ಸದಾಶಿವ ಆಯೋಗದ ವರದಿ ಅಂಗೀಕರಿಸಲು ಒತ್ತಾಯ

0
17

ಹಾವೇರಿ :

             ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗದ ವರದಿ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡುವಂತೆ ಒತ್ತಾಯಿಸಿ ಅಕ್ಟೋಬರ್ 2 ರಂದು ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾದಿಗ ಸಮಾಜದ ರಾಜ್ಯ ಕಾರ್ಯದರ್ಶಿ ಸಂಜೀವಗಾಂಧಿ ಸಂಜೀವಣ್ಣವರ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಆಡಳಿತಕ್ಕೆ ಬಂದ ಪಕ್ಷಗಳು ನ್ಯಾ ಸದಾಶಿವ ವರದಿಯನ್ನು ಅಂಗೀಕರಿಸಲು ಮೀನಾಮೇಷ ಮಾಡುತ್ತಿವೆ.

                ವರದಿ ಜಾರಿಯಾಗಬೇಕು ಎಂದು ನಿರಂತರ ಹೋರಾಟ ಮಾಡಲಾಗುತ್ತಿದ್ದರೂ ಕಾಲಹರಣ ಮಾಡುತ್ತಾ ಮಾದಿಗ ಸಮಾಜವನ್ನು ನಿರ್ಲಕ್ಷೆ ಮಾಡುತ್ತಿರುವುದು ಖಂಡನೀಯ. ಸಿಎಂ ಕುಮಾರಸ್ವಾಮಿಯವರು ಚುನಾವಣೆ ಪೂರ್ವದಲ್ಲಿ ನ್ಯಾ ಎಜೆ ಸದಾಶಿವ ವರದಿಯನ್ನು ಅಗೀಕರಿಸುವ ಸಹಮತ ನೀಡಲಾಗಿದ್ದು, ಶೀಘ್ರವೇ ತಮ್ಮ ಹೇಳಿಕೆಗೆ ಬದ್ದವಾಗಿ ಸದಾಶಿವ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡುವಂತೆ ಒತ್ತಾಯಿಸಿದರು. ಸಮುದಾಯದ ರಾಜ್ಯ ಮುಖಂಡ ಉಡಚಪ್ಪ ಮಾಳಗಿ ಮಾತನಾಡಿ ರಾಜ್ಯದಲ್ಲಿ ಸಮುದಾಯ 50 ಲಕ್ಷ ಜನಸಂಖ್ಯೆ ಹೊಂದಿದ್ದು, ಆರ್ಥಿಕವಾಗಿ, ರಾಜಕೀಯವಾಗಿ, ಹಾಗೂ ಸಾಮಾಜಿಕವಾಗಿ ಹಿಂದಿಳಿದಿದೆ. ಸದಾಶಿವ ಆಯೋಗ ಜಾರಿಗೆ ತಂದರೆ ಎಲ್ಲ ರಂಗದಲ್ಲಿ ಅಭಿವೃದ್ಧಿಯಾಗಲು ಸಾಧ್ಯ. ಅಕ್ಟೋಬರ 02 ರಂದು ಜರುಗುವ ಧರಣಿಗೆ ಜಿಲ್ಲೆಯಿಂದ 10 ಸಾವಿರ ಜನರು ಹೊರಡಲಿದ್ದು, ವಾಹನದ ವ್ಯವಸ್ಥೆ ಮಾಡಲಾಗುವುದು. ಸದಾಶಿವ ಆಯೋಗ ಅಂಗೀಕಾರ ವಿಳಂಬವಾದರೆ ಮುಂದಿನ ಲೋಕಸಭೆಯ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಸಮ್ಮಿಶ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ನಂತರ ಸಮುದಾಯದ ಮುಖಂಡರು ಅ 02 ರಂದು ಜರುಗುವ ಅನಿರ್ಧಿಷ್ಟಾವಧಿ ಧರಣಿಯ ಕರಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾರುತಿ ಬಣಕಾರ.ರಾಜು ಹರಿಜನ.ರಮೇಶ ಹರಿಜನ.ಗಂಗಪ್ಪ ಮೈಲಮ್ಮನವರ ಹಾಜರಿದ್ದರು.

LEAVE A REPLY

Please enter your comment!
Please enter your name here