ಶ್ರೀ ಗುರುವಿಗೆ ಅಕ್ಷರದ ಅಭಿವ್ಯಕ್ತಿ

0
117

 

ಅಕ್ಷರ ಕಲಿಸಿ, ಅಜ್ಞಾನ ಅಳಿಸಿ
ದಿವ್ಯ ಸಮನ್ವಯ ಭಾವ ಬೆಳೆಸಿ
ಬಾಳ ಹಾದಿಗೆ ಬೆಳಕು ಬೀರಿದ
ಶ್ರೀ ಗುರುವೆ ನಿಮಗೆ ವಂದನೆ.

ಹೆದರಿ ಎತ್ತಲೋಡುತ್ತಿದ್ದವರ ಕರೆತಂದು
ಕನಿಕರಿಸಿ ಹರಸಿ ಸಾರ್ಥಕತೆಯ ಗುರಿತೋರಿ
ಲೇಸಾಗಿ ಹರಸಿದ
ಶ್ರೀ ಗುರುವೆ ನಿಮಗೆ ವಂದನೆ.

ಕಲಿಯ ಬಂದವರ ಬವಣೆ ಪೂರೈಸಿ
ವಿಶ್ವ ಮಾನವ ಹಿರಿತತ್ವ ಸೂಸಿ
ಬಾಳಿಗೆ ಬೆಳಕಾಗಿ ಬಂದ
ಅಂತರಾತ್ಮ ಶ್ರೀ ಗುರುವೆ ನಿಮಗೆ ವಂದನೆ.

ಹೇ ಗುರುದೇವ, ನಿಮ್ಮ ನೆನೆಪೇ ನಮ್ಮ
ಹೃನ್ಮನ ಮಹತ್ಕಾಂಕ್ಷೆಗೆ ಪರಮ ಶಕ್ತಿ
ನಿಮ್ಮೊಲುಮೆಯ ವಿಮಲ ಸೇವೆಗಿದೋ
ಇಂತೆಮ್ಮ ಅಕ್ಷರದ ಅಭಿವ್ಯಕ್ತಿ.

ಡಿ. ನಾರಾಯಣ,
ಸೀಗೇಹಳ್ಳಿ.

LEAVE A REPLY

Please enter your comment!
Please enter your name here