ಶ್ರೀರಂಗಪಟ್ಟಣದಲ್ಲಿ ಟಿಪ್ಪು ಗಂಧ ಉತ್ಸವ

0
37

ಚಿತ್ರದುರ್ಗ: ಶ್ರೀರಂಗಪಟ್ಟಣದಲ್ಲಿ ಶನಿವಾರ ರಾತ್ರಿಯಿಂದ ಭಾನುವಾರದವರೆಗೆ ನಡೆಯುವ ಮೈಸೂರು ಹುಲಿ ಟಿಪ್ಪುಸುಲ್ತಾನ್‍ರವರ 226 ನೇ ಗಂಧ ಮತ್ತು ಉತ್ಸವಕ್ಕೆ ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂಆಲಿ ಚಿತ್ರದುರ್ಗದ ಬಡಾಮಕಾನ್‍ನಿಂದ ಶನಿವಾರ ಗಂಧ ತೆಗೆದುಕೊಂಡು ಹೋಗಿ ಸಮರ್ಪಿಸಿದರು.

ಪ್ರತಿ ವರ್ಷದಂತೆ ಈ ಬಾರಿಯೂ ಗಂಧ ತೆಗೆದುಕೊಂಡು ಶ್ರೀರಂಗಪಟ್ಟಣದಲ್ಲಿ ನಡೆಯುವ ಗಂಧ ಮತ್ತು ಉತ್ಸವಕ್ಕೆ ತೆರಳಿದ ಟಿಪ್ಪುಖಾಸಿಂಆಲಿ ಮಾತನಾಡಿ ಯಾವುದೇ ಜಾತಿ ಬೇದವಿಲ್ಲದೆ ಎಲ್ಲರೂ ಉತ್ಸವದಲ್ಲಿ ಪಾಲ್ಗೊಂಡು ಲೋಕಕಲ್ಯಾಣಾರ್ಥವಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಮಳೆ ಬೆಳೆ ಕರುಣಿಸಿ ರೈತಾಪಿ ವರ್ಗ ಸೇರಿದಂತೆ ಸಕಲ ಜೀವರಾಶಿಯೂ ನೆಮ್ಮದಿಯಿಂದ ಇರಲಿ ಎನ್ನುವುದು ಈ ಉತ್ಸವದ ಉದ್ದೇಶ ಎಂದು ಹೇಳಿದರು.
ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಪ್ರಧಾನ ಕಾರ್ಯದರ್ಶಿ ಸಿರಾಜುದ್ದಿನ್ ಸುಲ್ತಾನ್, ಜಮೀರ್, ಸೈಯದ್ ಇಸ್ಮಾಯಿಲ್, ಜಿ.ಎಂ.ವಲೀಂಉಲ್ಲಾ, ಅರ್ಫಾನ್ ಈ ಸಂದರ್ಭದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here