ಶತಮಾನದ ಭೇಟಿ :ಮಾಧ್ಯಮಗಳ ಬಣ್ಣನೆ

0
33

ಸೋಲ್,:

ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಮತ್ತು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಯನ್ನು ಶ್ಲಾಘಿಸಿರುವ ಉತ್ತರ ಕೊರಿಯಾದ ಮಾಧ್ಯಮಗಳು, ಇದು ಶತಮಾನದ ಭೇಟಿ ಎಂದು ಬಣ್ಣಿಸಿವೆ.

ಅಮೇರಿಕದೊಂದಿಗಿನ ಹಗೆತನದ ಸಂಬಂಧ ಅಂತ್ಯಗೊಳ್ಳುತ್ತಿದ್ದು, ಈ ಸಭೆಯು ತಮ್ಮ ನಾಯಕನ ರಾಜತಾಂತ್ರಿಕ ಗೆಲುವು ಎಂದು ಅಲ್ಲಿನ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ವಿಶ್ಲೇಷಿಸಿವೆ.

ಆಡಳಿತಾರೂಢ ವರ್ಕರ್ಸ್ ಪಾರ್ಟಿಯ ಪತ್ರಿಕೆ ‘ರೊಡೊಂಗ್ ಸಿನ್‌ಮುನ್’ ಟ್ರಂಪ್ ಮತ್ತು ಕಿಮ್ ಪರಸ್ಪರ ಆತ್ಮೀಯತೆಯಿಂದ ಕೈಕುಲುಕುತ್ತಿರುವ ಚಿತ್ರವನ್ನು ಪ್ರಕಟಿಸಿದೆ.ಸರ್ಕಾರ ಸ್ವಾಮ್ಯದ ಪತ್ರಿಕೆ ಕೆಸಿಎನ್‌ಎ ಇದು ‘ಯುಗದ ಸೃಷ್ಟಿ’. ಉತ್ತರ ಕೊರಿಯಾದ ದೊಡ್ಡ ಶತ್ರು ಅಮೇರಿಕದೊಂದಿಗಿನ ಸಂಬಂಧವನ್ನು ಬಹುದೊಡ್ಡ ಪ್ರಮಾಣದಲ್ಲಿ ಬದಲಿಸಲು ಇದು ನೆರವಾಗಲಿದೆ ಎಂದು ಹೇಳಿದೆ.

LEAVE A REPLY

Please enter your comment!
Please enter your name here