ಶಿಕ್ಷಕರು ವೃತ್ತಿಯಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತಬೇಕು

ತುಮಕೂರು:
                ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಮತ್ತು ಶಿಸ್ತುಗಳ ಜೊತೆಗೆ ಆರೋಗ್ಯಕರ ಸಮಾಜದ ಸೃಷ್ಟಿಗಾಗಿ ಯುವಕ-ಯುವತಿಯರಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತಬೇಕು. ಹಾಗೂ ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ರೂಪಿಸಲು ಶಿಕ್ಷಕರ ಪಾತ್ರ ಅತ್ಯುತ್ತಮವಾಗಿದೆ ಎಂದು ಶ್ರೀದೇವಿ ಛಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ.ಎಂ.ಆರ್. ಹುಲಿನಾಯ್ಕರ್‍ರವರು ನುಡಿದರು.
                ನಗರದ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸೆ.11 ರಂದು ಮಧ್ಯಾಹ್ನ 2:30 ಕ್ಕೆ ಶ್ರೀದೇವಿ ಆಸ್ಪತ್ರೆಯ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
               ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಅವರು ಭಾರತದಲ್ಲಿ ಸೆಪ್ಟೆಂಬರ್ 5 ರಂದು ಡಾ.ರಾಧಾಕೃಷ್ಣನ್ ಸ್ಮರಣಾರ್ಥ ಶಿಕ್ಷಕರ ದಿನವಾಗಿ ಆಚರಿಸಲ್ಪಡುತ್ತಿದ್ದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಯುನೆಸ್ಕೊ ಮತ್ತು ಐಎಲ್‍ಓಗಳ ಪ್ರಸ್ತಾವನೆಯಂತೆ ಸೆಪ್ಟೆಂಬರ್ 5 ರಂದು ವಿಶ್ವ ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆಯೆಂದು ಅವರು ಪಶು, ಪ್ರಾಣಿ, ಪಕ್ಷಿಗಳು ಕೂಡ ತನ್ನ ಶಿಕ್ಷಕ ತರಬೇತುದಾರರ ಬಗ್ಗೆ ಅಪಾರವಾದ ಪ್ರೀತಿ ಮತ್ತು ಬಾಂಧವ್ಯ ಹೊಂದಿರುವಾಗ ಜೀವ ಜಾಲದ ಉನ್ನತ ಸ್ತರದಲ್ಲಿರುವ ಮಾನವ ತನ್ನ ಅರಿವಿನ ಕಣ್ಣು ತೆರೆಸುವ ಶಿಕ್ಷಕರಿಗೆ ಸದಾ ಋಣಿ ಮತ್ತು ಕೃತಜ್ಞತೆಯಿಂದಿರುವುದರ ದ್ಯೋತಕ ಮತ್ತು ಅಗತ್ಯವೇ ಶಿಕ್ಷಕರ ದಿನಾಚರಣೆಯ ಅರ್ಥಪೂರ್ಣ ಸಂದೇಶವೆಂದರು. ಶಿಕ್ಷಕರು ಕರ್ತವ್ಯ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದರೆ ರಾಷ್ಟ್ರದ

Recent Articles

spot_img

Related Stories

Share via
Copy link
Powered by Social Snap