ಶೇಂಗಾ ಬೆಳೆಯಲ್ಲಿ ಹೆಚ್ಚು ಇಳುವರಿ ಕುರಿತು ರೈತರ ಸಂವಾದ

0
35

ಪಾವಗಡ :-

      ಶೇಂಗಾ ಬೆಳೆಯಲ್ಲಿ ಹೆಚ್ಚು ಇಳುವರಿ ಪಡೆಯುವ ಹಾಗೂ ಹೊಸ ತಳಿಗಳನ್ನು ಹೇಗೆ ಬೆಳೆಯಬೇಕೆಂಬ ರೈತರ ಸಂವಾದ ಕಾರ್ಯಕ್ರಮವನ್ನು ಕದಿರೆಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿತ್ತು .

      ಪಾವಗಡ ತಾಲ್ಲೂಕಿನ ಕದಿರೆಹಳ್ಳಿ ಗ್ರಾಮದಲ್ಲಿ ಶನಿವಾರ ಕೃಷಿ ಇಲಾಖೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಮಹೇಶ್ವರ್ ರಾವ್ ಸಮ್ಮುಖದಲ್ಲಿ ಶೇಂಗಾ ಬೆಳೆಯಲ್ಲಿ ಸುಧಾರಿತ ಕ್ರಮಗಳ ಬಗ್ಗೆ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಶೇಂಗಾ ಬೆಳೆಗೆ ಸಮೃದ್ದಿ ನೆಲೆಗಡಲೆ ಬೇಸಾಯ ಪದ್ದತಿಗಳನ್ನು ತಾಂತ್ರಿಕತೆಯ ಮೂಲಕ ರೈತರು ಅಳವಡಿಸಲು ಕಡಿಮೆ ನೀರು ಮತ್ತು ಕಡಿಮೆ ಖರ್ಚಿನಿಂದ ಹೆಚ್ಚು ಬೆಳೆಯನ್ನು ಬೆಳೆಯಲು ಇಲಾಖೆ ವತಿಯಿಂದ ಮಾರ್ಗದರ್ಶನ ನಿಡಲಾಗುವುದು ಎಂದರು.

ರೈತರ ಶೇಂಗಾ ಬೆಳೆಗಾರರ ಗುಂಪು ರಚನೆ ಮಾಡಿ ಬೆಳೆದ ಬೆಳೆಯನ್ನು ಗುಂಪಿನ ಮುಖಾಂತರ ಮಾರುಕಟ್ಟೆ ಸೌಲಭ್ಯ ಹಾಗೂ ಬೇಸಾಯಕ್ಕೆ ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುವುದೆಂದು ತಿಳಿಸಿದರು .

      ರೈತ ಸಂವಾದ ಕಾರ್ಯಕ್ರಮ ಕೃಷಿ ಆಯುಕ್ತರಾದ ಸತೀಶ್ , ನಿರ್ದೇಕರಾದ ಬಿ.ವೈ.ಶ್ರೀನಿವಾಸ ,ಜಿಲ್ಲಾ ಜಂಟಿ ಕೃಷಿ ನಿದೆರ್ಶಕ ಜೆ.ಸ್ವಾಮಿ , ಕೃಷಿ ತಜ್ಞರಾದ ಜ್ಯೋತಿರಾವ್ , ತಾ.ಕೃ.ನಿರ್ದೇಶರಾದ ಹನುಮಂತರಾಜು ,ತೋಟಗಾರಿಕಾ ಸಹಾಯಕ ನಿರ್ದೇಶಕರಾದ ಸುಧಾಕರ್ , ಕೃಷಿ ವಿಜ್ಞಾನಿ ಜಾಹೀರ್ ಭಾಷ , ತಾಲ್ಲೂಕು ಇಲಾಖಾಧಿಕಾರಿಗಳಾದ ಸಣ್ಣ ರಂಗಪ್ಪ , ರಾಮಾಂಜಿನಪ್ಪ , ಪ್ರವೀಣ್ ,ಮುರಳಿಧರರಾವ್ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here