ಸಮಗ್ರ ಕೃಷಿಯಿಂದ ಹೆಚ್ಚು ಇಳುವರಿ

0
51
ನಿಟ್ಟೂರು:
ಸಮಗ್ರ ಕೃಷಿ ಅಭಿವೃದ್ಧಿಗೆ ಹೆಚ್ಚು ಹೊತ್ತು ನೀಡಿದಾಗ ಮಾತ್ರ ರೈತರು ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಚಿಕ್ಕಪ್ಪಯ್ಯ ತಿಳಿಸಿದರು.
      ಗುಬ್ಬಿ ತಾಲ್ಲೂಕಿನ ನಿಟ್ಟೂರಿನಲ್ಲಿ ಹಮ್ಮಿಕೊಂಡಿದ್ದ ಇಲಾಖೆಗಳ ನಡೆಗೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಲಾಖೆಗಳಿಂದ ಬರುವ ಸೌಲಭ್ಯಗಳನ್ನು ಎಲ್ಲ ರೈತರು ಪಡೆದುಕೊಂಡು ಆರ್ಥಿಕವಾಗಿ ಮುಂದೆ ಬರಬೇಕು. ಜೊತೆಗೆ ರೈತರು ಸಾವಯವ ಗೊಬ್ಬರಗಳನ್ನು ಹಾಕುವುದರಿಂದ ರೈತರಿಗೆ ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗುತ್ತದೆ.
      ಹೈನುಗಾರಿಕೆ ಮಾಡುವುದರಿಂದ ಎಲ್ಲ ರೈತರು ಹೆಚ್ಚಿನದಾಗಿ ಲಾಭ ಪಡೆಯಬಹುದು, ಜೊತೆಗೆ ನಮ್ಮ ಇಲಾಖೆಗಳಿಂದ ರೈತರಿಗೆ ಸಾಕಷ್ಟು ಸೌಲಭ್ಯವನ್ನು ಕೊಡುತ್ತಿದ್ದೇವೆ. ಎಲ್ಲ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬೇಕು. ಜೊತೆಗೆ ನಾನು ಇವತ್ತು ಇಲಾಖೆಯಿಂದ ನಿವೃತ್ತಿ ಹೊಂದುತ್ತಿದ್ದು ನಾನು ಗುಬ್ಬಿಯಲ್ಲಿ ಸುಮಾರು 10ವರ್ಷಗಳ ಕಾಲ ಸುದೀರ್ಘ ಕೆಲಸ ಮಾಡಿದ್ದು ನನಗೆ ಎಲ್ಲರೂ ಸಹ ಸಹಕಾರ ಕೊಟ್ಟಿರುವುದರಿಂದ ನನ್ನ ಕೆಲಸವನ್ನು ನಿಭಾಯಿಸಿದ್ದೇನೆ. ಎಲ್ಲ ಜನಪ್ರತಿನಿಧಿಗಳು ರೈತರು ಸಹಕಾರ ಕೊಟ್ಟಿರುವುದಕ್ಕೆ ನಾನು ಆಭಾರಿಯಾಗಿರುತ್ತೇನೆ ಎಂದು ತಿಳಿಸಿದರು.

      ನಿವೃತ್ತ ವಿಜ್ಞಾನಿ ಡಾ.ಶಶಿಕಾಂತ್ ಮಾತನಾಡಿ, ಮಣ್ಣಿನ ಆರೋಗ್ಯ ಕಾಪಾಡುವುದರಿಂದ ಮನುಷ್ಯನ ಆರೋಗ್ಯವು ಉತ್ತಮವಾಗಿರುತ್ತದೆ. ಸಮಗ್ರ ಕೃಷಿಗೆ ಹಸಿರು ಎಲೆ ಇರುವ ಗಿಡಗಳನ್ನು ಬೆಳೆದು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವುದರಿಂದ ಅಧಿಕ ಇಳುವರಿ ಪಡೆದು ಹೆಚ್ಚಿನ ಲಾಭ ಪಡೆಯಬಹುದು. ಮನುಷ್ಯನ ಆರೋಗ್ಯ ಸ್ಥಿರವಾಗಿರಬೇಕಾದರೆ ಪೋಷಕಾಂಶಗಳ ಅವಶ್ಯಕತೆ ಮುಖ್ಯವಾಗಿರುವುದರಿಂದ ಕಿರುದಾನ್ಯಗಳನ್ನು ಉಪಯೋಗಿಸಬೇಕು. ರೈತರು ಕೃಷಿ ಜೊತೆಗೆ ಲಾಭದಾಯಕವಾದ ಹೈನುಗಾರಿಕೆಯನ್ನು ಅಳವಡಿಸಿಕೊಂಡು ಉತ್ತಮ ತಳಿಗಳನ್ನು ತಂದು ಸುಧಾರಿತ ಮೇವಿನ ತಳಿಗಳನ್ನು ಬೆಳೆದು ಹೈನುಗಾರಿಕೆ ಮಾಡುವುದರಿಂದ ರೈತರು ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ವಿವಿಧ ಇಲಾಖೆಗಳ ಮಳಿಗೆಗಳು ಭಾಗವಹಿಸಿ ಪ್ರಾತ್ಯಕ್ಷಿಕೆಯನ್ನು ತೋರಿಸಿದರು.
 

LEAVE A REPLY

Please enter your comment!
Please enter your name here