ಸಂಚಾರ ಪೊಲೀಸರಿಗೆ ಝಿಕ್ಸರ್ ಬೈಕ್

0
52

ಬೆಂಗಳೂರು:

            ನಗರದ ಸಂಚಾರ ಪೊಲೀಸರಿಗೆ ಹಲವು ಸೌಲಭ್ಯಗಳುಳ್ಳ ? ಸುಜುಕಿ ಝಿಕ್ಸರ್ ದ್ವಿಚಕ್ರ ವಾಹನವನ್ನು ಬುಧವಾರ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹಸ್ತಾಂತರಿಸಿದರು.

               ಬೆಂಗಳೂರಿನ ಸಂಚಾರ ಪೊಲೀಸರಿಗೆ ಮಾರುತಿ ಸುಜುಕಿ ಕಂಪನಿ 5 ಸುಜುಕಿ ಝಿಕ್ಸರ್ ವಿಶೇಷ ಬೈಕನ್ನು ಕೊಡುಗೆಯಾಗಿ ನೀಡಿದೆ. ಈ ಬೈಕನ್ನ ಟ್ರಾಫಿಕ್ ಪೊಲೀಸರಿಗೆ ಗೃಹ ಸಚಿವರು ಹಸ್ತಾಂತರಿಸಿದ್ದಾರೆ. ಸದ್ಯ 5 ಮಾದರಿ ಬೈಕನ್ನು ಕಂಪನಿ ನೀಡಿದೆ.
ಇದು ಸಂಚಾರದಲ್ಲಿ ವಿಶೇಷವಾಗಿ ಕಾರ್ಯನಿರ್ವಹಿಸಲಿದ್ದು, ಟ್ರಾಫಿಕ್ ನಿಯಂತ್ರಣದ ಎಲ್ಲಾ ವಿಶೇಷತೆಯನ್ನು ಹೊಂದಿದೆ. ಜೊತೆಗೆ ಪ್ರಾಥಮಿಕ ಚಿಕಿತ್ಸೆ ಕಿಟ್, ಟ್ರಾಫಿಕ್ ಕ್ಲಿಯರ್ ಸೈರನ್, ರೈಡಿಂಗ್ ಕಂಫರ್ಟಬಲ್ ವಾಕಿ ಟಾಕಿ ವ್ಯವಸ್ಥೆ ಹೊಂದಿದೆ.
ಈ ಬೈಕ್ ಪ್ರಾಯೋಗಿಕವಾಗಿ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಈ ಮಾದರಿಯ ವಾಹನಗಳನ್ನು ಕರ್ತವ್ಯಕ್ಕೆ ಅಳವಡಿಸಿಕೊಳ್ಳಲು ಪೊಲೀಸರು ಚಿಂತನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here