ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ 158ನೇ ಜನ್ಮದಿನ ಇಂಜಿನಿಯರ್ಸ್ ಡೇ

0
18

ಸಿರುಗುಪ್ಪ :-

               ಜ್ಞಾನದ ಫಲವಾದ ಜ್ಞಾನವನ್ನು ಪರೋಪಕಾರಕ್ಕಾಗಿ ಬೆಳೆಸಿಕೊಳ್ಳುವುದರ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಲೋಕ ಶಿಕ್ಷಣ ನಿರ್ದೇಶನಾಲಯ ಸಾಕ್ಷರತಾ ಮಿಷನ್ ಪ್ರಾಧಿಕಾರದ ಸದಸ್ಯರು ಸಾಮಾಜಿಕ ಕಾರ್ಯಕರ್ತರಾದ ಎ ಅಬ್ದುಲ್ ನಬಿ ಅವರು ಹೇಳಿದರು.ತಾಲ್ಲೂಕು ಪಂಚಾಯತ ಅಕ್ಷರ ವಿಜಯ ಚೇಂಬರ್ ನಲ್ಲಿ ಶನಿವಾರ ಸರ್ ಮೋಕ್ಷ ಗೂಡಂ ವಿಶ್ವೇಶ್ವರಯ್ಯನವರ 158ನೇ ಜನ್ಮದಿನ ಇಂಜಿನಿಯರ್ಸ್ ಡೇ ಆಯೋಜಿಸಿದ ಅವರನ್ನು ಸ್ಮರಿಸಿ ನೆನಪಿಸಿ ಮಾತನಾಡಿದ ಅವರು ಕನ್ನಡ ನಾಡಿನ ಜನಪ್ರಿಯ ಹಾಗೂ ಭಾರತದ ಗಣ್ಯ ಅಭಿಯಂತರರು ಮೈಸೂರು ಸಂಸ್ಥಾನದ ದಿವಾನರೂ ಆಗಿದ್ದರು. ವಿಶ್ವತಾತ ಸರ್ ಎಂ. ವಿಶ್ವೇಶ್ವರಯ್ಯನವರು ಕೊಡುಗೆಗಳು ಅಪಾರ ಎಂದರು.
               ಸಾಕ್ಷರತಾ ಲೋಕ ಶಿಕ್ಷಣ ತಾಲ್ಲೂಕು ಸಂಯೋಜಕರಾದ ಜೆ ನಾಗೇಂದ್ರ ಗೌಡ ಮಾತನಾಡಿ ವಿಶ್ವೇಶ್ವರಯ್ಯನವರು ಕನ್ನಡ ಸಾಹಿತ್ಯ ಪರಿಷತ್ತು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಗಂಧದ ಎಣ್ಣೆ, ಸಾಬೂನು, ಕಾಗದ, ಚರ್ಮಹದ ಮಾಡುವ ಇನ್ನಿತರ ಕಾರ್ಖಾನೆಗಳನ್ನು ಮೈಸೂರು ಇಂಜಿನಿಯರ್ ವಿಶ್ವವಿದ್ಯಾಲಯ ಮಹಾರಾಜ ಕಾಲೇಜು ಕಡ್ಡಾಯವಾಗಿ ಪ್ರಾಥಮಿಕ ಶಿಕ್ಷಣ ಅತ್ಯುತ್ತಮ ತಾಂತ್ರಿಕ ನೈಪುಣ್ಯ ಪ್ರಾಮಾಣಿಕತೆ ವ್ಯಕ್ತಿ ಕಾನೂನು ಕನ್ನಂಬಾಡಿ ಅನೇಕ ಅವರ ಅಪಾರ ಕೊಡುಗೆಗಳು ಅವರು ನೀಡಿದ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿವರಿಸಿ ಹೇಳಿದರು.ಸ್ವಚ್ಛ ಭಾರತ ಶೌಚಾಲಯ ತಾಲ್ಲೂಕು ಸಂಯೋಜಕ ಪಿ.ರಂಜಾನ್ ಸಾಬ್, ಹೆಚ್.ಸುಧಾಕರ, ಸಾಕ್ಷರತಾ ಕಾರ್ಯಕರ್ತರು ಎ. ಮೊಹಮ್ಮದ್ ಇಬ್ರಾಹಿಂ, ಎ. ಮಹ್ಮದ್ ರಫಿ, ಎ. ಮೊಹಮ್ಮದ್ ನೌಷಾದ್ ಇತರರು ಇದ್ದರು.

LEAVE A REPLY

Please enter your comment!
Please enter your name here