ಶಿವದಾಸಿಮಯ್ಯರ ಭಾವಚಿತ್ರದ ಮೆರವಣಿಗೆಗೆ ಶಿಮುಶ ಚಾಲನೆ

0
27

ದಾವಣಗೆರೆ:

      ಶಿವಸಿಂಪಿ ಸಮಾವೇಶದ ಅಂಗವಾಗಿ ಭಾನುವಾರ ನಗರದಲ್ಲಿ ಶರಣ ಶಿವದಾಸಿಮಯ್ಯ ಭಾವಚಿತ್ರ ಮೆರವಣಿಗೆಗೆ ಚಿತ್ರದುರ್ಗ ಬೃಹನ್ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಚಾಲನೆ ನೀಡಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಡಾ.ಶಿವಮೂತಿ ಮುರುಘಾ ಶರಣರು, 12ನೇ ಶತಮಾನದಲ್ಲಿ ಆಗಿಹೋಗಿರುವ ದಾರ್ಶನಿಕರು, ಸಮಾಜ ಪರಿವರ್ತಕರು, ಶರಣರು ದೈನಂದಿನ ಜೀವನ ಸಾಗಿಸುತ್ತಲೇ ಆದರ್ಶ ಸಾಧಿಸಿದವರು. ಶಿವದಾಸಿಮಯ್ಯ ಕೂಡ ಅಂತಹ ಶರಣರ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವವರು. ಇಂತಹ ಶರಣರ ಆದರ್ಶವನ್ನು ಪಾಲಿಸುವ ಪ್ರಯತ್ನವನ್ನು ಸಮಾಜ ಮಾಡಬೇಕೆಂದು ಕರೆ ನೀಡಿದರು.

      ಇಲ್ಲಿನ ರೇಣುಕಾ ಮಂದಿರದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಶಿವಯೋಗಾಶ್ರಮ ತಲುಪಿ ಮುಕ್ತಾಯವಾಯಿತು. ಜಾನಪದ ಕಲಾತಂಡಗಳು ಮೆರವಣಿಗೆಗೆ ವಿಶೇಷ ಮೆರಗು ನೀಡಿತ್ತು.

      ಈ ಸಂದರ್ಭದಲ್ಲಿ ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ, ಶಿವಸಿಂಪಿ ಸಮಾಜದ ಜಿಲ್ಲಾಧ್ಯಕ್ಷ ಗುರುಬಸಪ್ಪ ಬೂಸ್ನೂರು, ಪ್ರೊ.ಮಲ್ಲಿಕಾರ್ಜುನ ಜವಳಿ, ಜಗದೀಶ ಬಾವಿಕಟ್ಟೆ, ಇ.ಸಿ.ಎಸ್.ಮೂರ್ತಿ, ಎಸ್.ವಿ.ಕೊಟ್ರೇಶ, ಎಸ್.ಷಣ್ಮುಖಪ್ಪ, ರಾಜಶೇಖರ, ಪ್ರಕಾಶ ಬೂಸ್ನೂರು ಸೇರಿದಂತೆ ಹಲವರು ಹಾಜರಿದ್ದರು.

LEAVE A REPLY

Please enter your comment!
Please enter your name here