು ಪ್ರಜಾಪ್ರಭುತ್ವಕ್ಕೆ ಅಪಕೀರ್ತಿ ತಂದಿದ್ದನ್ನು ರಾಜ್ಯದ ಜನ ಇನ್ನು ಮರೆತಿಲ್ಲ. ಹಾಗಾಗಿ ಬಿಜೆಪಿ.ಗೆ ಈ ಚುನಾವಣೆಯಲ್ಲಿ ಸ್ಪಷ್ಠ ಬಹುಮತ ಸಿಗಲಿಲ್ಲ ಎಂದರು.

ಬಿ.ಎಸ್.ಯಡಿಯೂರಪ್ಪ ನಾನೇ ಮುಖ್ಯಮಂತ್ರಿ ಎಂದು ಬೀಗುತ್ತಿದ್ದರು. ಕೋಮುವಾದಿ ಬಿಜೆಪಿ.ಯನ್ನು ರಾಜ್ಯದಿಂದ ದೂರವಿಡುವುದಕ್ಕಾಗಿ ಕಾಂಗ್ರೆಸ್ ಜೆಡಿಎಸ್.ಮೈತ್ರಿ ಮಾಡಿಕೊಳ್ಳುವುದರಿಂದ ಹೆಚ್.ಡಿ.ಕುಮಾರಸ್ವಾಮಿರವರೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಸಿದ್ದರಾಮಯ್ಯನವರು ನೀಡಿದ ಭರವಸೆಯಂತೆ ಅಭಿವೃದ್ದಿ ಯೋಜನೆಗಳು ಮುಂದುವರೆಯುತ್ತದೆ. ಹೊಳಲ್ಕೆರೆ ಕ್ಷೇತ್ರದಲ್ಲಿ ಸಾಕಷ್ಠು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ. ಹೊಸದುರ್ಗದಲ್ಲಿ ಬಿ.ಜಿ.ಗೋವಿಂದಪ್ಪ, ಹಿರಿಯೂರಿನಲ್ಲಿ ಡಿ.ಸುಧಾಕರ್ ಇವರುಗಳು ಸಾಕಷ್ಠು ಕೆಲಸ ಮಾಡಿದ್ದರು ಅವರುಗಳನ್ನು ಮತದಾರರು ಸೋಲಿಸಿದ್ದಾರೆ. ಜನತೆ ನೀಡಿರುವ ತೀರ್ಪಿಗೆ ತಲೆಬಾಗುತ್ತೇವೆ. ಯಾವ ಕಾರಣಕ್ಕೂ ಹೆದರಿ ಫಲಾಯನ ಮಾಡುವುದಿಲ್ಲ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತೇವೆ.

ಎಪ್ಪತ್ತು ವರ್ಷದಲ್ಲಿ ಕಂಡರಿಯದಂತ ಅಭಿವೃದ್ದಿ ಹೊಳಲ್ಕೆರೆ ಕ್ಷೇತ್ರದಲ್ಲಿ ಆಗಿದೆ. ನನ್ನ ತಾಲೂಕು ನೀರಾವರಿ ಯೋಜನೆಯಿಂದ ಕೈಬಿಟ್ಟು ಹೋಗಿತ್ತು. ಮುಖ್ಯಮಂತ್ರಿ ಮೇಲೆ ಒತ್ತಡ ತಂದು ನೀರಾವರಿ ಯೋಜನೆಗೆ ತಾಲೂಕನ್ನು ಒಳಪಡಿಸಿದ್ದೇನೆ. ಮೊಳಕಾಲ್ಮರು, ಚಳ್ಳಕೆರೆ, ಪಾವಗಡಕ್ಕೆ ಕುಡಿಯುವ ನೀರು ನೀಡುತ್ತೇನೆ. ಮಠಗಳು ಕೂಡ ನನ್ನನ್ನು ಬೆಂಬಲಿಸಿದವು. ಆದರೂ ಸೋತಿದ್ದೇನೆ. ಹಾಗಾಗಿ ಮತದಾರರ ತೀರ್ಪನ್ನು ಸ್ವಾಗತಿಸುತ್ತೇನೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಫರಾಜಿತ ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ, ಸಂಸದ ಬಿ.ಎನ್.ಚಂದ್ರಪ್ಪ, ಜಿ.ಎಸ್.ಮಂಜುನಾಥ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here