ಶಿಲ್ಪಾ ಶೆಟ್ಟಿ ‘ಪತಿ’ಗೆ ಸಮನ್ಸ್ ನೀಡಿದ ‘ಇಡಿ’

 -  - 


ಮುಂಬೈ:

  ನಟಿ ಶಿಲಾಶೆಟ್ಟಿ ಪತಿ,  ಉದ್ಯಮಿ, ರಾಜ್ ಕುಂದ್ರಾ ಅವರಿಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿಗೊಳಿಸಲಾಗಿದೆ. ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಮಂಗಳವಾರದಂದು ಸಮನ್ಸ್ ನೀಡಲಾಗಿದೆ.

     ಐಪಿಎಲ್ ನಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತು ಎರಡು ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಮಾಲೀಕರಾದ ರಾಜ್ ಕುಂದ್ರಾ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪ್ರಶ್ನಿಸಲು ಮುಂದಾಗಿದ್ದಾರೆ.

   ಅಕ್ರಮ ಬೆಟ್ಟಿಂಗ್ ದಂಧೆ ಆರೋಪ ಹೊತ್ತಿದ್ದ ರಾಜ್ ಕುಂದ್ರಾ ಅವರು ಈಗ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೊಳಪಡುವ ಸಾಧ್ಯತೆಯಿದೆ. 

comments icon 0 comments
0 notes
7 views
bookmark icon

Write a comment...

Your email address will not be published. Required fields are marked *