ಸಾಲಕ್ಕಾಗಿ ಸಾಲುಗಟ್ಟಿ ನಿಂತ ರೈತರು

0
21

ತಿಪಟೂರು:

  ಹೊನ್ನವಳ್ಳಿ ರೈತರ ಸೇವಾ ಸಹಕಾರ ಸಂಘ ನಿಯಮಿತ ಹೊನ್ನವಳ್ಳಿ ಇಲ್ಲಿ ಸುಮಾರು ಒಂದೂವರೆ ತಿಂಗಳಿಂದ ಸಂಘದ ಸಿಬ್ಬಂದಿ ವರ್ಗ ಜನರನ್ನು (ರೈತರನ್ನು ) ನಿಯಂತ್ರಿಸಲು ಹರಸಾಹಸ ಪಡುತ್ತಿದ್ದ ಇದು ಮುಗಿಯದ ಕಥೆ ಎಂಬಂತೆ ಕಾಣುತ್ತಿದೆ.

      ರೈತರು ಸುತ್ತ ಮುತ್ತಲಿನ ಗ್ರಾಮದ ರೈತರು ಈಗ್ಗೆ ದೂರದ ಊರುಗಳಿಂದ ಬಂದು ಬ್ಯಾಂಕಿನ ಆವರಣದಲ್ಲಿ ಚಾಪೆ ಹಾಸಿಕೊಂಡು ತಲೆದಿಂಬು ಹಾಕಿಕೊಂಡು ಬೆಡ್‍ಶೀಟ್ ಹೊದ್ದುಕೊಂಡು ಸಿಬ್ಬಂದಿ ಬರುವ ವೇಳೆಗೆ ಸಾಲು ಸಾಲಾಗಿ ನಿಂತು ಸಾಲ ಪಡೆಯಲು ಮುಗಿಬೀಳುತ್ತಿದ್ದಾರೆ. ಸ್ಥಳೀಯ ಜನರು ಹಳ್ಳಿ ಜನರು ಬರುತ್ತಿರುವುದನ್ನು ನೋಡಿ ಸ್ಥಳೀಯ ಹೊನ್ನಹಳ್ಳಿ ಜನರು ಬೆಳಿಗ್ಗೆ 6 ಗಂಟೆಗೆ ಬ್ಯಾಂಕ್ ಹತ್ತಿರ ಬಂದು ಹಳ್ಳಿಗಳಿಂದ ಬಂದ ರೈತರು ಇಷ್ಟೊಂದು ಜನರಿದ್ದಾರೆ.

      ಇವತ್ತು ರಾತ್ರಿಯಾಗುತ್ತೆ, ನಾವುಗಳು ಯಾವಾಗ ಸಾಲ ಪಡೆಯುವುದು ಎಂದುಕೊಂಡು ವಾಪಸ್ ಆಗುತ್ತಿದ್ದಾರೆ. ಹೊನ್ನವಳ್ಳಿಯಲ್ಲಿ ಮೂರು ಬ್ಯಾಂಕ್‍ಗಳಿವೆ 1) ಕರ್ನಾಟಕ ಬ್ಯಾಂಕ್ 2) ಕಾವೇರಿ ಗ್ರಾಮೀಣಬ್ಯಾಂಕ್ 3) ರೈತ ಸೇವಾ ಸಹಕಾರಿ ಸಂಘ ನಿಯಮಿತ ಇದರಲ್ಲಿ ರೈತ ಸೇವಾ ಸಹಕಾರಿ ಸಂಘ ನಿಯಮಿತ ಬ್ಯಾಂಕಿಗೆ ರೈತರು ಮುಗಿಬಿದ್ದು ಎದ್ದೇ ಬಿದ್ದೇ ಎಂದು ಸಾಲ ಪಡೆಯುತ್ತಿದ್ದಾರೆ. ಇದರ ಅರ್ಥ ನೋಡಿದರೆ ಸರ್ಕಾರ ಸಾಲ ಮನ್ನಾ ಮಾಡುವುದರಿಂದ ನಮ್ಮದು ಮನ್ನಾ ಆಗಲಿ, ನಾವು ತೆಗೆದುಕೊಳ್ಳೋಣ ಎಂದು ಬರುವವರ ಸಂಖ್ಯೆಯೇ ಹೆಚ್ಚಾಗಿ ಕಂಡು ಬರುತ್ತಿದೆ.

LEAVE A REPLY

Please enter your comment!
Please enter your name here