ಶಿಕ್ಷಕರು ಮನಸ್ಸು ಮಾಡಿದರೆ ಸಾಮಾನ್ಯ ವ್ಯಕ್ತಿ ಅಸಮಾನ್ಯವ್ಯಕ್ತಿಯಾಗುತ್ತಾನೆ

ಹಾವೇರಿ:

              ಶಿಕ್ಷಕರು ಮನಸ್ಸು ಮಾಡಿದರೆ ಸಾಮಾನ್ಯ ವ್ಯಕ್ತಿ ಅಸಮಾನ್ಯವ್ಯಕ್ತಿಯನ್ನಾಗಿ ಮಾಡುವ ಶಕ್ತಿ ಶಿಕ್ಷಕರದ್ದಾಗಿದ್ದು ಸಮಾಜದಲ್ಲಿ ಕೃಷಿಕ, ಸೈನಿಕ , ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ನೆಗಳೂರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು ಹೇಳಿದರು.

                ರವಿವಾರ ನಗರದ ಜಿಲ್ಲಾ ಗುರುಭವನ ದಲ್ಲಿ ಜರುಗಿದ ಪ್ರಾಥಮಿಕ ಶಾಲೆ ಶಿಕ್ಷಕ ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘದ ಸಾಮಾನ್ಯ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ದ ಸಾನ್ನಿಧ್ಯ ವಹಿಸಿ ಮಾತನಾಡಿ ಶಿಕ್ಷಕರು ಮಕ್ಕಳಲ್ಲಿ ವ್ಯಕ್ತಿತ್ವ ನಿರ್ಮಾಣ ಮಾಡುವುದರ ಜೊತೆಗೆ ಸಮಾಜದಲ್ಲಿ ಶಿಕ್ಷಕರ ಸ್ಥಾನ ಜವಾಬ್ದಾರಿಯುತ ಸ್ಥಾನವಾಗಿದೆ ಎಂದರು.

                   ಡಿಡಿಪಿಐ ಅಂದಾನೆಪ್ಪ ವಡಗೇರಿ ಮಾತನಾಡಿ ಮನುಷ್ಯನಲ್ಲಿ ಮಾನವೀಯತೆ ಗುಣ ವೃದ್ಧಿ ಯಾಗಬೇಕಿದೆ ಶಿಕ್ಷಕರ ಸಹಕಾರಿ ಸಂಘ ಶಿಕ್ಷಕರ ನೋವು ನಲಿವು ಗಳಿಗೆ ಸ್ಪಂದಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಸಮನ್ವಯ ಶಿಕ್ಷಣಾಧಿಕಾರಿ ಸಿಎಸ್ ಭಗವಂತಗೌಡ್ರ ಮಾತನಾಡಿ ಅವಕಾಶಗಳು ಎಲ್ಲರನ್ನು ಕೈ ಬೀಸಿ ಕರೆಯುತ್ತವೆ ಕೆಲವರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ .ಮುಂದಿನ ದಿನಗಳಲ್ಲಿ ಸಾಮಾನ್ಯ ಸಭೆ ಚಿಂತನಾ ಸಭೆಯಾಗಲಿ ಶಿಕ್ಷಕರ ಮಕ್ಕಳಲ್ಲಿ ಪ್ರತಿಭೆ ಇರುತ್ತದೆ ಅದನ್ನು ಗುರುತಿಸಿ ಸನ್ಮಾನಿಸಿರುವುದು ಉತ್ತಮವಾದ ಕೆಲಸ ವಾಗಿದೆ ಎಂದರು. ಸಂಘದ ಅಧ್ಯಕ್ಷ ಜಿ.ಎಂ.ಹಿರೇಮಠ ಜಾವೂರ ಎಂ.ವಿ ಈಳಗೇರ ಕೆ.ಆರ್.ಹಿರೇಮಠ ಎನ್.ಸಿ ದೇಸಳ್ಳಿ . ಜೆಸಿ ಚುರ್ಚಿ. ಆರ್.ಐ ಮಿಶ್ರಿಕೋಚಿ . ಕೆ.ಆರ್.ಹಿರೇಮಠ ಸೇರಿದಂತೆ ಇತರರು ಇದ್ದರು.
ಎಸ್.ಎಸ್.ಎಲ್.ಸಿ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ಶಿಕ್ಷಕರ ಮಕ್ಕಳಿಗೆ ಸನ್ಮಾನಿಸಲಾಯಿತು.

Recent Articles

spot_img

Related Stories

Share via
Copy link
Powered by Social Snap