ಸಾರ್ವಜನಿಕರಿಗೆ ಕಡಿಮೆ ಧರದಲ್ಲಿ ಶಸ್ತ್ರಚಿಕಿತ್ಸೆ ಮಾಡಬೇಕು-ಡಾ|| ನಂದನ್‍ಕುಮಾರ್

0
20

ಜಗಳೂರು:

               ಜನರಿಗೆ ಸೇವೆ ಮಾಡುವ ಉದ್ದೇಶದಿಂದ ಹಿಂದುಳಿದ ಜಗಳೂರು ತಾಲ್ಲೂಕಿನಲ್ಲಿ ಎನ್. ನಿಂಗಪ್ಪರವರು ಸುಸಜ್ಜಿತವಾಗಿ ನಿರ್ಮಲ ನರ್ಸಿಂಗ್ ಹೋಂ ಆಸ್ಪತ್ರೆ ಪ್ರಾಂರಭಿಸಿದ್ದು ಸಂತಸ ತಂದಿದ್ದು, ಸಾರ್ವಜನಿಕರಿಗೆ ಕಡಿಮೆ ಧರದಲ್ಲಿ ಶಸ್ತ್ರಚಿಕಿತ್ಸೆ ಮಾಡಬೇಕೆಂದು ದಾವಣಗೆರೆಯ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯ ಹಿರಿಯ ವೈದ್ಯರಾದ ನಂದನ್‍ಕುಮಾರ್ ಹೇಳಿದರು.

                ಪಟ್ಟಣದಲ್ಲಿ ಭಾನುವಾರ ನಿರ್ಮಲ ನಸಿಂಗ್ ಹೋಂ ಜಗಳೂರು ಹಾಗೂ ಲಯನ್ಸ್ ಕ್ಲಭ್ ವಿದ್ಯಾನಗರ ದಾವಣಗೆರೆ ಇವರುಗಳ  ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಭಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

                 ಈ ಆಸ್ಪತ್ರೆಯಲ್ಲಿ ಎಲ್ಲಾ ವಿಭಾಗದ ತಜ್ಞ ವೈದ್ಯರುಗಳನ್ನು ಕರೆಯಿಸಿ ಇಲ್ಲಿನ ಇಲ್ಲಿನ ನಾಗರೀಕರಿಗೆ ಉತ್ತಮವಾದ ,ಕಡಿಮೆ ಧರದ ಚಿಕಿತ್ಸೆ ನೀಡಿ ರೋಗಿಗಳಿಗೆ ಗುಣಮುಖರಾಗಿ ಮಾಡುವಂತ ಕೆಲಸ ಆಗಬೇಕಿದೆ ಎಂದವರು ಹೇಳಿದರು.

                  ನಿರ್ಮಲ ನರ್ಸಿಂಗ್ ಹೋಂ ಆಸ್ಪತ್ರೆಯ ವ್ಯವಸ್ಥಾಪಕ ಎನ್.ನಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಾನು ಜಗಳೂರು ತಾಲ್ಲೂಕಿವನಾಗಿದ್ದು ಜನರಿಗೆ ಸೇವೆ ಮಾಡಬೇಕೆಂಬ ಉದ್ದೇಶದಿಂದ ಸುಸಜ್ಜಿತವಾದ ಆಸ್ಪತ್ರೆಯನ್ನು ಪ್ರಾರಂಭಿಸಿದ್ದೇನೆ.30 ವರ್ಷಗಳ ಹಿಂದೆಯೆ ಆಸ್ಪತ್ರೆಯ ಕಟ್ಟಲು ಕನಸು ಕಂಡಿದ್ದೆ, ಆ ಆಸೆ ಈಗ ಹೀಡೇರಿದೆ. ಎಲ್ಲಾ ವಿಭಾಗದ ತಜ್ಞ ವೈದ್ಯರನ್ನು ಹೊರಗಡೆಯಿಂದ ಕರೆಯಿಸಿ, ನಾಗರೀಕರ ಸೇವೆ ಸಲ್ಲಿಸಲು ಪ್ರಯತ್ನಿಸುತ್ತೇನೆ. ನಮ್ಮದು ಸೇವೆಯಾಗಿದ್ದು ,ಜನತೆಯ ಜನರ ಸಹಕಾರ ಮುಖ್ಯವಾಗಿದೆ ಎಂದವರು ತಿಳಿಸಿದರು.

                  ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಚಿತ್ರದುರ್ಗ ಮುಖ್ಯಸ್ಥರಾದ ಡಾ|| ಮಂಜುನಾಥಗೌ ಜಿ, ಕೀಲು ಮೂಳೆ ತಜ್ಞರಾದ ಡಾ|| ಮಲ್ಲಿಕಾರ್ಜುನ್ ರೆಡ್ಡಿ ನೇತೃತ್ವದ ವಿವಿಧ ವಿಭಾಗದ ವೈದ್ಯಕೀಯ ತಂಡ ನೂರಾರು ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿಕೊಟ್ಟಿತು.ಈ ಸಂದರ್ಭದಲ್ಲಿ ಕೀಲು ಮೂಳೆ ತಜ್ಞರಾದ ಡಾ|| ಮಲ್ಲಿಕಾರ್ಜುನ್ ರೆಡ್ಡಿ, ಹೆರೆಗೆ ಮತ್ತು ಸ್ರೀ ರೋಗ ತಜ್ಞರಾದ ಡಾ|| ಲಕ್ಷ್ಮೀದೇವಿ, ದಂತ ವೈದ್ಯರಾದ ಡಾ|| ಪ್ರಸನ್ನಕುಮಾರ್, ಸರ್ಜನ್ ವಿಭಾಗದ ಡಾ|| ಜಮೀರ್, ಸಲಹಾ ವೈದ್ಯರಾದ ಡಾ|| ಶಂಕರ್, ಜಗನಾಥ್ ಸೇರಿದಂತೆ ನಿರ್ಮಲ ನರ್ಸಿಂಗ್ ಹೋಂ ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here