ಸಂಸಾರ ಮತ್ತು ಸಮಾಜದಲ್ಲಿ ಸಾಮಾರಸ್ಯ ಮಹಿಳೆಯರ ಪಾತ್ರ ದೊಡ್ಡದು:-ಹಿರಿಶಾಂತವೀರ ಸ್ವಾಮೀಜಿ

0
44

ಕಡಲಬಾಳು ಗವಿಮಠದಲ್ಲಿ ಗುರುಪೂರ್ಣಿಮ
 

ಹಗರಿಬೊಮ್ಮನಹಳ್ಳಿ:

      ಸಂಸಾರ ಮತ್ತು ಸಮಾಜದಲ್ಲಿ ಸಾಮಾರಸ್ಯ ಮೂಡಬೇಕಾದರೆ ಮಹಿಳೆಯರ ಪಾತ್ರ ದೊಡ್ಡದು ಎಂದು ಹೂವಿನ ಹಡಗಲಿಯ ಗವಿಸಿದ್ದೇಶ್ವರ ಸ್ವಾಮಿ ಶಾಖಾ ಮಠದ ಸ್ವಾಮೀಜಿ ಡಾ||ಹಿರಿಶಾಂತವೀರ ಸ್ವಾಮೀಜಿ ಅಭಿಪ್ರಾಯ ಪಟ್ಟರು.      

      ಅವರು ತಾಲೂಕಿನ ಕಡಲಬಾಳು ಗ್ರಾಮದ ಶ್ರೀಗವಿಸಿದ್ದೇಶ್ವರ ಸ್ವಾಮಿಯ ಶಾಖಾ ಮಠದಲ್ಲಿ ವಿಶೇಷವಾಗಿ ಮಹಿಳೆಯರಿಂದಲೇ ಏರ್ಪಡಿಸಲಾಗಿದ್ದ ಗುರುಪೂರ್ಣಿಮ ಕಾರ್ಯಕ್ರಮ ಹಾಗೂ ಧರ್ಮಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಇಂದು ಮಹಿಳೆಯರು ಟಿ.ವಿ.ಯಂತ ಮಾಯಾ ಜಾಲದಿಂದ ಹೊರಬಂದು ಮಹಿಳಾ ಬಳಗ ರಚನೆಮಾಡಿಕೊಂಡು ತಾವೇ ಸ್ವತಃ ಧರ್ಮಸಭೆಯನ್ನು ಏರ್ಪಡಿಸಿರುವುದು ಸಮಾಜದಲ್ಲಿರುವ ಎಲ್ಲಾ ಮಹಿಳೆಯರಿಗೆ ಈ ಗ್ರಾಮದ ಮಹಿಳೆಯರು ಮಾದರಿಯಾಗಿದ್ದಾರೆ ಎಂದರು. ಮಹಿಳೆ ಮನಸ್ಸುಮಾಡಿದರೆ, ಸಂಸಾರದಲ್ಲಿ ಸುಖ-ನೆಮ್ಮದಿಯನ್ನು ಕಾಣಬಹುದು, ಅದರಂತೆ ಸಮಾಜದಲ್ಲಿ ಜಾತಿಯತೆಯನ್ನು ಮೀರಿ ಸಂಘಟನೆ ಸಹೃದಯ ಪ್ರೀತಿ ವತ್ಸಲ್ಯವನ್ನು ತುಂಬುವಂತ ಒಳ್ಳೆಯ ಕೆಲಸಗಳ ಕಡೆಗಮನ ಹರಿಸುತ್ತಿರುವುದು ಸ್ವಾಗತರ್ಹ ಎಂದರು.

      ಅಧ್ಯಕ್ಷತೆ ವಹಿಸಿದ್ದ ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಶಿವಚಾರ್ಯ ಮಾತನಾಡಿ, ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳು ಕುಟುಂಬಗಳನ್ನು ಹಿಭಾಗಮಾಡುವಂತ ಕೆಟ್ಟ ಸಂಸ್ಕøತಿಯನ್ನು ರೂಢಿಸುತ್ತಿವೆ. ಅದರಿಂದ ಹೊರಬಂದು ಮಹಿಳೆಯರು ಇಂಥಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವುದರಿಂದ, ಆಚಾರ ವಿಚಾರ ನಂಬಿಕೆಯನ್ನುವುದು ಉಳಿಯುತ್ತದೆ ಎಂದರು.

      ಹನಸಿಮಠದ ಶಂಕರ ಸ್ವಾಮೀಜಿ, ನಂದಿಪುರ ಮಠದ ಮಹೇಶ್ವರ ಸ್ವಾಮೀಜಿ, ಹಂಪಸಾಗರ ಮಠದ ರುದ್ರಮುನಿ ಸ್ವಾಮೀಜಿ, ಹಾಲಸ್ವಾಮಿ ಮಠದ ಹಾಲಶಂಕರ ಸ್ವಾಮೀಜಿ, ಮೈನಳ್ಳಿ ಸಿದ್ದಲಿಂಗ ಶಿವಚಾರ್ಯ ಸೇರಿದಂತೆ ಅನೇಕ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು.

      ಗ್ರಾ.ಪಂ.ಮಾಜಿ ಅಧ್ಯಕ್ಷ ಮಂಜುನಾಥ ಗೌಡ್ರು, ಎ.ಎಂ.ನಾಗರಾಜ್, ದೊಡ್ಡಬಸಯ್ಯ, ಗುರುರಾಜ್, ಎಚ್.ಎಂ.ಕೊಟ್ರಯ್ಯ, ನಾಗರಾಜ್, ಲಿಂಗರಾಜ್ ಇತರರಿದ್ದರು. ಎ.ಎಂ.ರಾಚಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್.ಕೆ.ಸುಮ, ಟಿ.ಎಂ.ಪ್ರೇಮಜ್ಯೋತಿ, ಎಸ್.ಎಸ್.ಎಂ.ಸೌಭಾಗ್ಯ, ಓ.ನಾಗರತ್ನ, ಟಿ.ಎಂ.ಶೋಭಾ, ಪ್ರತಿಭಾ, ಗಿರಿಜಾ ಹಾಗೂ ವಿದ್ಯಾ ಕಾರ್ಯಕ್ರಮ ನಿರ್ವಹಿಸಿದರು.

      ಗವಿಶ್ರೀ ಅಕ್ಕನ ಮಹಿಳಾ ಬಳಗದಿಂದ ಭಕ್ತಿಗೀತೆ, ಜಾನಪದಗೀತೆ ಸೇರಿ ವಿವಿಧ ಸಾಂಸ್ಕತಿ ಕಾರ್ಯಕ್ರಮಗಳು ಜರುಗಿದವು. ‘ಕಡಲಬಾಳು ಗ್ರಾಮದಲ್ಲಿ ಮಹಿಳೆಯರೆಲ್ಲ ಸೇರಿ ಅಕ್ಕನ ಬಳಗ ರಚಿಸಿಕೊಳ್ಳುವ ಮೂಲಕ ನೂರಾರು ಮಹಿಳೆಯರು ಧಾರ್ಮಿಕ ಕ್ರಾಂತಿ ಮಾಡುತ್ತಿದ್ದಾರೆ. ಅಲ್ಲದೆ ಗ್ರಾಮದ ಮಕ್ಕಳು ಯುವ ಜನತೆ ಸಂಸ್ಕಾರ ಸಂಸ್ಕತಿಯಡೆಗೆ ವಾಲುತ್ತಿದ್ದಾರೆ. ಅವರಿಂದಲೇ ಈ ಮಠದಲ್ಲಿ ವಿವಿಧ ಕಾರ್ಯಕ್ರಮಗಳು ಏರ್ಪಡುತ್ತಿರುವುದು ಇತರೆ ಗ್ರಾಮಗಳಿಗೆ ಮಾದರಿಯಾಗಿದೆ.’

-ಸೋಮಶೇಖರ ಸ್ವಾಮೀಜಿ. ಗವಿಮಠ ಕಡಲಬಾಳು.

LEAVE A REPLY

Please enter your comment!
Please enter your name here