ಶಾಲೆಯ ಸುತ್ತ ಮುಳ್ಳಿನ ಗಿಡಗಳು : ಭಯದಲ್ಲಿ ವಿದ್ಯಾರ್ಥಿಗಳು

0
34

ಹೊನ್ನಾಳಿ:

      ತಾಲೂಕಿನ ಹೊಳೆ ಅರಳಹಳ್ಳಿ ಗ್ರಾಮದ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ಸುತ್ತ-ಮುತ್ತಲಿನ ಪ್ರದೇಶ ಗಿಡ-ಗಂಟಿಗಳಿಂದ ಕೂಡಿದ್ದು, ಶಾಲಾ ಮಕ್ಕಳು ಹೊರಗಡೆ ಬರಲು ಹೆದರುವ ದುಸ್ಥಿತಿ ಇದೆ. ಶಾಲೆಯ ಪಕ್ಕದಲ್ಲೇ ರಸ್ತೆಯ ಬದಿಯಲ್ಲಿ ತಿಪ್ಪೆ ರಾಶಿಗಳು ಇದ್ದು, ದುರ್ನಾತ ಬೀರುತ್ತಿವೆ. ಶಾಲೆಯ ಒಳಗಡೆ ಕುಳಿತು ಪಾಠ ಕೇಳಲು ಆಗದಂಥ ಹೀನ ಸ್ಥಿತಿ ಇದೆ.

      ಶಾಲೆಯ ಸುತ್ತ-ಮುತ್ತಲಿನ ಪ್ರದೇಶ ಗಿಡ-ಗಂಟಿಗಳಿಂದ ಕೂಡಿರುವ ಕಾರಣ ಹಾವು, ಚೇಳುಗಳು ಸೇರಿದಂತೆ ವಿವಿಧ ವಿಷ ಜಂತುಗಳು ಯಾವುದೇ ಕ್ಷಣದಲ್ಲಾದರೂ ಬರಬಹುದಾದ ಸಾಧ್ಯತೆ ಇದೆ. ಚಿಕ್ಕ ಶಾಲಾ ಮಕ್ಕಳು ಭೀತಿಯಲ್ಲೇ ಕಾಲ ಕಳೆಯಬೇಕಾದ ಅನಿವಾರ್ಯತೆ ಇದೆ.

      ಹೊಳೆ ಅರಳಹಳ್ಳಿ ಗ್ರಾಮದ ಮುಖ್ಯ ರಸ್ತೆಯ ಬದಿಯಲ್ಲೇ ಈ ಶಾಲೆ ಇದ್ದು, ಬಸ್‍ಗಳು, ಟ್ರ್ಯಾಕ್ಟರ್‍ಗಳು ಸೇರಿದಂತೆ ಅನೇಕ ಭಾರೀ ಮತ್ತು ಲಘು ವಾಹನಗಳು ಸಂಚರಿಸುತ್ತಿದ್ದು ಶಾಲಾ ಮಕ್ಕಳ ಸುರಕ್ಷತೆ ಸವಾಲಿನ ಕೆಲಸವಾಗಿ ಪರಿಣಮಿಸಿದೆ.
ಆದ್ದರಿಂದ, ಸಂಬಂಧಪಟ್ಟವರು ಇತ್ತ ಗಮನಹರಿಸಿ ಶಾಲಾ ಸುತ್ತ-ಮುತ್ತಲಿನ ಪ್ರದೇಶವನ್ನು ಶುಚಿಗೊಳಿಸಬೇಕು, ತಿಪ್ಪೆಗಳನ್ನು ಸ್ಥಳಾಂತರಿಸಬೇಕು ಎಂದು ಗ್ರಾಮದ ಮುಖಂಡ ಎಚ್.ಎಚ್. ದಾದಾಪೀರ್ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here