ಶಾಸಕರ ಕಚೇರಿಯಲ್ಲಿ ನೂತನ ವರ್ಷಾಚರಣೆ

0
9

ಚಳ್ಳಕೆರೆ

          ಹೊಸ ವರ್ಷದ ಪ್ರಯುಕ್ತ ಇಲ್ಲಿನ ಶಾಸಕರ ಭವನದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಡನೆ ಶಾಸಕ ಟಿ.ರಘುಮೂರ್ತಿ ಕೇಕ್ ಕತ್ತರಿಸುವ ಮೂಲಕ ನೂತನ ವರ್ಷಾಚರಣೆಯನ್ನು ಕೈಗೊಂಡರು.

           ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೂತನ ವರ್ಷವನ್ನು ಸಂಭ್ರಮ, ಸಂತೋಷದಿಂದ ನಾವೆಲ್ಲರೂ ಸ್ವಾಗತಿಸಿದ್ದೇವೆ. ಕಳೆದ ಹಲವಾರು ವರ್ಷಗಳಿಂದ ಈ ಭಾಗದ ರೈತರ ಬದುಕಿನ ಮೇಲೆ ವಕ್ರದೃಷ್ಠಿ ಬೀರುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷವಾದರೂ ತಾಲ್ಲೂಕಿನ ಜನರಿಗೆ ಉತ್ತಮ ಮಳೆ ಬಂದು ಜನರ ಎಲ್ಲಾ ಸಮಸ್ಯೆಗಳು ದೂರವಾಗಲಿ ಎಂದು ದೇವರನ್ನು ಪ್ರಾರ್ಥಿಸಿದ್ದೆ. ಹೊಸ ವರ್ಷದ ಈ ದಿನದಂದು ಎಲ್ಲರಲ್ಲೂ ಉತ್ತಮ ಲವಲವಿಕೆ ಉಂಟಾಗಿದ್ದು, ಮುಂಬರುವ ದಿನಗಳಲ್ಲೂ ಸಹ ನಾವೆಲ್ಲರೂ ಇದೇ ರೀತಿ ಸದಾಕಾಲ ಹರ್ಷಚಿಂತರಾಗಿ ಪಕ್ಷದ ಸಂಘಟನೆಗೆ ದುಡಿಯಬೇಕು ಎಂದರು.

         ಪಕ್ಷದ ಕಾರ್ಯಾಲಯದಲ್ಲಿ ನೂತನ ವರ್ಷಾಚರಣೆಯ ಸಂದರ್ಭದಲ್ಲಿ ಮಾತನಾಡಿದ ಸಮಾಜ ಸೇವಕ ಎಸ್.ಎಚ್.ಸೈಯದ್, ಹೊಸ ವರ್ಷ ಆಚರಣೆಗೆ ಶಾಸಕರು ಇಲ್ಲವೆಂಬ ಕೊರಗು ಕಾರ್ಯಕರ್ತರಲ್ಲಿತ್ತು. ಆದರೆ, ಎಲ್ಲರನ್ನೂ ಸಂತೋಷ ಪಡಿಸುವ ನಿಟ್ಟಿನಲ್ಲಿ ಶಾಸಕರು ಬೆಂಗಳೂರಿನಿಂದ ನೇರವಾಗಿ ಇಲ್ಲಿಗೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಜನರೊಡನೆ ಹಾಗೂ ಕಾರ್ಯಕರ್ತರೊಡನೆ ನಿಕಟ ಸಂಪರ್ಕ ಹೊಂದಿದ್ಧಾರೆಂದರು.

         ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ತಿಪ್ಪೇಸ್ವಾಮಿ, ಪರಶುರಾಮಪುರ ಬ್ಲಾಕ್ ಅಧ್ಯಕ್ಷ ಕಿರಣ್‍ಶಂಕರ್, ನಗರಸಭಾ ಸದಸ್ಯರಾದ ರಮೇಶ್‍ಗೌಡ, ಕೆ.ವೀರಭದ್ರಯ್ಯ, ವಿರೂಪಾಕ್ಷ, ಮಂಜುಳಾ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎಚ್.ಆಂಜನೇಯ, ಜಿ.ವೀರೇಶ್, ಕಾಂಗ್ರೆಸ್ ಮುಖಂಡರಾದ ಕೃಷ್ಣ, ಗೀತಾಬಾಯಿ, ಅಂಜಿನಪ್ಪ, ವಿಶ್ವಮರ್ಕ ಸಮಾಜದ ಅಧ್ಯಕ್ಷ ವೆಂಕಟೇಶ್‍ಚಾರಿ, ಸರಸ್ವತಿ, ಶ್ರೀನಿವಾಸ್ ಮುಂತಾದವರು ಇದ್ದರು.

        ಅಧಿಕಾರಿಗಳ ತಂಡದಿಂದಲೂ ಶುಭ ಹಾರೈಕೆ :- ಇಲ್ಲಿನ ಶಾಸಕರ ಭವನಕ್ಕೆ ಆಗಮಿಸಿದ ಶಾಸಕರ ಟಿ.ರಘುಮೂರ್ತಿಗೆ ಡಿವೈಎಸ್ಪಿ ಎಸ್.ರೋಷನ್ ಜಮೀರ್, ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ, ಪೌರಾಯುಕ್ತ ಜೆ.ಟಿ.ಹನುಮಂತರಾಜು, ನಗರಸಭೆ ಕಂದಾಯಾಧಿಕಾರಿ ಈರಮ್ಮ, ಸಮನ್ವಯಾಧಿಕಾರಿ ಪಾಲಯ್ಯ, ಪಿಎಸ್‍ಐ ಕೆ.ಸತೀಶ್‍ನಾಯ್ಕ ಮುಂತಾದವರು ಪುಪ್ಪ ಹಾರ ಅರ್ಪಿಸಿ ಶುಭಾಶಯ ಕೋರಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here