ಹಲ್ಲುಗಳ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕು

0
23

 ಕೊರಟಗೆರೆ:
   ನಾವು ತಿನ್ನುವಂತಹ ಆಹಾರದ ಜೊತೆಗೆ ಬಾಯಿಯೂ ಸ್ವಚ್ಚತೆಯಿಂದ ಇರಬೇಕು. ಇಲ್ಲವಾದಲ್ಲಿ ಹಲವು ಕಾಯಿಲೆಗಳು ಬರಲು ಕಾರಣವಾಗುತ್ತದೆ ಎಂದು ಕೌಶಲ್ಯಾಭಿವೃಧ್ದಿ ನಿಗಮದ ಮಾಜಿ ಅಧ್ಯಕ್ಷ ಮುರಳಿಧರ ಹಾಲಪ್ಪ ತಿಳಿಸಿದರು.

      ಅವರು ಬುಧವಾರ ಪಟ್ಟಣದಲ್ಲಿ ನಾಲ್ಕು ದಿನಗಳ ಕಾಲ ವಾಸವಿ ಯುವಜನ ಸಂಘ, ಡಿಎಪಿಎಂ, ಆರ್.ವಿ.ದಂತಕಾಲೇಜು ಮತ್ತು ಆಸ್ಪತ್ರೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸರ್ಕಾರಿ ಶಾಲಾ ಮಕ್ಕಳಿಗೆ ದಂತ ಉಚಿತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರದ ಎರಡನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

      ಗ್ರಾಮೀಣ ಪ್ರದೇಶದಲ್ಲಿ ದಂತಗಳ ಬಗ್ಗೆ ಕಾಳಜಿ ಇಡುವುದಿಲ್ಲ. ಮಕ್ಕಳಲ್ಲಿ ಇದರ ಬಗ್ಗೆ ಅರಿವು ಮೂಡಿಸುತ್ತಿರುವುದು ಉತ್ತಮ ಪ್ರಯತ್ನ ಎಂದ ಅವರು, ಹಿಂದಿನ ದಿನಗಳಲ್ಲಿ ಕೇವಲ ಜಿಲ್ಲಾ ಕೇಂದ್ರಗಳಿಗಷ್ಟೇ ದಂತ ವೈದ್ಯರು ಸೀಮಿತವಾಗಿದ್ದರು. ಆದರೆ ಇಂದು ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿಯೂ ವೈದ್ಯರಿದ್ದಾರೆ. ಎಲ್ಲರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

      ಈ ಸಂದರ್ಭದಲ್ಲಿ ದಿಲೀಪ್‍ಕುಮಾರ್, ಮಂಜುನಾಥ್, ಕರವೇ ನಟರಾಜು, ಡಾ.ಪ್ರತಿಭಾ, ವಾಸವಿ ಯುವಜನ ಸಂಘದ ಅಧ್ಯಕ್ಷ ಎಂ.ಜಿ ಬದರಿ ಪ್ರಸಾದ್, ನವೀನ್‍ಕುಮಾರ್ ಗುಪ್ತ, ಬಾಲಾಜಿ, ರಘು ಸೇರಿದಂತೆ ಇತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here