ಸನ್‍ರೈಸರ್ಸ್ ಹೈದರಾಬಾದ್‍ಗೆ 5 ರನ್‍ಗಳ ಗೆಲುವು

0
19

ಹೈದರಾಬಾದ್:

ಐಪಿಎಲ್ ಕ್ರಿಕೆಟ್‍ನ 39ನೇ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡವು ಆರ್‍ಸಿಬಿ ತಂಡವನ್ನು 5 ರನ್‍ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ನಿಗದಿತ 20 ಓವರ್‍ಗಳಲ್ಲಿ ಎಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು 146 ರನ್‍ಗಳನ್ನು ಗಳಿಸಿತು. ವಿಲಿಯಂಸನ್ 56, ಹಸನ್ 35 ರನ್ ಗಳಿಸಿದರು.
ನಂತರ ಬ್ಯಾಟಿಂಗ್ ಆರಂಭಿಸಿದ ಆರ್‍ಸಿಬಿ ಗೆಲುವಿನ ಹತ್ತಿ ಬಂದು ಕೊನೆಗೆ 20 ಓವರ್‍ಗಳಲ್ಲಿ 6 ವಿಕೆಟ್‍ಗಳನ್ನು ಕಳೆದುಕೊಂಡು 141 ರನ್‍ಗಳಿಸಿ 5 ರನ್‍ಗಳಿಂದ ಸೋಲೊಪ್ಪಿಕೊಂಡಿತು. ಕೊಹ್ಲಿ 39, ಕೋಲಿನ್ 33, ಮನ್‍ದೀಪ್ ಸಿಂಗ್ ಅಜೇಯ 22, ಪಟೇಲ್ 20 ರನ್‍ಗಳನ್ನು ಗಳಿಸಿದರು.

ಸಂಕ್ಷಿಪ್ತ ಸ್ಕೋರ್:
ಹೈದರಾಬಾದ್ : 146/10 (20)
ಆರ್‍ಸಿಬಿ : 141/6 (20)

LEAVE A REPLY

Please enter your comment!
Please enter your name here