ಸಾಮಾಜಿಕ ಜಾಲತಾಣಗಳಿಂದ ಸದ್ಬಳಕೆಯಾಗಬೇಕೇ ವಿನಃ ದುರ್ಬಳಕೆಯಾಗಬಾರದು : ಶಾಸಕ

0
24

ಹರಪನಹಳ್ಳಿ:

      ಇಂದಿನ ಯುವ ಪೀಳಿಗೆಗಳು ಮೊಬೈಲ್‍ಗಳಲ್ಲಿ ವಾಟ್ಸ್‍ಪ್,ಫೇಸ್‍ಬುಕ್‍ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದು, ವಿಶ್ವವೇ ಅಂಗೈಯಲ್ಲಿ ಸಿಗುತ್ತಿದ್ದು ಇದರ ಸದ್ಬಳಕೆಯಾಗಬೇಕೆ ವಿನಹಃ ದುರ್ಬಳಕೆಯಾಗಬಾರದು ಎಂದು ಶಾಸಕ ಜಿ.ಕರುಣಾಕರರೆಡ್ಡಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

      ಪಟ್ಟಣದ ಎಸ್‍ಯುಜೆಎಂ ಕಾಲೇಜು ಆವರಣದಲ್ಲಿ ಶುಕ್ರವಾರ 2018-19ನೇ ಸಾಲಿನ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಸಂಘ, ಎನ್‍ಎಸ್‍ಎಸ್ ಘಟಕ, ನೂತನ ತರಗತಿ ಕೋಠಡಿ, ಶೌಚಾಲಯಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

      ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿಯವರೆಗೂ 130ಕೋಟಿಗೂ ಹೆಚ್ಚುಜನಸಂಖ್ಯೆ ಇದ್ದು, ಉದ್ಯೋಗ, ಆಹಾರದ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳು ಉದ್ಭವಿಸುತ್ತಿದ್ದು ಶಿಕ್ಷಣದಿಂದ ಸರಕಾರಿ ಉದ್ಯೋಗ ಅವಲಂಭಿತರಾಗದೆ ಸ್ವಯಂ ಉದ್ಯೋಗ ಸೃಷ್ಠಿ ಮಾಡಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.

     ಕೇವಲ ಅಂಕ ಪಡೆಯುವುದು ಸಾಧನೆಗೆ ಆದರೂ ಜತೆಗೆ ಬಾಹ್ಯ ಜ್ಞಾನ ಪಡೆದುಕೊಳ್ಳುವುದು ಮಕ್ಕಳು ಕೇವಲ ಪಠ್ಯ ಪುಸ್ತಕಗಳಿಗೆ ಸೀಮಿತರಾಗದೆ ನಿತ್ಯ ಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಿ ಎಂದರು.

      ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಎಚ್.ಕೆ.ಶೇಖರಪ್ಪ ಮಾತನಾಡಿ ವ್ಯಕ್ತಿಯ ಸಾಧನೆಗೆ ಶಿಸ್ತು, ತಂದೆ, ತಾಯಿ, ಗುರು ಹಿರಿಯರಿಂದ ಮಾರ್ಗದರ್ಶನ ಪಡೆಯಬೇಕು ಜತೆಯಲ್ಲಿ ಸಮಯದ ಪರಿಜ್ಞಾನವನ್ನು ಹೊಂದಬೇಕು ಗುರಿ ತಲುಪಲು ಶಿಸ್ತು, ಸಮಯ, ಮಾರ್ಗದರ್ಶನ ಮೈಗೂಡಿಸಿಕೊಂಡಾಗ ಮಾತ್ರ ಸಾಧನೆ ಮೂಲಕ ಪ್ರತಿಭೆವಂತರಾಗಿ ಹೊರಹೊಮ್ಮಬೇಕು ಎಂದು ಹೇಳಿದರು.

      ಜಾನಪದ ತಜ್ಞ ಹೊಸದುರ್ಗದ ಯುಗಧರ್ಮ ರಾಮಣ್ಣ ಮಾತನಾಡಿ ದೇಶಕ್ಕೆ ವಿದ್ಯೆಗಿಂತ ಬುದ್ದಿವಂತರು ಅಗತ್ಯವಿದ್ದು ಈ ನಿಟ್ಟಿನಲ್ಲಿ ಅಕ್ಷರ ಅಭ್ಯಾಸದ ವಿದ್ಯೆ ಒಂದೆಡೆಯಾದರೆ ಜ್ಞಾನದ ಬಂಡಾರ ಹೆಚ್ಚಿಸುಕೊಳ್ಳುವ ವಿದ್ವತ್ ಹೊಂದಬೇಕು ಎಂದರು.

      ಉಜ್ಜಯಿನಿಯ ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿ ಎಂ.ಎಂ.ಜೆ.ಹರ್ಷವರ್ಧನ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಹಿಂದುಳಿದ ತಾಲೂಕಿನಲ್ಲಿ ಶೈಕ್ಷಣಿಕ ಅಬಿವೃದ್ಧಿಗೆ ಉಜ್ಜಯಿನಿ ಕಾಲೇಜು ಕೊಡುಗೆ ಅಪಾರವಾಗಿದ್ದು ಇದರಿಂದ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ದಾಖಲಾಗುತ್ತಿದ್ದು ಜತೆಗೆ ರ್ಯಾಂಕ್‍ಗಳನ್ನು ಪಡೆಯುತ್ತಿದ್ದಾರೆ ಎಂದ ಅವರು ಕಾಲೇಜಿಗೆ ಸಭಾಂಗಣದ ಸಮುದಾಯ ಭವನ ನಿರ್ಮಾಣಕ್ಕಾಗಿ ಶಾಸಕರ ಅನುದಾನದಲ್ಲಿ ರೂ.20ಲಕ್ಷ ಮಂಜೂರು ಮಾಡಿಕೊಡಬೇಕು ಎಂದು ಶಾಸಕರಿಗೆ ಬಿನ್ನವತ್ತಳಿಯನ್ನು ಸಲ್ಲಿಸಿದರು.

      2017-18ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಕೆ.ದೀಪಾ, ಉಳ್ಳಾಗಡ್ಡಿ ಹಾಲಮ್ಮ, ದಂಡೆಪ್ಪರ ಅನಿಲಕುಮಾರ ಹಾಗೂ ವಿವಿಧ ವಿಷಯಗಳಲ್ಲಿ ಶೇ.100 ಅಂಕಗಳನ್ನು ಪಡೆದ ವಿದ್ಯರ್ಥಿಗಳಿಗೆ ಸನ್ಮಾನಿಸಿ ಪುರಸ್ಕರಿಸಲಾಯಿತು.

      ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹೆಚ್.ಕೆ.ಹಾಲೇಶ್, ಕಾಲೇಜು ಪ್ರಾಂಶುಪಾಲ ಎಲ್.ಕೃಷ್ಣಸಿಂಗ್, ಕೊಟ್ಟೂರು ಕಾಲೇಜಿನ ದ್ವಾರಕೀಶ್, ರುದ್ರಯ್ಯ, ಬಿಜೆಪಿ ಮುಖಂಡರಾದ ಎಂ.ಪಿ.ನಾಯ್ಕ, ಬಾಗಳಿಕೊಟ್ರೇಶ್‍ಪ್ಪ, ಹೆಚ್.ಮಲ್ಲಿಕಾರ್ಜುನ, ಭದ್ರಶೆಟ್ಟಿ, ಚನ್ನಬಸಪ್ಪ, ಚಿಕ್ಕಪ್ರಸಾದ, ಅಶೋಕ, ಕೃಷ್ಣಮೂರ್ತಿ, ಸೋಮರೆಡ್ಡಿ, ಸೇರಿದಂತೆ ಕಾಲೇಜಿನ ಸಿಬ್ಬಂದಿವರ್ಗದವರು ಇದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here