ಸಂಚಾರಿ ಪೊಲೀಸರನ್ನು ಮಾಲಿನ್ಯದಿಂದ ಮುಕ್ತರಾಗಿಸಲು ಮುಂದಾದ ಬಿಬಿಎಂಪಿ

0
14

ಬೆಂಗಳೂರು: 

Related image 

      ಪ್ರತಿನಿತ್ಯ ಧೂಳು, ಹೊಗೆ, ಮಾಲಿನ್ಯದಿಂಧಾಗಿ ತೊಂದರೆ ಅನುಭವಿಸುವ ಸಂಚಾರ ಪೊಲೀಸರ ಮೇಲೆ ಕೊನೆಗೂ ಕರುಣೆ ತೋರಿರುವ ಪಾಲಿಕೆ,  ಹೊಸ ಚೌಕಿಗಳಲ್ಲಿ ಎಸಿ, ಶುದ್ಧ ಕುಡಿಯುವ ನೀರು, ಮಾಸ್ಕ್‌ ಹಾಗೂ ವೈರ್‌ಲೆಸ್‌ ವಾಕಿಟಾಕಿಯ ವ್ಯವಸ್ಥೆ ಇರುವ ಪೊಲೀಸ್ ಚೌಕಿ ನಿರ್ಮಿಸಲು ಮಹಾನಗರ ಪಾಲಿಕೆಯು ಮುಂದಾಗಿದೆ.

      ಬೆಂಗಳೂರು ನಗರದಲ್ಲಿರುವ ಸುಮಾರು 500 ಪೊಲೀಸ್‌ ಚೌಕಿಯನ್ನು ಅಭಿವೃದ್ಧಿಪಡಿಸಲು ಮಹಾನಗರ ಪಾಲಿಕೆಯು ಟೆಂಡರ್‌ ಕರೆದಿದೆ.

      ಸದಾ ಕಾಲ ರಸ್ತೆಯಲ್ಲಿ ಸಂಚಾರ ನಿರ್ವಹಣೆಯಲ್ಲಿರುವ ಪೊಲೀಸರು, ಶ್ವಾಸಕೋಶ ಹಾಗೂ ಉಸಿರಾಟ ಸಂಬಂಧಿತ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೇಯರ್‌ ಸಂಪತ್‌ ರಾಜ್‌ ಹೇಳಿದ್ದಾರೆ.

      ಆಧುನಿಕ ಉಪಕರಣಗಳಿರುವ ಪೊಲೀಸ್ ಚೌಕಿಯನ್ನು ನಿರ್ಮಿಸಲು ಟೆಂಡರ್ ಕರೆಯಲಾಗಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ 

     

 

 

LEAVE A REPLY

Please enter your comment!
Please enter your name here