ಶಾಸಕರಿಂದ ವಿಕಲಚೇತನರಿಗೆ ಹೊಲಿಗೆ ಯಂತ್ರ ವಿತರಣೆ

0
30

ಬ್ಯಾಡಗಿ:

   ವಿಕಲಚೇತನ ಯಾರಿಗೂ ಶಾಪವಲ್ಲಾ, ವಿಕಲಚೇತನರ ಬಗ್ಗೆ ಸಹಾನುಭೂತಿ ವ್ಯಕ್ತ ಪಡಿಸುವ ಬದಲು ಸಹಕಾರ ಹಾಗೂ ಸಹಾಯ ನೀಡಿದಾಗ ಸಮಾಜದಲ್ಲಿ ಅವರು ಇತರರಂತೆ ಬದುಕಿ ಸಮಾಜಕ್ಕೆ ಕೊಡುಗೆ ನೀಡಬಹುದೆಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

    ಅವರು ತಾಲೂಕಿನ ಮಲ್ಲೂರ ಗ್ರಾಮದಲ್ಲಿ ಗ್ರಾಮ ಪಂಚಾಯತ ವತಿಯಿಂದ 14ನೇ ಹಣಕಾಸು ಯೋಜನೆಯಡಿ ಶೇ,3 ರ ಅನುದಾನದಲ್ಲಿ 18 ವಿಕಲಚೇತನರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿದರು. ವಿಕಲಚೇತನರು ಸ್ವಾವಲಂಭಿಯಾಗಿ ಸ್ವ ಉದ್ಯೋಗದಲ್ಲಿ ತೊಡಗಿ ಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಡತೆಯನ್ನು ಸಾಧಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ ವತಿಯಿಂದ ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ. ಪ್ರತಿಯೊಂದು ಗ್ರಾಮ ಪಂಚಾಯತನವರು ವಿಕಲಚೇತನರಿಗಾಗಿ ಮೀಸಲಾದ ಶೇ.3ರ ಅನುದಾನವನ್ನು ದುರುಪಯೋಗಗೊಳಿಸದೇ ಅರ್ಹ ವಿಕಲಚೇತನರಿಗೆ ತಲುಪುವಂತೆ ಕಾರ್ಯೊನ್ಮುಖರಾಗುವಂತೆ ತಿಳಿಸಿದರು.

   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷ ಲಕ್ಷ್ಮಣ ಮೇಗಳಮನಿ ಮಾತನಾಡಿ ವಿಕಲಚೇತನರಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಅವಕಾಶ ನೀಡುವ ಮೂಲಕ ಸಾಮಾಜಿಕವಾಗಿ ನೆಲೆ ಸಿಗುವಂತೆ ಕಾರ್ಯವಹಿಸಬೇಕು. ಅಂದಾಗ ಮಾತ್ರ ವಿಕಲಚೇತನರು ಸಹ ವಿವಿಧ ಕ್ಷೇತ್ರಗಳಲ್ಲಿ ಮುಂದೆ ಬರಲು ಸಾಧ್ಯವಾಗಲಿದೆ ಎಂದರು.

   ಕಾರ್ಯಕ್ರಮದಲ್ಲಿ ಬ್ಯಾಡಗಿ ಪುರಸಭಾ ಅಧ್ಯಕ್ಷ ಬಸವಣ್ಣೆಪ್ಪ ಛತ್ರದ, ಗ್ರಾ.ಪಂ.ಉಪಾಧ್ಯಕ್ಷೆ ನಗೀನಾಭಾನು ಮಾಳಿ, ಸದಸ್ಯರಾದ ಗಣೇಶಪ್ಪ ಬಡಿಗೇರ, ಹಾಲೇಶ ಜಾಧವ, ಪ್ರಕಾಶ ಕುಲಕರ್ಣಿ, ಶಿವಪುತ್ರಪ್ಪ ಗುಬ್ಬಿ, ಷಣ್ಮುಖಪ್ಪ ಸುಣಗಾರ, ಶಶಿಕಲಾ ಶಿವನಗೌಡ್ರ, ಗೀತಾ ಸೇಲಾರ, ಸಾವಿತ್ರವ್ವ ಬಡಿಗೇರ, ಸಿದ್ಲಿಂಗಪ್ಪ ಗುರೇಮಟ್ಟಿ, ವಿಜಯಕುಮಾರ ಮಾತನವರ, ಬಸವರಾಜ ಸಂಕಣ್ಣನವರ, ರಾಬಿಯಾಬಿ ಕೆಂಗನವರ, ಮಧುಮತಿ ಪೂಜಾರ, ಕಸ್ತೂರೆವ್ವ ಹೊನಕೇರಿ, ಸುಶೀಲವ್ವ ಬುಳ್ಳಮ್ಮನವರ, ಪಾರವ್ವ ಮರಿಯಮ್ಮನವರ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಪಿ.ಎಚ್.ಅಲ್ಲೂರ, ಹಾಗೂ ಗ್ರಾಮದ ಗ್ರಾಮಸ್ಥರು ಮತ್ತು ಗ್ರಾ.ಪಂ.ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here