ಸಸಿಗಳನ್ನು ನೆಟ್ಟು ಪರಿಸರ ಕಾಪಾಡಲು ಕರೆ

0
21

ಎಂ ಎನ್ ಕೋಟೆ
   ಪರಿಸರವನ್ನು ಉಳಿಸಬೇಕಾದರೆ ಎಲ್ಲರೂ ತಮ್ಮ ತಮ್ಮ ಮನೆಗಳ ಮುಂದೆ ಸಸಿಗಳನ್ನು ನೆಟ್ಟು ಪರಿಸರವನ್ನು ಕಾಪಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ನವ್ಯಬಾಬು ತಿಳಿಸಿದರು.

   ಗುಬ್ಬಿ ತಾಲ್ಲೂಕಿನ ಸೋಮಲಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಕಾಳಜಿಯನ್ನು ನಾವೆಲ್ಲರೂ ಅನುಸರಿಸಿ ಪ್ರತಿಯೊಬ್ಬರು ಒಂದೊಂದು ಗಿಡಮರಗಳನ್ನು ಬೆಳೆಸಬೇಕು. ಗಿಡ ಮರಗಳಿಂದ ಸುಂದರ ವಾತಾವರಣ ನಿರ್ಮಾಣವಾಗುತ್ತದೆ. ಗಿಡ ಮರಗಳನ್ನು ಉಳಿಸಿ ನಾಡು ಬೆಳೆಸಬೇಕು. ಜೊತೆಗೆ ಪ್ರತಿ ವರ್ಷವು ಕೂಡ ಜುಲೈ ತಿಂಗಳಿನಲ್ಲಿ ವನಮಹೋತ್ಸವವನ್ನು ಆಚರಣೆ ಮಾಡುತ್ತೇವೆ. ಮಳೆಗಾಲದಲ್ಲಿ ಗಿಡ ಮರಗಳು ಬೆಳೆದುಕೊಳ್ಳುವ ನಿಟ್ಟಿನಲ್ಲಿ ಪ್ರತಿ ವರ್ಷವು ಕೂಡ ಈ ಕಾಲದಲ್ಲಿ ವನ ಮಹೋತ್ಸವವನ್ನು ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಡುಗಳನ್ನು ಕಡಿಯುತ್ತಿದ್ದಾರೆ. ಕಾಡುಗಳಲ್ಲಿ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದ್ದರಿಂದ ಬರಗಾಲಕ್ಕೆ ತುತ್ತಾಗುತ್ತಿದ್ದಾರೆ. ಪ್ರತಿಯೊಬ್ಬರು ಸಹ ಗಿಡ ಮರಗಳನ್ನು ಬೆಳೆಸಿದರೆ ನಮ್ಮ ನಾಡು ಸುಂದರವಾಗಿ ಇರುತ್ತದೆ ಎಂದು ತಿಳಿಸಿದರು.

   ಈ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಉಮೇಶ್ , ಮುಖ್ಯ ಶಿಕ್ಷಕ ಶಾಂತರಾಜ್ , ಶಿಕ್ಷಕ ನಾಗೇಶ್ , ಮುಖಂಡರಾದ ದೊಡ್ಡಯ್ಯ ,ಉಮೇಶ್ ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here