ಸಾರ್ವಜನಿಕ ಸಹಭಾಗಿತ್ವಕ್ಕೆ ಭದ್ರ ಬುನಾದಿ: ಜಿ.ಬಿ.ಜ್ಯೋತಿಗಣೇಶ್

0
35

ತುಮಕೂರು:

      ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುದಾನದ ಅಪವ್ಯಯ ತಡೆಗಟ್ಟಲು, ನಗರದ ಜನತೆಯ ತೆರಿಗೆ ಹಣ ಅನಗತ್ಯ ಯೋಜನೆಗಳಿಗೆ ಪೋಲಾಗದಂತೆ ತಡೆಯಲು ಹಾಗೂ ನಗರದ ಸಮಗ್ರ ಅಭಿವೃದ್ಧಿಗೆ ಎಲ್ಲಾ ‘ಇಲಾಖೆಗಳ ಸಂಯೋಜಕ(ಕೋ ಆರ್ಡಿನೇಟರ್) ಕೇಂದ್ರ’ವಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸಹಭಾಗಿತ್ವಕ್ಕೆ ಭದ್ರ ಬುನಾದಿ ಹಾಕಲು ‘ತುಮಕೂರು ನಗರ ವಿಧಾನಸಭಾ ಕ್ಷೇತ್ರ ಅಧ್ಯಯನ ಕೇಂದ್ರ’ವನ್ನು ಆರಂಭಿಸಲಾಗಿದೆ ಎಂದು ನಗರ ಶಾಸಕ ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರ ಅಧ್ಯಯನ ಕೇಂದ್ರದ ಅಧ್ಯಕ್ಷ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

      ತುಮಕೂರು ನಗರ ವಿಧಾನಸಭಾ ಕ್ಷೇತ್ರ ಅಧ್ಯಯನ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ತುಮಕೂರು ನಗರ ವಿಧಾನಸಭಾ ಕ್ಷೇತ್ರ ಅಧ್ಯಯನ ಕೇಂದ್ರದ ಪ್ರಥಮ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತುಮಕೂರು ಸ್ಮಾರ್ಟ್‍ಸಿಟಿ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಸೇರಿದಂತೆ ನಗರದಲ್ಲಿ ಅನುಷ್ಠಾನವಾಗುವ ಪ್ರತಿಯೊಂದು ಯೋಜನೆಗೂ ದೂರದೃಷ್ಟಿಯ ಅಗತ್ಯವಿದ್ದು, ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಸಾಕಾರಗೊಳಿಸಲು ಸಾರ್ವಜನಿಕರು, ಸಂಘಸಂಸ್ಥೆಗಳನ್ನೊಳಗೊಂಡ ‘ವಿಷನ್ ಗ್ರೂಪ್’ ಮತ್ತು ಯೋಜನೆಗಳ ಜಾರಿ ಮೇಲೆ ನಿಗಾ ಇಡಲು, ಒತ್ತಡ ಹೇರಲು ‘ಪ್ರಷರ್ ಗ್ರೂಪ್’ ರಚಿಸಲು ಮುಂದಾಗಿದ್ದೇವೆ ಎಂದರು.

      ನಗರದ ಸಂಘ ಸಂಸ್ಥೆಗಳ ಮತ್ತು ನಾಗರೀಕರಿಂದ ಘೋಷಣೆ: ಪ್ರಥಮ ಸರ್ವಸದಸ್ಯರ ಸಭೆಯಲ್ಲಿ 25 ವಿಷನ್ ಗ್ರೂಪ್‍ನ ಪದಾಧಿಕಾರಿಗಳು ಹಾಜರಿದ್ದರು. ಇವರು, “ಭಾರತ ದೇಶದ 100 ಸ್ಮಾರ್ಟ್ ಸಿಟಿಗಳಲ್ಲಿ ತುಮಕೂರು ನಗರವನ್ನು ನಂ-1 ಸ್ಮಾರ್ಟ್ ಸಿಟಿ, ತಂಪು ನಗರ, ಹಸಿರು ನಗರ ಮತ್ತು ಸ್ವಚ್ಚ ನಗರ ಮಾಡಲು ತುಮಕೂರು ನಗರ ಕ್ಷೇತ್ರದ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರೊಂದಿಗೆ ಪ್ರಾಮಾಣಿಕವಾಗಿ, ಅವಿರತವಾಗಿ, ಪಾರದರ್ಶಕತೆಯಿಂದ ಇಲಾಖಾ ಅಧಿಕಾರಿಗಳು ಮತ್ತು ನಗರದ ಸರ್ವಪಕ್ಷಗಳ ಸಹಕಾರದೊಂದಿಗೆ ಶ್ರಮಿಸುತ್ತೇವೆ ಎಂದು ಸ್ವಚ್ಚ-ತುಮಕೂರು ಅಂಬಾಸಿಡರ್ ಆದ ಸಿದ್ಧಗಂಗಾ ಶ್ರೀಗಳಾದ ಡಾ.ಶ್ರೀ. ಶ್ರೀ ಶಿವಕುಮಾರಮಹಾಸ್ವಾಮಿಜಿಗಳ ಪಾದಾರವಿಂದಗಳಲ್ಲಿ ಪೊಡ ಮಡುತ್ತಾ ಪ್ರಮಾಣ ಮಾಡುತ್ತೇವೆ” ಎಂಬ ಘೋಷಣೆಯನ್ನು ಟಿ.ಆರ್ ರಘೋತ್ತಮರಾವ್ ಬೋಧಿಸಿದರು. ಭಾಗವಹಿಸಿದ್ದ ನಗರದ ಸಂಘ ಸಂಸ್ಥೆಗಳ ಮತ್ತು ನಾಗರೀಕರ ಪ್ರಮಾಣ ಮಾಡಿದರು.

ಉಪ ಸಮಿತಿ ರಚನೆ:

      ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಪ್ರಕಟಿಸಿರುವ ಜನತೆಯ ವಿಷನ್ ಡಾಕ್ಯುಮೆಂಟ್-2025 ನಲ್ಲಿರುವ ಕೆಳಕಂಡ ಅಂಶಗಳ ಬಗ್ಗೆ ವಿವರವಾದ ವರದಿ ನೀಡಲು ಈ ಕೆಳಕಂಡ ಉಪಸಮಿತಿಗಳನ್ನು ರಚಿಸಲಾಯಿತು.
ತುಮಕೂರು ಸ್ಮಾಟ್ ಸಿಟಿ ವಿಷನ್-2025 ಉಪಸಮಿತಿ: ಶ್ರೀ ಟಿ.ಆರ್.ರಘೋತ್ತಮರಾವ್ ಅಧ್ಯಕ್ಷತೆಯಲ್ಲಿ 9 ಜನರ ಸಮಿತಿ.
ವಿಷನ್ ಗ್ರೂಪ್ ಮತ್ತು ಪ್ರಷರ್ ಗ್ರೂಪ್ ರಚನೆ & ಪಧಾಧಿಕಾರಿಗಳಿಗೆ ಕಾರ್ಯಾಗಾರ ಉಪಸಮಿತಿ: ಡಾ.ಸುರೇಶ್ ಡಿ.ಎಸ್ ಅಧ್ಯಕ್ಷತೆಯಲ್ಲಿ 9 ಜನರ ಸಮಿತಿ.

      ಇಂಟರ್ ಡಿಪಾರ್ಟ್‍ಮೆಂಟಲ್ ಉಪಸಮಿತಿ: ರಾಮಮೂರ್ತಿ ಅಧ್ಯಕ್ಷತೆಯಲ್ಲಿ 9 ಜನರ ಸಮಿತಿ.
ಜಿ.ಐ.ಎಸ್ ಉಪಸಮಿತಿ: ಬಸವರಾಜ್ ಸುರಣಗಿ ಅಧ್ಯಕ್ಷತೆಯಲ್ಲಿ 9 ಜನರ ಸಮಿತಿ.
ಅಭಿವೃದ್ಧಿ ಪತ್ತಿನ ಸಹಕಾರ ಸಂಘ ಸ್ಥಾಪನೆ ಉಪ ಸಮಿತಿ: ಕೊಪ್ಪಳ್ ನಾಗರಾಜು ಅಧ್ಯಕ್ಷತೆಯಲ್ಲಿ 9 ಜನರ ಸಮಿತಿ.

ಕಾರ್ಯಕ್ರಮ ಉಪಸಮಿತಿ: ಉಮೇಶ್ ಅಧ್ಯಕ್ಷತೆಯಲ್ಲಿ 9 ಜನರ ಸಮಿತಿ.
ಜನಜಾಗೃತಿ ಉಪಸಮಿತಿ:- ಗುರುಪ್ರಸಾದ್ ಅಧ್ಯಕ್ಷತೆಯಲ್ಲಿ 9 ಜನರ ಸಮಿತಿ.
ಸಭೆಯಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಧ್ಯಯನ ಕೇಂದ್ರದ ಸಿ.ಇ.ಓ ಕುಂದರನಹಳ್ಳಿ ರಮೇಶ್, ಗಂಗಾಧರ್ ಕೊಡ್ಲಿಯವರ್, ರಾಮಮೂರ್ತಿ, ಸತ್ಯಾನಂದ್, ಕೊಪ್ಪಳ್ ನಾಗರಾಜು, ಶಶಿಧರ್, ರಾಜಶೇಖರ್, ಪ್ರಮೋದ್, ಸುಖಾಂತ್, ಲಿಂಗಪ್ಪ, ಶಂಕರ್, ಉಮೇಶ್, ರವಿಗೌಡ, ಗುರುಪ್ರಸಾದ್, ಚಂದ್ರಪ್ಪ, ಜಗದೀಶ್, ಚಂದ್ರಮೋಹನ್, ಹನುಮಂತರಾಜು, ಜಿ.ಕೆ.ಶ್ರೀನಿವಾಸ್, ರಕ್ಷಿತ್, ಉರುಜ್ ಪಾಷಾ, ಮಧು, ಇನ್ನೂ ಮುಂತಾದವರು ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದರು.

LEAVE A REPLY

Please enter your comment!
Please enter your name here