ಶಿಕ್ಷಕರ ದಿನಾಚರಣೆ ಅಂಗವಾಗಿ ಸನ್ಮಾನ

0
31

ಬ್ಯಾಡಗಿ:

               ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಅರ್ಹತೆಗಳೆ ಎಲ್ಲದಕ್ಕೂ ಮಾನದಂಡವಾಗುತ್ತಿದ್ದು, ಶಿಕ್ಷಣ ಇಂದು ಕೇವಲ ಅಂಕಗಳಿಗೆ ಮಾತ್ರ ಸೀಮಿವಾಗುತ್ತಿದೆ. ಇದರಿಂದಾಗಿ ಸುಶಿಕ್ಷಿತರಾದರು ಮನುಷ್ಯನಲ್ಲಿ ಮಾನವೀಯ ಮೌಲ್ಯಗಳು, ಗುರು ಹಿರಿಯರಲ್ಲಿ ಗೌರವ ಹಾಗೂ ದೇವರಲ್ಲಿ ನಂಬಿಕೆ ಕಡಿಮೆಯಾಗುತ್ತಿದೆ ಎಂದು ಹಾವೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ನೆಹರು ಒಲೇಕಾರ ಖೇದ ವ್ಯಕ್ತಪಡಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಎರ್ಪಡಿಸಿದ್ದ ಸನ್ಮಾನ                                 ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಮಕ್ಕಳಿಗೆ ಕೇವಲ ಶೈಕ್ಷಣಿಕ ಅರ್ಹತೆಗಳನ್ನು ನೀಡಿದರೆ ಸಾಲದು, ಬದಲಾಗಿ ಅದರ ಜೊತೆಯಲ್ಲಿ ಭಾರತೀಯ ಸಂಸ್ಕøತಿ, ಸಂಪ್ರದಾಯ ಹಾಗೂ ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ತುಂಬುವ ಕಾರ್ಯವಾಗಬೇಕಿದೆ ಅಂದಾಗ ಮಾತ್ರ ಶಿಕ್ಷಣಕ್ಕೆ ಒಂದು ಅರ್ಥ ಬರಲಿದ ಎಂದರು.
                ತಂತ್ರಜ್ಞಾನ ಬೆಳೆದಂತೆಲ್ಲ ಮಕ್ಕಳ ಮನಸ್ಸು ವಿಚಲಿತಗೊಂಡು ಮಲಿನವಾಗುತ್ತಿರುವುದು ದುರಂತ ವಿಷಯ ಇಂತಹ ಸಂದ ರ್ಬದಲ್ಲಿ ಮಕ್ಕಳನ್ನು ತಿದ್ದಿ ದೇಶದ ಶಕ್ತಿಯನ್ನಾಗಿಸಿ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯೋನ್ಮುಖರಾಗ ಬೇಕಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ವಿರೇಂದ್ರ ಶೆಟ್ಟರ್, ಮುಖ್ಯ ಶಿಕ್ಷಕಿ ಶೋಭಾ ಸುಣಗಾರ, ಶಿಕ್ಷಕಿಯರಾದ ಬಿ.ಸರೋಜಿನಿ, ಫಮೀದಾ ಅತ್ತಾರ, ಪದ್ವಾವತಿ, ಮುನಾಫ್,ಸೇರಿದಂತೆ ಇನ್ನಿತತರು ಉಪಸ್ಥಿತರಿದ್ದರು..

LEAVE A REPLY

Please enter your comment!
Please enter your name here