ಸಾಗುವಳಿ ಹಕ್ಕುಪತ್ರ ಕೊಡಿಸಲು ಶಾಸಕರಲ್ಲಿ ಮನವಿ

0
22

ಮಧುಗಿರಿ:

ತಾಲ್ಲೂಕಿನ ಕಂಸಾನಹಳ್ಳಿಯ ಸ.ನಂ.322ರಲ್ಲಿ ಸಾಗುವಳಿ ಮಾಡುತ್ತಿರುವ ಹಾಗೂ ಮತ್ತಿತರರ ಗ್ರಾಮಗಳಲ್ಲಿನ ಜಮೀನುಗಳಿಗೆ ಹಕ್ಕು ಪತ್ರ ಮಂಜೂರು ಮಾಡಿಸಿಕೊಡುವಂತೆ ಶಾಸಕ ವೀರಭದ್ರಯ್ಯನವರಿಗೆ ಬುಧವಾರ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ತಾಲ್ಲೂಕು ಕಾರ್ಯದರ್ಶಿ ಹಂದ್ರಾಳು ನಾಗಭೂಷಣ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

      ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ನೇತೃತ್ವದಲ್ಲಿ ಕಳೆದೆರಡು ವರ್ಷಗಳಿಂದ ಸತತವಾಗಿ ಪ್ರಯತ್ನ ಶೀಲವಾಗಿದ್ದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು 18 ದಿನಗಳ ಕಾಲ ಬೆಂಗಳೂರಿನಲ್ಲಿ ಸತ್ಯಾಗ್ರಹ ನಡೆಸಿ ವಸತಿ ಮತ್ತು ಭೂಮಿ ವಂಚಿತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸರಕಾರದಿಂದ ಹಲವಾರು ಆದೇಶಗಳನ್ನು ಹೊರಡಿಸಲಾಗಿತ್ತು. ಉನ್ನತ ಮಟ್ಟದ ಸಮಿತಿಯ ತೀರ್ಮಾನದ ಅನುಸಾರವಾಗಿ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ.

      ತಾಲ್ಲೂಕಿನಲ್ಲಿಯೂ ಇಂತಹ ಸಮಸ್ಯೆಗಳು ಕಂಡು ಬಂದಿದ್ದು ಸ.ನಂ 322ರ ವ್ಯಾಪ್ತಿಯ ಸುಮಾರು 520 ಎಕರೆ ಜಮೀನಲ್ಲಿ ನೂರಾರು ಭೂ ಹೀನ ರೈತ ಕುಟುಂಬಗಳು ಸಾಗುವಳಿ ಮಾಡಿಕೊಂಡು 50-53ರ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಕಂದಾಯವನ್ನು ಕಟ್ಟಿದ್ದಾರೆ. ಆದರೆ ಇಲ್ಲಿಯವರೆವಿಗೂ ಭೂ ಮಂಜೂರಾತಿ ಸಮಿತಿಯ ವತಿಯಿಂದ ಹಾಗೂ ಅಧಿಕಾರಿಗಳಿಂದ ಸಮರ್ಪಕ ಉತ್ತರವಾಗಲಿ, ಬರಹ ರೂಪದಲ್ಲಾಗಲಿ ಮತ್ತು ಯಾವುದೇ ಕಾರಣವನ್ನಾಗಲಿ ನೀಡುತ್ತಿಲ್ಲ. ಸರಿಯಾಗಿ ಭೂಮಿಯ ಸರ್ವೆ ಕಾರ್ಯವಾಗಲಿ ನಡೆಸಿಲ್ಲ. ರೈತರು ಮಾತ್ರ ಕಚೇರಿಗೆ ಅಲೆದಾಡುವುದು ತಪ್ಪಿಲ್ಲ. ಆದ್ದರಿಂದ ತಾಲ್ಲೂಕಿನ ರೈತರ ಸಮಸ್ಯೆಯನ್ನು ಪರಿಹರಿಸುವಂತೆ ಮನವಿ ಮಾಡಿದ್ದಾರೆ.

      ಜಿಲ್ಲಾ ಕಾರ್ಯದರ್ಶಿ ರಾಜಣ್ಣ, ರಾಮಕೃಷ್ಣಪ್ಪ, ನಾಗರಾಜಪ್ಪ, ಶಿವಣ್ಣ, ಶಿವಲಿಂಗಯ್ಯ, ರಾಜಣ್ಣ, ಬಸಮ್ಮ, ಪಾರ್ವತಮ್ಮ, ಮುದ್ದಮ್ಮ ಹಾಗೂ ನೂರಾರು ರೈತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here