ಶ್ರೀ ಸತ್ಯ ಪ್ರಕಾಶ್ ಮಾಲವೀಯ ಇನ್ನಿಲ್ಲ

0
34

ನವದೆಹಲಿ

                   ಮಾಜಿ ಪೆಟ್ರೋಲಿಯಂ ಸಚಿವ ಸತ್ಯ ಪ್ರಕಾಶ್ ಮಲಾವಿಯಾ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಮುಂಜಾನೆ ಮೃತಪಟ್ಟಿದ್ದಾರೆ. ಅವರಿಗೆ  84 ವರ್ಷ ವಯಸ್ಸಾಗಿತ್ತು.

                  ಶ್ರೀ ಮಲಾವಿಯಾ ಪ್ರಾಸ್ಟೇಟ್ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಅವರು ಭಾನುವಾರ 1 ಗಂಟೆಗೆ ನಿಧನರಾದರು, ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿ.ಕೆ. ದೀಕ್ಷಿತ್ ತಿಳಿಸಿದ್ದಾರೆ.  ಅವರು ಒಬ್ಬ ಮಗಳನ್ನು ಅಗಲಿದ್ದಾರೆ ಮತ್ತು ಅವರ ಪತ್ನಿ ನಾಲ್ಕು ವರ್ಷಗಳ ಹಿಂದೆ ನಿಧನ ಹೊಂದಿದ್ದರು.ಅಲಹಾಬಾದ್ ನಗರದ ಮಾಲ್ವಿಯಾನಗರದಲ್ಲಿ ಜನಿಸಿದ ಅವರು  ತುರ್ತು ಪರಿಸ್ಥಿತಿಯಲ್ಲಿ 18 ತಿಂಗಳ ಕಾಲ ಜೈಲಿನಲ್ಲಿದ್ದರು.ಮಾಜಿ ಪ್ರಧಾನ ಮಂತ್ರಿ ಚಂದ್ರಶೇಖರ್ ನೇತೃತ್ವದ ಸಚಿವ ಸಂಪುಟದಲ್ಲಿ ಪೆಟ್ರೋಲಿಯಂ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.ಅವರು ಉತ್ತರಪ್ರದೇಶ ಸಚಿವ ಸಂಪುಟದಲ್ಲಿ ಪರಿಸರ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ಪ್ರಜಾ ಸಮಾಜವಾದಿ ಪಕ್ಷದ ಸದಸ್ಯರಾಗಿ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ಕಾಂಗ್ರೆಸ್ ಸೇರಿದರು.

ಮಲೇವಿಯಾ ಅವರ ಅಂತ್ಯಕ್ರಿಯೆ ಅಲಹಾಬಾದ್ನಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಸಲಾಗುವುದು ಎಂದು ಶ್ರೀ ದೀಕ್ಷಿತ್ ಹೇಳಿದರು.

LEAVE A REPLY

Please enter your comment!
Please enter your name here