ಸಮಾಜ ಸರಿದಾರಿಯಲ್ಲಿ ನಡೆಯುವಲ್ಲಿ ಶರಣರ ಪಾತ್ರ ಮಹತ್ವದ್ದು

0
31

 ತಿಪಟೂರು:

      ಸಮಾಜ ದಾರಿ ತಪ್ಪಿದಾಗ ಸರಿದಾರಿಗೆ ತರುವ ಕೆಲಸವನ್ನು ಭಾರತದ ವಿವಿಧÀ ದಾರ್ಶನಿಕರು ಮಾಡಿ, ಮನುಷ್ಯ ಉತ್ತಮ ದಾರಿಯಲ್ಲಿ ನಡೆಯಲು ಸನ್ಮಾರ್ಗ ತೋರಿದ್ದಾರೆಂದು ಶಾಸಕ ಬಿ.ಸಿ.ನಾಗೇಶ್ ತಿಳಿಸಿದರು.

      ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಹಡಪದ ಅಪ್ಪಣ್ಣನವರ ವಿಚಾರಗಳು ಇಂದಿಗೂ ಅವಶ್ಯಕ. ಸಮಾಜವು ಜಾತಿ ವ್ಯವಸ್ಥೆಯಿಂದ ಒಡೆದು ಹೋದಾಗ ಒಂದುಗೂಡಿಸಲು ತಮ್ಮ ಜೀವನವನ್ನೇ ಅರ್ಪಿಸಿದ್ದಾರೆ. ಭಾರತವು ಸಾವಿರಾರು ವರ್ಷಗಳಿಂದ ಸಾಂಸ್ಕøತಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರೆಯಲು ಆಯಾ ಕಾಲಕ್ಕೆ ತಕ್ಕಂತೆ ಬದಲಾಗಿದೆ ಎಂದು ತಿಳಿಸಿದರು.

      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಕೃಷ್ಣಮೂರ್ತಿಯವರು, 12ನೇ ಶತಮಾನದಲ್ಲಿ ಅನೇಕ ಶರಣ-ಶರಣೆಯರು ಬಂದು ಹೋಗಿದ್ದು, ಅದರಲ್ಲಿ ಬಹಳ ಪ್ರಮುಖವಾದ ಬಸವಣ್ಣನವರ ಅನುಯಾಯಿಗಳಲ್ಲಿ ಒಬ್ಬರಾದ ಹಡಪದ ಅಪ್ಪಣ್ಣ ತಮ್ಮ ವೃತ್ತಿಯನ್ನೇ ದೇವರೆಂದುಕೊಂಡು ಬಂದರು ಎಂದು ಹೇಳಿದರು.

      ಸಮಾಜದ ಮುಖಂಡರಾದ ಗೋವಿಂದರಾಜು ಮಾತನಾಡಿ, ದೇಶದಲ್ಲಿ ಕುಲಕಸುಬುಗಳು ನಶಿಸುತ್ತಿವೆ. ಆದರೆ ಕ್ಷೌರಿಕ ವೃತ್ತಿ ನಶಿಸಲು ಸಾಧ್ಯವಿಲ್ಲ. ಹಡಪದ ಮತ್ತು ಸವಿತಾ ಸಮಾಜ ಎರಡೂ ಒಂದೇ ಆಗಿದ್ದು, ವೃತ್ತಿ ಮತ್ತು ಕಲೆಯನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಸರ್ಕಾರ ಈ ಜನಾಂಗದವರ ಬಗ್ಗೆ ಗಮನಹರಿಸಿ ಒಂದು ನಿಗಮ ಮಂಡಳಿಯನ್ನು ಸ್ಥಾಪಿಸಿ ನಮ್ಮ ಜನಾಂಗದವರು ಮುಂದೆ ಬರಲು ಅನುಕೂಲ ಮಾಡಿಕೊಡಬೇಕು ಹಾಗೆಯೆ ಸವಿತಾ ಮಹರ್ಷಿ ಜಯಂತಿ ಆಚರಿಸಬೇಕು ಎಂದು ಒತ್ತಾಯಿಸಿದರು.

      ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ. ವಿ.ಮಂಜುನಾಥ್, ಇ.ಇ.ಓ ಡಾ.ಷಡಕ್ಷರಿ, ವಿವಿಧ ಇಲಾಖೆಯ ಅಧಿಕಾರಿಗಳು, ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here