ಶಿಕ್ಷಣಕ್ಕಾಗಿ ನೀವು ಸಾಲತೆಗೆದುಕೊಳ್ಳುತ್ತಿದ್ದೀರಾ…? ಹಾಗಾದರೆ ಈ ಮಾಹಿತಿಯನ್ನು ಓದಿ..!

0
17

ಶಿಕ್ಷಣವು ಯಶಸ್ವೀ ಜೀವನಕ್ಕೆ ಕೀಲಿಕೈ ಇದು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಅಂತಾರೆ. ಆದರೆ ಅತ್ಯಂತ ದುಬಾರಿಯಾಗಿರುವ ಇಂತಹ ಶಿಕ್ಷಣವು ವಿದ್ಯಾಕಾಂಕ್ಷಿಗಳಿಗೆ ಕೈಗೆಟುಕುವುದು ಬಹಳ ಕಷ್ಟವಾಗಿದೆ. ಅದನ್ನು ಎಟುಕಿಸಿಕೊಳ್ಳಲು ಶಿಕ್ಷಣ ಸಾಲವು ಬಹು ಸಹಕಾರಿಯಾಗಿದೆ. ಆದರೆ ಸಾಲ ತೆಗೆದುಕೊಳ್ಳುವುದರಿಂದ ಹಿಡಿದು ಮರುಪಾವತಿ ಮಾಡುವ ತನಕ ಎಲ್ಲೂ ಏನೂ ಅಡ್ಡಿ ಆತಂಕಗಳು ಬರದಂತೆ ಎಚ್ಚರಿಕೆವಹಿಸುವುದು ಬಹಳ ಮುಖ್ಯ. ಇಂದಿನ ಹೆಜ್ಜೆ ಸರಿಯಾಗಿಟ್ಟರೆ ನಾಳೆಯು ಸುಗಮವಾಗಿರುತ್ತದೆ. ಈ ನಿಟ್ಟಿನಲ್ಲಿ, ನಿಮಗಾಗಿ ಕೆಲವು ಉಪಯುಕ್ತ ಮಾಹಿತಿಗಳು ಇಲ್ಲಿವೆ ನೋಡಿ.
ಪ್ರಮುಖ ಸಂಗತಿಗಳು ಶಿಕ್ಷಣದ ವ್ಯವಹಾರವು ದಶಕದ ಹಿಂದೆ ಇದ್ದಂತೆ ಈಗಿಲ್ಲ. ಅದರಲ್ಲೂ ಉನ್ನತ ಶಿಕ್ಷಣವಂತೂ ಬಹಳ ದುಬಾರಿ ಯಾಗಿದೆ.

ಭಾರತದ ಕೆಲವು ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ಹೊಂದಲು ಎಂಟರಿಂದ ಹತ್ತು ಲಕ್ಷ ರೂಪಾಯಿಗಳು ಬೇಕಾಗುತ್ತದೆ. ಇದೇ ಹೀಗಾದಲ್ಲಿ, ಇನ್ನು ವಿದೇಶಕ್ಕೆ ಹೋಗಿ ಅಧ್ಯಯನ ಮಾಡುವುದಂತೂ ಕಷ್ಟಸಾಧ್ಯವಾಗಿದೆ. ವಿದೇಶದ ವಿದ್ಯಾಭ್ಯಾಸವಂತೂ ಬಹಳ ತುಟ್ಟಿಯಾಗಿದೆ. ಹೀಗಾಗಿ ಎಷ್ಟೋ ಜನ ವಿದ್ಯಾಪೇಕ್ಷಿಗಳ ಪಾಲಿಗೆ ಶಿಕ್ಷಣವು ಮರೀಚಿಕೆಯಾಗುತ್ತಿದೆ. ಅದೇನೇ ಇರಲಿ, ಶಿಕ್ಷಣವನ್ನು ಹೊಂದಲೇಬೇಕೆಂಬ ಹಂಬಲವಿರುವವರಿಗೆ ಶಿಕ್ಷಣ ಸಾಲಗಳು ಒಂದು ಉತ್ತಮ ಮಾರ್ಗವೇ ಸರಿ. ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಬಯಕೆಯನ್ನು ಪೂರೈಸುವಲ್ಲಿ ಬ್ಯಾಂಕುಗಳು ನೆರವಿಗೆ ಬರುತ್ತಿದೆ. ಆದರೆ ಒಂದು ಬ್ಯಾಂಕಿನ ಬಡ್ಡಿದರಗಳಿಗೂ, ಇನ್ನೊಂದು ಬ್ಯಾಂಕಿನ ಬಡ್ಡಿದರಗಳಿಗೂ ವ್ಯತ್ಯಾಸಗಳಿರುತ್ತವೆ. ಹೀಗಾಗಿ, ಕೆಲವೊಮ್ಮೆ ಉತ್ತಮವಾದ ಆಯ್ಕೆಯನ್ನು ಗುರುತಿಸುವಲ್ಲಿ ಗೊಂದಲ ಮತ್ತು ಕಷ್ಟಗಳು ತಲೆದೋರುತ್ತವೆ. ಶಿಕ್ಷಣ ಸಾಲವನ್ನು ತೆಗೆದುಕೊಳ್ಳುವ ಮೊದಲು ಯಾವಾಗಲೂ ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ.

ಉದಾಹರಣೆಗೆ ಎಚ್.ಆರ್.ಡಿ ಸಚಿವಾಲಯವು ಒದಗಿಸಿರುವ ಕೇಂದ್ರ ಸರ್ಕಾರದ ಬಡ್ಡಿ ಸಬ್ಸಿಡಿ ಯೋಜನೆಯು ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳಿಗಾಗಿ ಅನುದಾನಿತ ದರದಲ್ಲಿ ಶಿಕ್ಷಣ ಸಾಲವನ್ನು ಪಡೆ ಯುವಲ್ಲಿ ಸಹಾಯ ಮಾಡಿ ಕೊಡುತ್ತಿದೆ. ಭಾರತದಲ್ಲಿ ಗುರುತಿಸಲ್ಪಟ್ಟ ವೃತ್ತಿಪರ ಮತ್ತು ತಾಂತ್ರಿಕ ವಿಶ್ವವಿದ್ಯಾಲಯಗಳಿಗೆ ಮತ್ತು ಕೋರ್ಸ್ ಅನ್ನು ಪೂರ್ಣ ಗೊಳಿಸಿದ ವಿದ್ಯಾ ರ್ಥಿಗಳಿಗೆ ಮಾತ್ರ ಈ ಸಬ್ಸಿಡಿ ಲಭ್ಯವಿದೆ. ವಿದ್ಯಾರ್ಥಿಗಳು ತಮ್ಮ ನಾನಾ ರೀತಿಯ ಕೋರ್ಸ್ ಗಳಿಗೆ ವಿಭಿನ್ನ ಬ್ಯಾಂಕುಗಳಿಂದ ಶಿಕ್ಷಣ ಸಾಲಗಳನ್ನು ಪಡೆಯಬಹುದಾಗಿದೆ. ಯಾವ ಶಿಕ್ಷಣ ಸಾಲ ಉತ್ತಮ ಎನ್ನುವುದಕ್ಕಿಂತ ನಮಗೆ ಮತ್ತು ನಮ್ಮ ಕೋರ್ಸ್ ಗಳಿಗೆ ಅನು ಗುಣವಾದ ಶಿಕ್ಷಣ ಸಾಲ ಯಾವುದು ಎಂದು ತಿಳಿದುಕೊಂಡು ಮುಂದಕ್ಕೆ ಹೆಜ್ಜೆ ಹಾಕುವುದೇ ಸಮಂಜಸವಾಗಿದೆ. ಶಿಕ್ಷಣ ಸಾಲವನ್ನು ಪಡೆದು ಕೊಳ್ಳುವ ಮೊದಲು ನಿಮಗೆ ಸಹಾಯವಾಗುವಂತಹ ಸಲಹೆಗಳು ನಿಮಗಾಗಿ ಇಲ್ಲಿವೆ ನೋಡಿ…

ನಿಮ್ಮ ಕೋರ್ಸ್‌ಗೆ ಸಾಲ ಲಭ್ಯವಿದೆಯೇ?
ನೀವು ಕೋರ್ಸ್ ಮತ್ತು ಕಾಲೇಜ್ ನಿರ್ಧರಿ ಸುವುದಕಿಂತ ಮೊದಲು ಅದಕ್ಕೆ ಶಿಕ್ಷಣ ಸಾಲ ದೊರೆಯುವುದೇ ಎಂದು ಮೊದಲು ಖಚಿತ ಪಡಿಸಿ ಕೊಳ್ಳಿ. ನಿಮಗೆ ಆ ಸಾಲ ದೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು ಖಾತ್ರಿಯಾದ ನಂತರ ಮಾತ್ರ ಮುಂದುವರೆಯಿರಿ. ಅದಕ್ಕೆ ಬೇಕಾದ ಕಾಗದ ಪತ್ರಗಳನ್ನು ಸಿದ್ಧಪಡಿಸಿಕೊಳ್ಳಿ. ಆಗ ಕಾರ್ಯವಿಧಾನಗಳಲ್ಲಿ ನಿಮಗೆ ಯಾವುದೇ ಅಡೆತಡೆಗಳು ಉಂಟಾಗುವುದಿಲ್ಲ. ಅಷ್ಟೇ ಅಲ್ಲದೆ, ಕಾರ್ಯ ಗತಿಯು ಶೀಘ್ರ ಮತ್ತು ಸಲೀಸಾಗಿರುತ್ತದೆ. ದಾಖಲೆಗಳು ಸಂಪೂರ್ಣ ಮತ್ತು ಸೂಕ್ತವಾಗಿದ್ದಲ್ಲಿ ಸಾಲಗಾರನ ವಿಶ್ವಾಸಾರ್ಹತೆಯೂ ಹೆಚ್ಚಾಗುತ್ತದೆ ಹಾಗೂ ಸಾಲವು ಬಹುಬೇಗ ಅಂಗೀಕೃತವಾಗುತ್ತದೆ.

ಡೌನ್ ಪೇಮೆಂಟ್ ಶಿಕ್ಷಣ ಸಾಲವನ್ನು ತೆಗೆದುಕೊಳ್ಳುವ ಮುನ್ನ…
ನಿಮಗೆ ಡೌನ್ ಪೇಮೆಂಟ್ ಮಾಡಲು ಸಾಕಷ್ಟು ಹಣವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು 4 ಲಕ್ಷದೊಳಗೆ ಸಾಲವನ್ನು ತೆಗೆದುಕೊಂಡರೆ ಡೌನ್ ಪೇಮೆಂಟ್ ಮಾಡುವ ಅವಶ್ಯಕತೆಯಿಲ್ಲ. ನೀವೇನಾದರೂ 4 ಲಕ್ಷಕ್ಕೂ ಮೇಲ್ಪಟ್ಟು ಸಾಲವನ್ನು ತೆಗೆದುಕೊಳ್ಳುತ್ತಿರುವ ಪಕ್ಷದಲ್ಲಿ ಆ ಮೊತ್ತದ 5 % ಹಣವನ್ನು ಮುಂಗಡವಾಗಿಯೇ ಕಟ್ಟಬೇಕಾಗುತ್ತದೆ. ಅದೇನಾದರೂ ಅಂತರಾಷ್ಟ್ರೀಯ ಅಧ್ಯಯನದ ಸಾಲವಾದಲ್ಲಿ ಡೌನ್ ಪೇಮೆಂಟ್ 15% ಮಾಡ ಬೇಕಾಗುತ್ತದೆ. ಕೆಲವು ಬ್ಯಾಂಕುಗಳು ಡೌನ್ ಪೇಮೆಂಟ್ ಅನ್ನು ಕಂತುಗಳಲ್ಲಿ ಪಾವತಿಸಲು ಕೂಡ ಅವಕಾಶ ನೀಡಿದೆ. ಆದುದರಿಂದ ನಿಮಗೆ ಸೂಕ್ತವಾದದ್ದು ಏನು ಎಂಬುದನ್ನು ಖಚಿತ ಪಡಿಸಿಕೊಳ್ಳಿ.

ನಿಮ್ಮ ಮಿತಿಗಳನ್ನು ತಿಳಿದುಕೊಳ್ಳಿ …
ಶಿಕ್ಷಣ ಸಾಲವನ್ನು ತೆಗೆದುಕೊಳ್ಳುವಾಗ ನೀವು ಗರಿಷ್ಠ ಮಿತಿಯ ಸಾಲವನ್ನು ತೆಗೆದುಕೊಳ್ಳಬಹುದು. ಒಂದು ವೇಳೆ ನಿಮ್ಮ ಅಧ್ಯಯನವು ಕಡಿಮೆ ಮೊತ್ತದಲ್ಲೇ ಪೂರ್ಣಗೊಳ್ಳುವ ಸಾಧ್ಯತೆಗಳಿದ್ದರೆ, ಯಾವಾಗಲೂ ಕನಿಷ್ಠ ಮೊತ್ತ ಎಷ್ಟು ಬೇಕೋ ಅಷ್ಟು ಮಾತ್ರ ಸಾಲ ತೆಗೆದುಕೊಳ್ಳುವುದು ಉತ್ತಮ. ಇದರಿಂದ ಸಾಲವನ್ನು ನೀವು ಬೇಗ ಮರುಪಾವತಿಸಲು ಸಹಾಯವಾಗುತ್ತದೆ. ಅದಷ್ಟೇ ಅಲ್ಲದೆ ಭವಿಷ್ಯದಲ್ಲಿ ನೀವು ಸಂಪಾದಿಸುವ ಹಣವನ್ನು ಉಳಿತಾಯ ಮಾಡಿಟ್ಟುಕೊಳ್ಳಲೂ ನಿಮಗಿದು ಸಹಕರಿಸುತ್ತದೆ.

ಭಾರತೀಯ ಮತ್ತು ಅಂತರಾಷ್ಟ್ರೀಯ ಶಿಕ್ಷಣದ ನಡುವಿನ ವ್ಯತ್ಯಾಸ ಅರಿಯಿರಿ…
ಭಾರತೀಯ ಮತ್ತು ಅಂತರಾಷ್ಟ್ರೀಯ ಅಧ್ಯಯ ನವೆರಡಕ್ಕೂ ಬ್ಯಾಂಕುಗಳು ಶಿಕ್ಷಣ ಸಾಲವನ್ನು ನೀಡುತ್ತವೆ.

LEAVE A REPLY

Please enter your comment!
Please enter your name here