ಶಿರಾದಲ್ಲಿಂದು ವಿಶ್ವಕರ್ಮ ಜಯಂತೋತ್ಸವ

0
54

ಶಿರಾ:

          ತಾಲ್ಲೂಕು ವಿಶ್ವಕರ್ಮ ಸಮಾಜಾಭಿವೃದ್ಧಿ ಸಂಘದ ವತಿಯಿಂದ ಶಿರಾ ನಗರದಲ್ಲಿ ನಾಳೆ(ಸೆ:17)ವಿಶ್ವಕರ್ಮ ಜಯಂತೋತ್ಸವವನ್ನು ಕೈಗೊಳ್ಳಲಾಗಿದೆ.ನಗರದ ವಿಶ್ವಕರ್ಮ ವಿದ್ಯಾರ್ಥಿ ನಿಲಯದ ಆವರಣದಲ್ಲಿ ನಾಳೆ ಬೆಳಿಗ್ಗೆ 10.45ಕ್ಕೆ ಶ್ರೀ ಚಿನ್ನಭಕ್ತಾಚಾರ್ ಅವರ ಸಮಾದಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಜಯಂತೋತ್ಸವ ಕಾರ್ಯಕ್ರಮ ನಡೆಯಲಿದೆ.

              ಬೆಳಿಗ್ಗೆ 11.30ಕ್ಕೆ ನಗರದ ವಿಶ್ವಕರ್ಮ ವಿದ್ಯಾರ್ಥಿ ನಿಲಯದ ಆವರಣದಿಂದ ವಿಶ್ವಕರ್ಮರ ಭಾವಚಿತ್ರವನ್ನೊತ್ತ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಪ್ರಮುಖ ಬೀದಿಗಳಲ್ಲಿ ನಡೆಯುವ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ಪ್ರಕಾರಗಳು ಭಾಗವಹಿಸಲಿವೆ. ಮಧ್ಯಾನ್ಹ 1.30ಕ್ಕೆ ಶ್ರೀ ದಾಸಪ್ಪಾಚಾರ್ ಅವರ ಜೀವ ಸಮಾದಿಗೆ ವಿಶೇಷ ಪೂಜೆ ಹಾಗೂ ಆರತಿ ಉತ್ಸವ ನಡೆಯಲಿದೆ. 

               ಇದೇ ದಿನ ನಡೆಯುವ ವಿಶ್ವಕರ್ಮ ಜಯಂತೋತ್ಸವದ ಸಮಾರಂಭವನ್ನು ಅ.ಕ.ಚಿನ್ನ ಬೆಳ್ಳಿ ಕೆಲಸಗಾರರ ಹಾಗೂ ವರ್ತಕರ ಫೆಡರೇಷನ್ ಅಧ್ಯಕ್ಷ ರಾಮಾಚಾರ್ ಉದ್ಘಾಟನೆ ಮಾಡಲಿದ್ದು ಶಾಸಕ ಬಿ.ಸತ್ಯನಾರಾಯಣ್ ಅಧ್ಯಕ್ಷತೆ ವಹಿಸುವರು. ರಘು ಆಚಾರ್ ಮತ್ತು ಭಾಸ್ಕರಾಚಾರ್ ಅವರನ್ನು ಇದೇ ವೇದಿಕೆಯಲ್ಲಿ ಅಭಿನಂಧಿಸಲಾಗುವುದು.ಕಾರ್ಯಕ್ರಮದಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಬಿ.ಜೆ.ಪಿ. ಮುಖಂಡ ಬಿ.ಕೆ.ಮಂಜುನಾಥ್, ತಹಶೀಲ್ದಾರ್ ರಂಗೇಗೌಡ, ಕಲ್ಕೆರೆ ರವಿಕುಮಾರ್, ನಗರಸಭಾಧ್ಯಕ್ಷ ಅಮಾನುಲ್ಲಾಖಾನ್, ಎಸ್.ಆರ್.ಗೌಡ, ಸಿ.ಪಿ.ಐ. ಲಕ್ಷ್ಮಯ್ಯ, ನಗರಸಭಾ ಸದಸ್ಯೆ ಶಾರದಾ ಶಿವಕುಮಾರ್ ಮುಂತಾದವರು ಭಾಗವಹಿಸುವರು.

LEAVE A REPLY

Please enter your comment!
Please enter your name here