ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮ ದಿನ

0
34

ಹಾವೇರಿ :

           ಇಲ್ಲಿನ ಬಸವೇಶ್ವರ ನಗರದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜ್ ಹಾಗೂ ವಿಶ್ವಭಾರತಿ ಇಂಗ್ಲೀಷ್ ಮಿಡಿಯಂ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮ ದಿನದ ಗೌರವಾರ್ಥವಾಗಿ ಸಪ್ಟಂಬರ 15 ರಂದು ಇಂಜನಿರಿಂಗ್ ದಿನಾಚಾರಣೆಯನ್ನು ಸರ್ ಎಂ ವ್ಹಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಸ್ವಾಮಿ ವಿವೇಕಾನಂದ ಪಿ ಯು ಕಾಲೇಜಿನ ಪ್ರಾಚಾರ್ಯರಾದ ರವಿಕುಮಾರ ಪೂಜಾರ ಮಾತನಾಡಿ ಸರ್ ಎಂ ವಿಶ್ವೇಶ್ವರಯ್ಯನವರು ಕಾಯಕದಲ್ಲಿ ನಿಷ್ಠೆ ಪ್ರಮಾಣಿಕತೆಗೆ ಹೆಸರುವಾಸಿಯಾದವರು.ಮನುಷ್ಯ ಸುಮ್ಮನೆ ಕುಳಿತುಕೊಳ್ಳಬಾರದು ಅದರಿಂದ ಅವನಿಗೂ ಹಾಗೂ ದೆಶಕ್ಕೆ ಹಾನಿಯಾಗುತ್ತದೆ ಎಂದು ಸದಾಕ್ರೀಯಾಶೀಲರಾಗುವಂತೆ ಕರೆ ನೀಡಿದ ಅಪ್ರತಿಮ ಜ್ಞಾನ ಉಳ್ಳವರಾಗಿದ್ದು, ಕನ್ನಡಿಗರು ಎಂಬುವುದು ಹೆಮ್ಮೆಯಾಗಿದೆ.ಭಾರತ ಕೃಷಿ ಪ್ರಧಾನವಾದರೂ ಹೆಚ್ಚು ಕೈಗಾರಿಕೆಗಳಿಗೆ ಮಹತ್ವ ನೀಡಿ ಉದ್ಯೋಗವಕಾಶವನ್ನು ಸೃಷ್ಠಿಸಿ ಸ್ವಾವಲಂಬನೆ ಕಲ್ಪನೆ ಮೂಡಲು ಬಹುಮುಖ್ಯವಾದ ಪಾತ್ರವಿದೆ.

              1914 ರಲ್ಲಿ ತಮ್ಮ ಅನುಭವ ಪ್ರಸಾರ ಮಾಡುವ ಪ್ರಯತ್ನವಾಗಿ ಬೆಂಗಳೂರಿನಲ್ಲಿ ಇಂಜನಿರಿಂಗ್ ಸ್ಕೂಲ್ ಸ್ಥಾಪನೆ ಮಾಡಿ ದೇಶ ವಿಶ್ವದಲ್ಲಿಯೇ ಇಂಜನಿರಿಂಗ್ ಕ್ಷೇತ್ರದಲ್ಲಿ ಗುರುತ್ತರವಾದ ಪಾತ್ರ ನಿರ್ವಹಣೆ ಮಾಡಲು ಮೋಕ್ಷಗುಂಡಂ ಸರ್ ರಂ ವಿಶ್ವೇಶ್ವರಯ್ಯನವರ ಸಹಕರಿಸಿದರು. ಇಂಜನಿರಿಂಗ್ ಕ್ಷೇತ್ರದಲ್ಲಿ ವಿಶ್ವ ಮಟ್ಟದಲ್ಲಿಯೇ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಸಪ್ಟಂಬರ್ 15 ರಂದು ಇಂಜನಿರಿಂಗ್ ದಿನ ಆಚರಿಸಲಾಗುತ್ತಿದೆ. ಬಹುಮುಖಿ ವ್ಯಕ್ತಿತ್ವ ಹೊಂದಿರುವ ಇವರ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳು ಅತ್ಯಾವಶಕವಾಗಿ ಅಧ್ಯಯನ ಮಾಡಲು ಮುಂದಾಗಬೇಕು. ಇವರ ಜೀವನ ಆದರ್ಶಪ್ರಾಯವಾಗಿದೆ. ಎಂದು ಸರ್ ಎಂ ವ್ಹಿಯವರ ಮಹತ್ತರವಾದ ಜೀವನದ ಘಟನೆಗಳನ್ನು ರವಿಕುಮಾರ ಪೂಜಾರ ತಿಳಿಸಿದರು. ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಎಂಕೆ ಪಾಟೀಲ. ಶಿಕ್ಷಕರು ಹಾಗೂ ವಿದ್ಯಾರ್ಥಿ ವೃಂದದವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here