ಸರ್ಜಾ #Metoo ಪ್ರಕರಣ ವಿಚಾರಣೆ : ನ.9 ಕ್ಕೆ ಮುಂದೂಡಿಕೆ

0
37

ಬೆಂಗಳೂರು:

     ಬಹುಭಾಷಾ ನಟ‌ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜುನ್​ ಸರ್ಜಾ ಸಲ್ಲಿಸಿದ್ದ ಅರ್ಜಿ​ ವಿಚಾರಣೆಯನ್ನು ನವೆಂಬರ್​ 9ಕ್ಕೆ ನ್ಯಾಯಾಲಯ ಮುಂದೂಡಿದೆ.

ನಟ ಅರ್ಜುನ್‍ಸರ್ಜಾರನ್ನು ಬಿಡದ ‘ಮೀ ಟೂ’ ಬಿಸಿ

      ಕಬ್ಬನ್​ ಪಾರ್ಕ್​ ಪೊಲಿಸ್​ ಠಾಣೆಯಲ್ಲಿ ಅರ್ಜುನ್​ ಸರ್ಜಾ ವಿರುದ್ಧ ಶ್ರುತಿ ಹರಿಹರನ್​ ದಾಖಲಿಸಿರುವ ಎಫ್​ಐಆರ್​ ರದ್ದು ಕುರಿತ ಅರ್ಜಿ ವಿಚಾರಣೆಯೂ ಹೈಕೋರ್ಟ್​ನಲ್ಲಿ ನಡೆಯುತ್ತಿದೆ.

      ಮೆಯೋಹಾಲ್​ನ 22ನೇ ಸಿಟಿ ಸಿವಿಲ್​ ಕೋರ್ಟ್​ನಲ್ಲಿ ನಡೆಯಬೇಕಿದ್ದ ಮಾನನಷ್ಟ ಮೊಕದ್ದಮೆ ಅರ್ಜಿ ವಿಚಾರಣೆ ಮುಂದೂಡಿದ್ದು, ಸರ್ಜಾ‌ ಪರ‌ ವಕೀಲರು ಕಾಲಾವಕಾಶಕ್ಕೆ ಮನವಿ ಮಾಡಿದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here