ಶುದ್ಧ ಕುಡಿಯುವ ನೀರಿಗಾಗಿ ಕೇಂದ್ರ ಸರ್ಕಾರದಿಂದ 1969 ಕೋಟಿ ಅನುದಾನ

0
36

 ನವದೆಹಲಿ:

Image result for ramesh jigajinagi

      ದೇಶದ ಗ್ರಾಮೀಣ ಪ್ರದೇಶಗಳಿಗೆ ಶುದ್ದ ಕುಡಿಯುವ ನೀರು ಪೂರೈಕೆ ಉದ್ದೇಶಕ್ಕಾಗಿ ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರಗಳಿಗೆ 1969 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವ ರಮೇಶ್ ಜಿಗಜಿಣಗಿ ತಿಳಿಸಿದ್ದಾರೆ.

      ಲೋಕ ಸಭೆಯಲ್ಲಿಂದು ಅವರು, ರಾಜ್ಯ ಸರ್ಕಾರಗಳಿಗೆ ಕೇಂದ್ರ ಕುಡಿಯುವ ನೀರಿಗಾಗಿ ಆರ್ಥಿಕ ಹಾಗು ತಾಂತ್ರಿಕ ನೆರವು ನೀಡುತ್ತಿದೆ. ದೇಶದ ಎಲ್ಲಾ ರಾಜ್ಯಗಳ ಗ್ರಾಮೀಣ ಪ್ರದೇಶದ ಜನತೆಗೆ ಶುದ್ದ ಕುಡಿಯುವ ನೀರು ಪೂರೈಕೆ ಮಾಡಲು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ನಿಯಮಾವಳಿಗಳನ್ನು ರೂಪಿಸಿದೆ ಎಂದರು.

      ಈ ಉದ್ದೇಶಕ್ಕಾಗಿ 2016 ರಿಂದ ಈವರೆಗೆ ಒಟ್ಟು 14890 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ಆಯಾ ರಾಜ್ಯಗಳು ಸ್ವತಂತ್ರವಾಗಿ ಆ ರಾಜ್ಯಗಳಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಲು ಅವಕಾಶ ಕಲ್ಪಿಸಲಾಗಿದೆ. ಜನಸಂಖ್ಯೆ, ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯ, ಮರಳುಗಾಡು ಪ್ರದೇಶ, ಬರಪೀಡಿತ ಪ್ರದೇಶ, ಗುಡ್ಡಗಾಡು ಪ್ರದೇಶಗಳನ್ನು ಆಧರಿಸಿ ಅನುದಾನವನ್ನು ನಿಗಧಿಪಡಿಸಲಾಗುತ್ತಿದೆ ಎಂದರು. ಆಯಾ ರಾಜ್ಯ ಸರ್ಕಾರಗಳು ಅಲ್ಲಿನ ಸ್ಥಳೀಯ ನೀರಿನ ಮೂಲವನ್ನು ಆಧರಿಸಿ ಸೂಕ್ತವಾಗುವಂತಹ ಯೋಜನೆಗಳನ್ನು ರೂಪಿಸಿ ಪ್ರಸ್ತಾವನೆಯನ್ನು ಕಳುಹಿಸಬೇಕು. ನಂತರ ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿ ತನ್ನ ಪಾಲಿನ ಅನುದಾನವನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದರು.  

LEAVE A REPLY

Please enter your comment!
Please enter your name here