ಶಾಲಾ ಬಸ್ ಗೆ ಬೈಕ್ ಡಿಕ್ಕಿ

0
24

ಬೆಂಗಳೂರು:

                    ಖಾಸಗಿ ಶಾಲಾ ಬಸ್‍ಗೆ ಹಿಂದಿನಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದ ಬೈಕ್‍ಗೆ ಬೆಂಕಿ ಹೊತ್ತಿಕೊಂಡು ಅದರಲ್ಲಿದ್ದ ಇಬ್ಬರೂ ಮೃತಪಟ್ಟು ಶಾಲಾ ಮಕ್ಕಳು ಪಾರಾಗಿರುವ ಗುರ್ಘಟನೆ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಆನೇಕಲ್‍ನ ಬಿದರಗುಪ್ಪೆ ಬಳಿ ಶನಿವಾರ ಬೆಳಿಗ್ಗೆ ನಡೆದಿದೆ.
                  ತಮಿಳುನಾಡು ಮೂಲದ ಶ್ರೀನಾಥ್(22)ಹಾಗೂ ಮಂಜುನಾಥ್(24)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ.ಶಾಲಾ ಬಸ್‍ನಲ್ಲಿದ್ದ 20 ಮಕ್ಕಳು ಯಾವುದೇ ಆಪಾಯವಿಲ್ಲದೇ ಪಾರಾಗಿದ್ದಾರೆ.
                  ಆನೇಕಲ್‍ನ ಬಿದರಗುಪ್ಪೆ ಬಳಿ ಬೆಳಿಗ್ಗೆ 7.30ರ ವೇಳೆ ವೇಗವಾಗಿ ಬೈಕ್‍ನಲ್ಲಿ ಹೋಗುತ್ತಿದ್ದ ಇಬ್ಬರು ಮುಂದೆ ಹೋಗುತ್ತಿದ್ದ ಖಾಸಗಿ ಶಾಲಾ ಬಸ್‍ಗೆ ಡಿಕ್ಕಿ ಹೊಡೆದಿದ್ದಾರೆ.ಡಿಕ್ಕಿಯ ರಭಸಕ್ಕೆ ಬೈಕ್ ಸ್ವಲ್ಪ ದೂರಕ್ಕೆ ಬಿದ್ದು ಬೆಂಕಿ ಹೊತ್ತಿ ಉರಿದಿದ್ದು ಬಾರಿ ಅನಾಹುತ ತಪ್ಪಿದಂತಾಗಿದೆ.
                ಶಾಲಾ ಬಸ್ ನಲ್ಲಿ 20ಕ್ಕೂ ಹೆಚ್ಚು ಮಕ್ಕಳಿದ್ದು ಬಾರಿ ಅನಾಹುತದಿಂದ ಪಾರಾಗಿದ್ದಾರೆ. ನಂತರ ಬೇರೊಂದು ಬಸ್ ವ್ಯವಸ್ಥೆ ಮಾಡಿ ಮಕ್ಕಳನ್ನು ಶಾಲೆಗೆ ಕಳುಹಿಸಲಾಗಿದೆ. ಈ ಘಟನೆ ನಡೆದ ಬಳಿಕ ಶಾಲಾ ಬಸ್ ಚಾಲಕ ಪರಾರಿಯಾಗಿದ್ದಾನೆ.ಸ್ಥಳಕ್ಕೆ ಅತ್ತಿಬೆಲೆ ಪೆÇಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here