ಶಾಸಕರ ಅನುದಾನದಡಿ ಸಂಚಾರಿ ಆಸ್ಪತ್ರೆ ಉದ್ಘಾಟನೆ.

0
16

ಹೊಸಪೇಟೆ :

       ತಾಲೂಕಿನ ನಾಗೇನಹಳ್ಳಿ ಗ್ರಾಮದ ಇಂದಿರಾನಗರ, ಬೆನಕಾಪುರ ರಸ್ತೆಯಲ್ಲಿ ಶಾಸಕ ಆನಂದಸಿಂಗ್‍ರ ಅನುದಾನದಡಿ ಸಂಚಾರಿ ಆರೋಗ್ಯ ಘಟಕದ ವಾಹನದ ಉದ್ಘಾಟನಾ (ಸಂಚಾರಿ ಆಸ್ಪತ್ರೆ) ಕಾರ್ಯಕ್ರಮ ನಡೆಯಿತು.

     ಈ ವೇಳೆ ಮಾಜಿ ಶಾಸಕ ರತನ್‍ಸಿಂಗ್ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆಗಳು ಲಭಿಸಬೇಕು. ವಿಶೇಷವಾಗಿ ಮಹಿಳೆಯರಿಗೆ ಹೆಚ್ಚಿನ ಮಟ್ಟದಲ್ಲಿ ಸೇವೆ ಲಭಿಸಲಿ ಎಂಬ ದೃಷ್ಟಿಯಿಂದ ಶಾಸಕ ಆನಂದಸಿಂಗ್ ಅವರು ವಿಶೇಷ ಕಾಳಜಿ ವಹಿಸಿ ತಮ್ಮ ಅನುದಾನದಲ್ಲಿ ಈ ಸಂಚಾರಿ ಆಸ್ಪತ್ರೆ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದರು.

      ಈ ಸಂಧರ್ಭದಲ್ಲಿ ಮುಖಂಡ ಧರ್ಮೇಂದ್ರಸಿಂಗ್, ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ, ತಾ.ಪಂ.ಸದಸ್ಯೆ ನಾಗವೇಣಿ, ಗ್ರಾ.ಪಂ.ಅಧ್ಯಕ್ಷರು, ಸದಸ್ಯರು ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here