ಸರ್ಕಾರ ಬೀಳಿಸುವ ಬಿಜೆಪಿ ಯತ್ನ ವ್ಯರ್ಥ

0
114

 ಬೆಂಗಳೂರು:

      ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರವನ್ನು ಬೀಳಿಸುವ ಬಿಜೆಪಿ ಯತ್ನ ಫಲಿಸದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

      ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಕೆಲ ಶಾಸಕರಿಗೆ ಹಣದ ಆಮಿಷವೊಡ್ಡಿ ಸರ್ಕಾರ ಪತನಗೊಳಿಸುವ ಹಂತಕ್ಕೆ ಬಿಜೆಪಿಯು ಕೈ ಹಾಕಿದ್ದು. ಇದಕ್ಕೆ ಲಾಟರಿ, ಇಸ್ಪೀಟ್ ದಂಧೆಯಲ್ಲಿ ತೊಡಗಿದ್ದವರ ಹಣದಿಂದಾಗಿ ಸಮಿಶ್ರ ಸರ್ಕಾರದ ಶಾಸಕರಿಗೆ ಹಣದ ಆಮಿಷವೊಡ್ಡಿ, ಬಿಜೆಪಿಯತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ, ಈ ಕಿಂಗ್ ಪಿನ್‍ಗಳು ಅವರು ಯಾರು? ಅವರ ಹಿನ್ನೆಲೆ ಏನೂ ಅಂತ ನನಗೆ ಗೊತ್ತು. ಅವರಲ್ಲಿ ಸಕಲೇಶ್ವರದ ಕಾಫಿ ಪ್ಲಾಂಟರ್ ಓರ್ವರು ರೆಸಾರ್ಟ್ ಮಾಡಲು ಹೋಗಿದ್ದವರು ಹಾಗೂ ಜನ್ಮ ಕೊಟ್ಟ ಮಗುವಿಗೆ ಗುಂಡಿಟ್ಟು ಕೊಂದವರು ಇದರಲ್ಲಿ ಭಾಗಿಯಾಗಿದ್ದಾರೆ. ಬಿಬಿಎಂಪಿ ಕಡತ ಸುಟ್ಟವರು ಇಂದು ಸರ್ಕಾರ ಬೀಳಿಸುವ ಕಿಂಗ್‍ಪಿನ್ ಆಗಿದ್ದಾರೆ.

      ಈ ಕಿಂಗ್‍ಪಿನ್‍ಗಳ ಮೂಲಕ ಹಣ ಹೊಂದಿಸುವ ಕೆಲಸ ನಡೆಯುತ್ತಿದೆ. ಇಸ್ಪೀಟ್ ದಂಧೆಯಲ್ಲಿ ಕೋಟ್ಯಾಂತರ ಹಣ ಸಂಗ್ರಹಿಸಿದವರು ಕೂಡಾ ಇದರಲ್ಲಿ ಸೇರಿದ್ದು, ಇವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಬೀಳಿಸಲು ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್ ಅವರ ಕುಮ್ಮಕ್ಕಿನಿಂದ ಮಲ್ಲೇಶ್ವರ ಶಾಸಕ ನಾರಾಯಣ್ ಸಂಬಂಧಿ, ವಿಜಯ ಕಿರಂಗಧೂರು, ಜಿಮ್ ಸೋಮ. ಫೈಟರ್ ರವಿ, ಕ್ಲಬ್ ಉದಯ್‍ಗಾರ ಅವರು ಸರ್ಕಾರ ಪತನಕ್ಕೆ ಹಣ ಹೊಂದಿಸುವ ಕಿಂಗ್‍ಪಿನ್‍ಗಳಾಗಿದ್ದಾರೆ ಎಂದು ಹೇಳಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here